ಸೀಜರ್‌ನ ರಿವೆಂಜ್ ಸ್ಟೋರಿ
Team Udayavani, Apr 13, 2018, 7:30 AM IST
ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ “ಸೀಜರ್’ ಚಿತ್ರ ಈ ವಾರ ತೆರೆಕಾಣುತ್ತಿದೆ. ಹಾಗೆ ನೋಡಿದರೆ ಈ ಚಿತ್ರ ಯಾವತ್ತೋ ಬಿಡುಗಡೆಯಾಗಬೇಕಿತ್ತು. ಸಾಕಷ್ಟು ಎಡರು ತೊಡರುಗಳನ್ನು ಎದುರಿಸಿಕೊಂಡು ಬಂದ “ಸೀಜರ್’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ವಿನಯ್ ಕೃಷ್ಣ ಈ ಸಿನಿಮಾದ ನಿರ್ದೇಶಕರು. ತ್ರಿವಿಕ್ರಮ್ ನಿರ್ಮಾಣದ ಈ ಚಿತ್ರದಲ್ಲಿ ಪಾರುಲ್ ಯಾದವ್ ನಾಯಕಿ.
ನಿರ್ದೇಶಕ ವಿನಯ್ ಕೃಷ್ಣ ಕಾರು ಸೀಜ್ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. “ಚಿತ್ರದ ಕಥೆ ತುಂಬಾ ವಿಭಿನ್ನವಾಗಿದೆ. ಈ ತರಹದ ಸಬೆjಕ್ಟ್ ಎಲ್ಲೂ ಬಂದಿಲ್ಲ. ಹಾಗಾಗಿ, ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ಆರಂಭದಲ್ಲಿ ಚಿಕ್ಕದಾಗಿ
ಆರಂಭಗೊಂಡ ಈ ಸಿನಿಮಾದಲ್ಲಿ ನಂತರ ದೊಡ್ಡ ದೊಡ್ಡ ನಟರು ಸೇರಿಕೊಂಡರು.
ರವಿಚಂದ್ರನ್, ಪ್ರಕಾಶ್ ರೈ … ಹೀಗೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ಸೀಜರ್ ವೃತ್ತಿಗೆ ಯಾಕೆ ಬರುತ್ತಾನೆಂಬುದು ತುಂಬಾ ಕುತೂಹಲಕರವಾಗಿದೆ’ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, ಚಿತ್ರ ಕನ್ನಡವಷ್ಟೇ ಅಲ್ಲದೇ, ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆಯಂತೆ. ಇನ್ನು, ಚಿತ್ರದ ಪ್ರಚಾರದಿಂದ ದೂರ ಉಳಿದ ನಾಯಕಿ ಪಾರುಲ್ ಯಾದವ್ ಮೇಲೂ ನಿರ್ದೇಶಕ ವಿನಯ್ ಕೃಷ್ಣ ಗರಂ ಆಗಿದ್ದಾರೆ. “ಚಿತ್ರದ ಪ್ರಚಾರಕ್ಕೆ ಫೋನ್ ಮಾಡಿದರೆ ನಾಟ್ ರೀಚಬಲ್. ಅವರಿಗೆ ನಮ್ಮ ಕಡೆಯಿಂದ ಒಂದೆರಡು ಲಕ್ಷ ಸಂಭಾವನೆ ಬಾಕಿ ಇತ್ತು ನಿಜ. ಅದನ್ನು ಕೊಡಲೆಂದು ಅವರಿದ್ದ ಹೋಟೆಲ್‌ಗೆ ಹೋಗಿ ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ.
ಹೀಗಾದರೆ ನಾವೇನು ಮಾಡೋಕ್ಕಾಗುತ್ತೆ. ಚಿತ್ರದ ಪ್ರಮೋಶನ್‌ಗೆ ಪ್ರತಿ ಬಾರಿಯೂ ಕರೆಯುತ್ತಲೇ ಇದ್ದೇವೆ. ಆರಂಭದಲ್ಲಿ ಏನೇನೋ ಬೇರೆ ಕಾರಣ ಹೇಳುತ್ತಿದ್ದ ಪಾರುಲ್, ಈಗ ಚಿತ್ರತಂಡದವರು ಸಂಭಾವನೆ ಬಾಕಿ ಉಳಿಸಿಕೊಂಡಿದ್ದಾರೆನ್ನುತ್ತಾ ಪ್ರಚಾರದಿಂದ ದೂರ
ಉಳಿಯುತ್ತಿದ್ದಾರೆ’ ಎಂಬುದು ವಿನಯ್ ಕೃಷ್ಣ ಮಾತು.
ನಿರ್ಮಾಪಕ ತ್ರಿವಿಕ್ರಮ ಅವರಿಗೆ “ಪರಿ’ ನಂತರ ಒಳ್ಳೆಯ ಸಿನಿಮಾವೊಂದನ್ನು ಮಾಡಬೇಕೆಂದು ಕಥೆಗಾಗಿ ಹುಡುಕುತ್ತಿದ್ದರಂತೆ. ಆಗ ಸಿಕ್ಕಿದ್ದೇ “ಸೀಜರ್’. “ಕನ್ನಡ ಚಿತ್ರರಂಗದಲ್ಲಿ ಒಂದು ಗುಣಮಟ್ಟದ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದು “ಸೀಜರ್’ ಮೂಲಕ ಈಡೇರಿದೆ. ಸೌಂಡಿಂಗ್‌ನಿಂದ ಹಿಡಿದು ಯಾವ ವಿಚಾರದಲ್ಲೂ ನಾವು ರಾಜಿಯಾಗಿಲ್ಲ’ ಎನ್ನುವುದು ತ್ರಿವಿಕ್ರಮ್ ಮಾತು. ಚಿತ್ರದಲ್ಲಿ ನಟಿಸಿರುವ ಚಿರುಗೆ “ಸೀಜರ್’ ಚಿತ್ರದ ಪಾತ್ರ ತುಂಬಾ ಹೊಸದಾಗಿದೆಯಂತೆ. ಮೊದಲ ಬಾರಿಗೆ ನೆಗೆಟಿವ್ ಶೇಡ್‌ನಲ್ಲಿ ನಟಿಸಿರುವ ಅವರಿಗೆ ಈ ಚಿತ್ರ ಹೊಸ ಇಮೇಜ್ ಕೊಡುವ ವಿಶ್ವಾಸವಿದೆ. “ಸಿನಿಮಾ ನೋಡಿದಾಗ ನಮಗೆ ಈ ಚಿತ್ರದ ಬಗ್ಗೆ ವಿಶ್ವಾಸ ಬಂದು ಇತರ ಭಾಷೆಗೂ ನಾವೇ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ರಿವೆಂಜ್ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ’
ಎಂಬುದು ಚಿರು ಮಾತು. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು, ಚಿತ್ರದ ಹಾಡುಗಳ ಹಾಗೂ ಹಿನ್ನೆಲೆ ಸಂಗೀತದ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.