ಡಿಂಗ ಡಾನ್ಸ್ ಶುರು
ಐಫೋನ್‌ನಲ್ಲಿ ಮಾಡಿದ ಸಿನಿಮಾವಿದು...
Team Udayavani, Jan 31, 2020, 5:21 AM IST
ಅಬ್ಟಾ… ಈ ಡಿಂಗನ ಸ್ಟೆಪ್‌ಗೆ 30 ಲಕ್ಷ ವೀವ್ಸ್…!
-ಇದು “ಡಿಂಗ’ ಚಿತ್ರತಂಡದ ಉದ್ಘಾರ. ಜೊತೆಗೆ ಅವರ ಮೊಗದಲ್ಲಿ ಹರ್ಷವೂ ಉಂಟು. ಹೊಸಬರ ಚಿತ್ರವೊಂದು ಈ ಪರಿ ಸುದ್ದಿಯಾಗಿದೆ ಅಂದರೆ, ಅದಕ್ಕೆ ಕಾರಣ, ಚಿತ್ರದ ಗುಣಮಟ್ಟ. ಸಾಂಗು ಹಾಗೂ ಆ ಡಿಂಗನ ಸ್ಟೆಪ್ಪು. ಹೌದು, ಇದು ಐಫೋನ್‌ನಲ್ಲಿ ತಯಾರಾದ ಚಿತ್ರ. ಈ ವಾರ ತೆರೆಗೆ ಬರುತ್ತಿರುವ ಚಿತ್ರದ ಕುರಿತು ಹೇಳಿಕೊಂಡ ನಿರ್ದೇಶಕ ಅಭಿಷೇಕ್, “ನಾನು ಈ ಚಿತ್ರದ ಕಥೆಯನ್ನು ಸಾಕಷ್ಟು ಜನರಿಗೆ ಹೇಳಿದೆ. ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಯಾಕೆಂದರೆ, ಐಫೋನ್‌ನಲ್ಲಿ ಸಿನಿಮಾ ಮಾಡ್ತೀನಿ ಅಂದಿದ್ದಕ್ಕೆ. ಕೊನೆಗೆ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಗುರುಗಳು. ಇವತ್ತಿನ ಕಾಲದಲ್ಲಿ ಸುಮ್ಮನೆ ನೂರು ರುಪಾಯಿ ಸಿಗೋದಿಲ್ಲ. ಅಂತಹದರಲ್ಲಿ ನನ್ನ ನಂಬಿ ಕೋಟಿ ಹಣ ಹಾಕಿ ಸಿನಿಮಾ ಮಾಡಿದ್ದಾರೆ. ಐಫೋನ್ ಸಿನಿಮಾ ಸುಮ್ಮನೆ ಅಲ್ಲ. ರಿಸ್ಕ್ ಜಾಸ್ತಿ ಇತ್ತು. ಫೋನೋಗ್ರಫಿ ಮೆಥೆಡ್ ವರ್ಕ್ ಆಗಿದೆ. ಏಷ್ಯಾದಲ್ಲೇ ಮೊದಲ ಪ್ರಯತ್ನವಿದು. ಎಲ್ಲರೂ ಚಿತ್ರ ನೋಡಿ ಹರಸಿ’ ಎಂದರು ನಿರ್ದೇಶಕ ಅಭಿಷೇಕ್.
ಮಾಯಕಾರ ಪ್ರೊಡಕ್ಷನ್ಸ್‌ನಲ್ಲಿ 11 ಜನ ನಿರ್ಮಾಪಕರು ಚಿತ್ರಕ್ಕೆ ಹಣ ಹಾಕಿದ್ದಾರೆ. ಅವರ ಪೈಕಿ ಮಧು ದೀಕ್ಷಿತ್ ಮಾತನಾಡಿ, “ಚಿತ್ರ ಮಾಡೋದು ಸುಲಭ. ಆದರೆ, ರಿಲೀಸ್ ಮಾಡೋದು ಕಷ್ಟ. ಆದರೆ ಮಾದೇಶ್ವರನ ಅನುಗ್ರಹ ಎಲ್ಲವೂ ಒಳ್ಳೆಯದಾಗಿದೆ. ಧೀರಜ್ ಫಿಲಂಸ್‌ನ ಮೋಹನ್‌ದಾಸ್ ಪೈ ವಿತರಣೆ ಮಾಡುತ್ತಿದ್ದಾರೆ. ಹೊಸಬರ ಪ್ರಯತ್ನಕ್ಕೆ ಬೆಂಬಲ ಸಿಕ್ಕಿದೆ. ನಿರ್ದೇಶಕರು ಹೇಗೆ ಕಥೆ ಹೇಳಿದ್ದರೋ, ಹಾಗೆಯೇ ಚಿತ್ರ ಮಾಡಿದ್ದಾರೆ. ಆರವ್ ಹಾಗು ಅನೂಷಾ ಈ ಚಿತ್ರ ಆಗೋಕೆ ಕಾರಣ. ಇನ್ನು, ದೊಡ್ಡ ಪರದೆ ಮೇಲೆ ಐಫೋನ್ ಚಿತ್ರ ನೋಡೋಕೆ ಆಗುತ್ತಾ ಎಂಬ ಪ್ರಶ್ನೆ ಇತ್ತು. ಛಾಯಾಗ್ರಾಹಕ ಮಂಜುನಾಥ್ ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಇನ್ನು, ಸಂಗೀತ ನಿರ್ದೇಶಕ ಶುದೊœàರಾಯ್ ಅದ್ಭುತ ಹಾಡು ಕೊಟ್ಟಿದ್ದಾರೆ. ಇದು ಕೌಟುಂಬಿಕ ಸಿನಿಮಾ. ಎಲ್ಲರೂ ನೋಡಬೇಕು’ ಎಂಬ ಮನವಿ ಇಟ್ಟರು.
ವಿತರಕ ಮೋಹನ್ ದಾಸ್ ಪೈ ಅವರು, ಸುಮಾರು 100 ಪ್ಲಸ್ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರಂತೆ. ನಮಗೂ ಐಫೋನ್ ಸಿನಿಮಾ ಹೊಸ ಅನುಭವ. ಸಿನಿಮಾದ ಗುಣಮಟ್ಟ ಚೆನ್ನಾಗಿದೆ. ದೊಡ್ಡ ಪರದೆ ಮೇಲೆ ಎಫೆಕ್ಟ್ ಆಗಿದೆ’ ಎಂದರು. ಛಾಯಾಗ್ರಾಹಕ ಮಂಜುನಾಥ್ ಅವರಿಗೆ ಐಫೋನ್‌ನಲ್ಲಿ ಕೆಲಸ ಅಂದಾಗ ಭಯ ಆಯ್ತಂತೆ. ಕೊನೆಗೆ ನಿರ್ಮಾಪಕರು ಕೊಟ್ಟ ಧೈರ್ಯ, ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಎಲ್ಲರೂ ಇಲ್ಲಿ ಹೊಸಬರೇ. ಅವರೆಲ್ಲರ ಬೆಂಬಲ ಸಿಕ್ಕಿದ್ದರಿಂದ ಒಳ್ಳೆಯ ಸಿನಿಮಾ ಆಗಿದೆ’ ಎಂದರು.
ಸಂಗೀತ ನಿರ್ದೇಶಕ ಶುದ್ದೋರಾಯ್ ಅವರ ಮೂರನೇ ಸಿನಿಮಾ ಇದು. ಈಗಾಗಲೇ ಹಾಡು ಹಿಟ್ ಆಗಿರುವುದು ಅವರಿಗೆ ಖುಷಿ ಕೊಟ್ಟಿದೆಯಂತೆ. ಹಿನ್ನೆಲೆ ಸಂಗೀತ ನೀಡುವ ವೇಳೆ ಸಾಕಷ್ಟು ಸಲ ಸಿನಿಮಾ ನೋಡಿದ್ದರಿಂದ ಕಣ್ಣೀರು ಬಂದಿದೆ. ನೋಡುಗರಿಗೂ ಇದು ಎಮೋಷನಲ್ ಸಿನಿಮಾ ಆಗುತ್ತೆ ಅಂದರು ಅವರು.
ನಾಯಕ ಆರವ್‌ಗೌಡ ಅವರಿಗೆ ಚಿತ್ರದ ಹಾಡು ಮತ್ತು ಡಿಂಗ ಸ್ಟೆಪ್ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದು ಖುಷಿ ಹಂಚಿಕೊಂಡರು. ನಾಯಕಿ ಅನೂಷಾಗೂ ಚಿತ್ರದ ಮೇಲೆ ವಿಶ್ವಾಸವಿದೆಯಂತೆ. ಈ ವೇಳೆ ಜಗದೀಶ್, ಶಿವಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.