ಮಕ್ಕಳ ರಾಜ್ಯ

Team Udayavani, Aug 3, 2018, 6:00 AM IST

s-12.jpg

ಸಾಮಾನ್ಯವಾಗಿ ಮಕ್ಕಳ ಸಿನಿಮಾವೆಂದರೆ ಬರೋದು, ಹೋಗೋದು ಗೊತ್ತಾಗಲ್ಲ. ಪ್ರಚಾರದಿಂದಲೂ ಆ ಸಿನಿಮಾಗಳು ದೂರವೇ ಇರುತ್ತವೆ. ಆದರೆ, “ರಾಮರಾಜ್ಯ’ ಸಿನಿಮಾ ಮಾತ್ರ ಅದರಿಂದ ಭಿನ್ನ. ಎಲ್ಲಾ ಕಮರ್ಷಿಯಲ್‌ ಸಿನಿಮಾಗಳಂತೆ ಚಿತ್ರವನ್ನು ಪ್ರಚಾರ ಮಾಡಲು ಹಾಗೂ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಅದರ ಮೊದಲ ಅಂಗವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಚಿತ್ರವನ್ನು ನೀಲ್‌ ಕೆಂಗಾಪುರ ನಿರ್ದೇಶಿಸಿದ್ದು, ಆರ್‌.ಶಂಕರ್‌ ಗೌಡ ನಿರ್ಮಿಸಿದ್ದಾರೆ. ಈ ಚಿತ್ರ ಆಗಸ್ಟ್‌ 10 ರಂದು ಬಿಡುಗಡೆಯಾಗುತ್ತಿದೆ.

ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡಲು ಹೋರಾಡುವ ನಾಲ್ಕು ಮಕ್ಕಳ ಸುತ್ತ ಈ ಸಿನಿಮಾ ಸಾಗುತ್ತದೆ. ಅದೇ ಕಾರಣದಿಂದ ಈ ಚಿತ್ರಕ್ಕೆ “ಗಾಂಧಿ ತಾತನ ಕನಸು’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. ನಿರ್ದೇಶಕ ನೀಲ್‌ ಹೇಳುವಂತೆ, ಈ ಚಿತ್ರದಲ್ಲಿ ದೊಡ್ಡವರು ಕಲಿಯುವಂತಹ ಸಾಕಷ್ಟು ಅಂಶಗಳಿವೆಯಂತೆ. ಎಲ್ಲರಿಗೂ ಒಂದೇ ನ್ಯಾಯ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ಸಾಗುತ್ತದೆಯಂತೆ. ಮಕ್ಕಳು ತಮ್ಮ ಕೆಲಸದಿಂದ ಹೇಗೆ ದೊಡ್ಡವರ ಕಣ್ಣು ತೆರೆಸುತ್ತಾರೆ ಎಂಬ ಅಂಶವೂ ಈ ಸಿನಿಮಾದಲ್ಲಿ ಪ್ರಮುಖವಾಗಿದೆಯಂತೆ. ಚಿತ್ರದಲ್ಲಿ ನಾಲ್ಕು ಮಕ್ಕಳು ಪ್ರಮುಖ ಪಾತ್ರ ಮಾಡಿದ್ದು, ಆ ಸಂದರ್ಭದಲ್ಲಿನ ಅನುಭವ, ಮಕ್ಕಳ ತುಂಟಾಟವನ್ನು ಹಂಚಿಕೊಂಡು ಖುಷಿಯಾದರು ನೀಲ್‌.  ಚಿತ್ರವನ್ನು ನಿರ್ಮಿಸುತ್ತಿರುವ ಶಂಕರೇಗೌಡ ಅವರಿಗೆ ಕಥೆ ತುಂಬಾನೇ ಇಷ್ಟವಾಯಿತಂತೆ. ಕಥೆಯೊಂದಿಗೆ ನಟ ಪ್ರೇಮ್‌ ಅವರ ಬಳಿ ಹೋಗಿ, “ನಿಮ್ಮ ಮಗ ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ’ ಎಂದಾಗ ಪ್ರೇಮ್‌ ಕಥೆ ಕೇಳಿ ಖುಷಿಯಿಂದ ಒಪ್ಪಿಕೊಂಡರಂತೆ. ಹಾಗಾಗಿ, ಪ್ರೇಮ್‌ ಪುತ್ರ ಏಕಾಂತ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾನೆ. ಇನ್ನು, ಮಕ್ಕಳ ಸಿನಿಮಾದ ಹಾಡಿಗೆ ಗ್ರಾಫಿಕ್‌ ಬಳಸೋದು ಕಡಿಮೆ. ಆದರೆ “ರಾಮರಾಜ್ಯ’ ಚಿತ್ರದ “ಓದು ಓದು …’ ಹಾಡು ಗ್ರಾಫಿಕ್‌ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಈ ಹೆಗ್ಗಳಿಕೆ ನಿರ್ಮಾಪಕರಿಗಿದೆ. 

ಚಿತ್ರದಲ್ಲಿ ಅಶ್ವಿ‌ನಿ ಗೌಡ ಕೂಡಾ ನಟಿಸಿದ್ದಾರೆ. ಇಲ್ಲಿ ಅವರು ಗೃಹಿಣಿಯಾಗಿ ಕಾಣಿಸಿಕೊಂಡಿದ್ದು, ತುಂಬಾ ಖುಷಿಕೊಟ್ಟ ಪಾತ್ರವಂತೆ. ಚಿತ್ರದಲ್ಲಿ ನಟಿಸಿದ ಏಕಾಂತ್‌, ಹೇಮಂತ್‌, ಕಾರ್ತಿಕ್‌ ಹಾಗೂ ಶೋಯೆಭ್‌ ಕೂಡಾ ತಮ್ಮ ಖುಷಿ ಹಂಚಿಕೊಂಡರು. ಇನ್ನು, ನಟಿ ಸ್ವಾತಿ ಒಪ್ಪಿಕೊಂಡ ಮೊದಲ ಸಿನಿಮಾ ಇದಂತೆ. ಆದರೆ, ಮೊದಲು ಬಿಡುಗಡೆಯಾಗಿದ್ದು “ಎಡಕಲ್ಲು ಗುಡ್ಡದ ಮೇಲೆ’. 

ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತ ನೀಡಿದ್ದು, ರೀರೆಕಾರ್ಡಿಂಗ್‌ ಮಾಡುವಾಗ ಸಿನಿಮಾ ನೋಡಿ ಖುಷಿಯಾಯಿತಂತೆ. ಇನ್ನು, ಮಗನ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದ ಪ್ರೇಮ್‌ “ರಾಮರಾಜ್ಯ’ ತಂಡಕ್ಕೆ ಶುಭಕೋರಿದರು. “ಮಗ ಆತನ ಸ್ವ ಆಸಕ್ತಿಯಿಂದ ಸಿನಿಮಾದತ್ತ ವಾಲಿದ್ದಾನೆ. ಆತನನ್ನು ನಟನೆ, ಜಿಮ್ನಾಸ್ಟಿಕ್‌ ಸೇರಿದಂತೆ ಹಲವು ಕೆಟಗರಿಗಳಲ್ಲಿ ತರಬೇತಿಗೊಳಿಸಿರುವ ಚಾಮರಾಜ್‌ ಮಾಸ್ಟರ್‌ಗೆ ನಾನು ಥ್ಯಾಂಕ್ಸ್‌ ಹೇಳಲೇಬೇಕು’ ಎಂದರು.  ಉಳಿದಂತೆ ಯತಿರಾಜ್‌, ನಾಗೇಂದ್ರಪ್ರಸಾದ್‌, ಹನುಮಂತೇಗೌಡ ನಟಿಸಿದ್ದಾರೆ. 

ಟಾಪ್ ನ್ಯೂಸ್

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

4(2

Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್‌

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.