ಹರೆಯದ ಮನಸ್ಸುಗಳ “ಸ್ವೇಚ್ಛಾ”
ಪಾತ್ರದ ಹೆಸರೇ ಟೈಟಲ್ ಆಯ್ತು...
Team Udayavani, Aug 9, 2019, 5:00 AM IST
ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ಸ್ವೇಚ್ಛಾ’ ಚಿತ್ರ ಸದ್ಯ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಸಮ್ಮುಖದಲ್ಲಿ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆಗೊಳಿಸಿರುವ ಚಿತ್ರತಂಡ, “ಸ್ವೇಚ್ಛಾ’ದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
“ಸ್ವೇಚ್ಛಾ’ ಚಿತ್ರಕ್ಕೆ ನವ ನಿರ್ದೇಶಕ ಸುರೇಶ್ ರಾಜು ನಿರ್ದೇಶನ ಮಾಡುತ್ತಿದ್ದಾರೆ. “ಹದಿಹರೆಯದಲ್ಲಿ ಪ್ರೀತಿಯ ಬಲೆಗೆ ಸಿಲುಕಿದ ಪ್ರೇಮಿಗಳು ಏನೆಲ್ಲಾ ಸವಾಲುಗಳನ್ನು ಎದುರಿಸಬೇಕು. ಪ್ರೀತಿ ಇಬ್ಬರ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗೆ ಕಾರಣವಾಗುತ್ತದೆ. ಇದರ ಮಧ್ಯೆ ನಾಯಕಿಯ ತಂದೆ ರಾವಣನಂತೆ ವರ್ತಿಸಿದಾಗ ಪ್ರೀತಿಸಿದ ಎಳೆಯ ಮನಸ್ಸುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದೆ ಚಿತ್ರ. ಇದನ್ನೇ “ಸ್ವೇಚ್ಛಾ’ ಚಿತ್ರದಲ್ಲಿ ಹೇಳಿದ್ದೇವೆ’ ಎನ್ನುವ ವಿವರಣೆ ಕೊಡುತ್ತಾರೆ.
ಇನ್ನು “ಸ್ವೇಚ್ಛಾ’ ಚಿತ್ರದ ಬಹುತೇಕ ಕಥೆ ಮತ್ತು ಸನ್ನಿವೇಶಗಳು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತದೆಯಂತೆ. ಚಿತ್ರದ ಬಹುತೇಕ ಪಾತ್ರಗಳಿಗೆ ಹೊಸ ಮುಖಗಳು ಬೇಕು ಎನ್ನುವ ಕಾರಣಕ್ಕೆ ಚಿತ್ರದಲ್ಲಿ, ಅನೇಕ ಹೊಸ ಕಲಾವಿದರಿಗೆ ಮಣೆ ಹಾಕಲಾಗಿದೆ. “ಇದೊಂದು ನಮ್ಮ ನಡುವೆಯೇ ನಡೆಯುವ ಕಥೆ, ಹಾಗಾಗಿ ಅತ್ಯಂತ ಸಹಜವಾಗಿ ಚಿತ್ರ ಮೂಡಿಬಂದಿದ್ದು, ನೋಡುಗರಿಗೂ “ಸ್ವೇಚ್ಛಾ’ ಚಿತ್ರ ಇಷ್ಟವಾಗುತ್ತದೆ’ ಎನ್ನುವ ಭರವಸೆ ಚಿತ್ರತಂಡದ್ದು. ಇನ್ನು “ಸ್ವೇಚ್ಛಾ’ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರಿಸುವ ಚಿತ್ರತಂಡ, ಅದು ಚಿತ್ರದಲ್ಲಿ ಬರುವ ಪಾತ್ರವೊಂದರ ಹೆಸರು. ಅದು ಚಿತ್ರದಲ್ಲಿ ಎಷ್ಟರ ಮಟ್ಟಿಗೆ ಮಹತ್ವವಾಗಿದೆ
ಅನ್ನೋದನ್ನ ಚಿತ್ರದಲ್ಲೇ ನೋಡಬೇಕು ಎನ್ನುತ್ತದೆ.
“ಸ್ವೇಚ್ಛಾ’ ಚಿತ್ರದಲ್ಲಿ ಹಿತೇಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹಿತೇಶ್ ಅವರದ್ದು ಲವರ್ ಬಾಯ್ ಪಾತ್ರವಂತೆ. ನಾಯಕಿಯಾಗಿ ಪವಿತ್ರಾ ನಾಯಕ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸ್ಪಂದನಾ, ಪ್ರಕಾಶ್, ಬೇಬಿ ಶ್ರೀ, ಮಾಲಾಶ್ರೀ ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸ್ವೇಚ್ಛಾ’ ಚಿತ್ರಕ್ಕೆ ಸಿ.ಎಸ್ ಸತೀಶ್ ಛಾಯಾಗ್ರಹಣ, ಸುಜನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಲೋಕಿ ಸಂಗೀತ ಸಂಯೋಜಿಸಿದ್ದಾರೆ. ಮುರಾಹರಿ ರೆಡ್ಡಿ, ಮಸ್ತಾನ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಬಹುಭಾಗ ಚಿತ್ರೀಕರಣವನ್ನು ರಾಯಚೂರು, ಬಳ್ಳಾರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಮೊದಲ ಟೀಸರ್ ಅನ್ನು ಬಿಡುಗಡೆಗೊಳಿಸಿರುವ “ಸ್ವೇಚ್ಛಾ’ ಚಿತ್ರತಂಡ, ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ ಚಿತ್ರವನ್ನು ಕನ್ನಡ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.