ಚಡ್ಡಿದೋಸ್ತ್ ಅಸಲಿ ಆಟ ಶುರು: ಇಂದು ತೆರೆಗೆ
Team Udayavani, Sep 17, 2021, 12:08 PM IST
“ಚಡ್ಡಿದೋಸ್ತ್’ ಅಂದಮೇಲೆ ಅಲ್ಲೊಂದಿಷ್ಟು ನೋವು-ನಲಿವು, ಮುದ್ದಾಟ- ಗುದ್ದಾಟ, ತಂಟೆ, ತರಲೆ, ತಕರಾರು ಎಲ್ಲವೂ ಇರಬೇಕು. ಹಾಗಿದ್ದರೇನೆ, ಆ ದೋಸ್ತಿ ಗೊಂದು ಅರ್ಥ! ಇಂಥದ್ದೇ “ಚಡ್ಡಿದೋಸ್ತ್’ಗಳ ನಡುವೆ ಒಬ್ಬಳು ಹುಡುಗಿ, ಮತ್ತೂಬ್ಬ ಖಡಕ್ ವಿಲನ್ ಎಂಟ್ರಿಯಾದ್ರೆ ಆ ದೋಸ್ತಿಯಲ್ಲಿ ಏನೆಲ್ಲ ಆಗಬಹುದು. ಅನ್ನೋ ಫನ್ ಕಹಾನಿ ” ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ಇಂದು ತೆರೆಗೆ ಬರುತ್ತಿದೆ.
ಆರಂಭದಿಂದಲೂ ತನ್ನ ಟೈಟಲ್ ಮತ್ತು ಪೋಸ್ಟರ್‌ಗಳ ಮೂಲಕ ಸಿನಿಮಂದಿಯ ಗಮನ ಸೆಳೆದಿದ್ದ “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸುºಟ್ಟ’ ಚಿತ್ರದಲ್ಲಿ ಆಸ್ಕರ್‌ಕೃಷ್ಣ, ಲೋಕೇಂದ್ರ ಸೂರ್ಯ ನಾಯಕರಾಗಿ, ಗೌರಿ ನಾಯರ್ ನಾಯಕಿಯಾಗಿ ಮತ್ತು ಸೆವೆನ್ ರಾಜ್ ಖಳನಾಯಕನಾಗಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಸೆವೆನ್ ರಾಜ್ ಆರ್ಟ್ಸ್’ ಬ್ಯಾನರ್‌ನಲ್ಲಿ ಸೆವೆನ್ ರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ನಿರ್ದೇಶನವಿದೆ.ಕಳೆದಕೆಲ ದಿನಗಳಿಂದ ಭರ್ಜರಿಯಾಗಿ ಚಿತ್ರದ ಪ್ರಮೋಶನ್‌ಕೆಲಸಗಳಲ್ಲಿ ಬಿಝಿಯಾಗಿರುವ ಚಿತ್ರತಂಡ, ಈ ವಾರ ರಾಜ್ಯಾದ್ಯಂತ ಸುಮಾರು50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರದ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದೆ.
” ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ ‘ ಬಿಡುಗಡೆಗೂ ಮುನ್ನ ಮಾತನಾಡಿದ ಚಿತ್ರದ ಖಳನಾಯಕಕಂ ನಿರ್ಮಾಪಕ ಸೆವೆನ್ ರಾಜ್, “ಕೋವಿಡ್ ಆತಂಕದ ನಡುವೆಯೇ ಸಿನಿಮಾ ಮುಗಿಸಿದ್ದೇವೆ. ಈಗ ಕೋವಿಡ್ ಭಯದ ನಡುವೆಯೂ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದೇವೆ. ನಮ್ಮ ಸಿನಿಮಾದ ಟೈಟಲ್ಲೇ ಹೇಳುವಂತೆ ಇದೊಂದು ಸ್ನೇಹ, ಪ್ರೇಮ ಮತ್ತು ಸಂಬಂಧಗಳ ನಡುವೆ ನಡೆಯುವಂಥ ಸಿನಿಮಾ. ಇದರಲ್ಲಿ ಲವ್, ಫ್ರೆಂಡ್‌ಶಿಪ್, ಕಾಮಿಡಿ, ಎಮೋಶನ್ಸ್ ಒಳ್ಳೆಯ ಹಾಡು ಎಲ್ಲವೂ ಇದೆ. ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಬಯಸುವ ಪ್ರೇಕ್ಷಕರಿಗಾಗಿಯೇ ಮಾಡಿದಂಥ ಸಿನಿಮಾ. ಒಂದೊಳ್ಳೆ ಎಂಟರ್‌ಟೈನ್ಮೆಂಟ್ ಸಿನಿಮಾ ಕೊಟ್ಟರೆ ಪ್ರೇಕ್ಷಕರು ಖಂಡಿತಾ ನೋಡುತ್ತಾರೆ ಎಂಬ ನಂಬಿಕೆಯಲ್ಲಿ “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ರಿಲೀಸ್ ಮಾಡುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.