ಕ್ಯಾಡ್ಬರಿಸ್ ಹಿಡಿದ ಧರ್ಮ ಕೀರ್ತಿರಾಜ್
Team Udayavani, Oct 26, 2020, 8:10 AM IST
ಕೋವಿಡ್ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ, ನಟ ಧರ್ಮ ಕೀರ್ತಿರಾಜ್ ಹೊಸ ಲುಕ್‌ನಲ್ಲಿ, ಕೈಯಲ್ಲಿ “ಕ್ಯಾಡ್ಬರಿಸ್’ ಹಿಡಿದು ತೆರೆಮೇಲೆ ಬರುತ್ತಿದ್ದಾರೆ. ಹೌದು, ಧರ್ಮ ಕೀರ್ತಿರಾಜ್ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ಕ್ಯಾಡ್ಬರಿಸ್’ ಅಂತ ಹೆಸರಿಡಲಾಗಿದ್ದು, ಇದೀಗ ಚಿತ್ರತಂಡ ಚಿತ್ರದ ಟೈಟಲ್ ಅನೌನ್ಸ್ ಮಾಡಿದೆ.
ಹೊಸ ಪಾತ್ರದ ನಿರೀಕ್ಷೆಯಲ್ಲಿ ಧರ್ಮ : ಅಂದಹಾಗೆ, ಕೋವಿಡ್ ಲಾಕ್‌ಡೌನ್ ಸಮಯದಲ್ಲೇ “ಕ್ಯಾಡ್ಬರಿಸ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿದ್ದ ಚಿತ್ರತಂಡ, ಈಗ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದು ಜೊತೆಗೆ, ಫಸ್ಟ್‌ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. “ಕನಸು ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಕ್ಯಾಡ್ಬರಿಸ್’ ಚಿತ್ರಕ್ಕೆ ಶ್ರೀಮತಿ ಶೈಲಜಾ ಶಿವರಾಜ್ ಬಂಡವಾಳ ಹೂಡಿನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಮೇಶ್ ಯಾದವ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಜಾಣಗೆರೆ ಶಿವರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಸದ್ಯ “ಕ್ಯಾಡ್ಬರಿಸ್’ ಚಿತ್ರಕ್ಕೆ ನಾಯಕಿ, ಇತರ ಕಲಾವಿದರು ಮತ್ತು ತಂತ್ರಜ್ಞರ ಅಂತಿಮ ಆಯ್ಕೆಯಲ್ಲಿರುವ ಚಿತ್ರತಂಡ, ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣಕ್ಕೆ ಹೊರಡುವ ಯೋಜನೆಯಲ್ಲಿದೆ. ಒಟ್ಟಾರೆ, ಕೋವಿಡ್ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ, ನಿಧಾನವಾಗಿ ಒಂದರ ಹಿಂದೊಂದು ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿದೆ. ಈಗ
ಧರ್ಮ ಕೀರ್ತಿರಾಜ್ ಅಭಿನಯದ ಹೊಸಚಿತ್ರ “ಕ್ಯಾಡ್ಬರಿಸ್’ ಟೈಟಲ್ ಕೂಡ ಅನೌನ್ಸ್ ಆಗಿದ್ದು, “ಕ್ಯಾಡ್ಬರಿಸ್’ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.
ಸೆನ್ಸಾರ್ ಮುಂದೆ ಬ್ಲಾಂಕ್ : ಫೆಲಿಸಿಟಿ ಫಿಲಂಸ್ ಲಾಂಛನದಲ್ಲಿ ಎನ್ ಪಿ ಮಂಜುನಾಥ್ ಪ್ರಸನ್ನ ಅವರು ನಿರ್ಮಿಸಿರುವ “ಬ್ಲಾಂಕ್’ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಲಿದೆ.ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.ಎಸ್ ಜಯ್ ಈ ಚಿತ್ರದ ನಿರ್ದೇಶಕರು.
ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಆಡಿಯೋ ರಿಲೀಸ್ ಅಗಲಿದೆ. ಎಸ್ ಜಯ್, ಅಂಬರೀಶ್ ಪತ್ತಾರ್ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ಜೆ.ಪಿ.ಮ್ಯಾನ್ ಛಾಯಾಗ್ರಹಣ, ಶ್ರೀಶಾಸ್ತ ಸಂಗೀತ ನಿರ್ದೇಶನ, ಅಶೋಕ್ ಸಾಹಸ ನಿರ್ದೇಶನ ಹಾಗೂ ವಿಜಯ್ ಅವರ ನೃತ್ಯ ನಿರ್ದೇಶನ “ಬ್ಲಾಂಕ್’ ಚಿತ್ರಕ್ಕಿದೆ.ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.