ಕಲರ್‌ಫುಲ್ ಚಿತ್ರಾವಳಿ
ಸಿನಿ ಹಬ್ಬ ಮುಂದುವರಿದಿದೆ
Team Udayavani, Aug 30, 2019, 5:05 AM IST
ಕನ್ನಡದ ಜೊತೆಗೆ ಬೇರೆ ಭಾಷೆಯ ಸಿನಿಮಾಗಳನ್ನು ಇಷ್ಟಪಡುವವರಿಗೆ ಆಗಸ್ಟ್ ಕೊನೆಯ ವಾರದಿಂದಲೇ ಹಬ್ಬ ಎನ್ನಬಹುದು. ಈಗಾಗಲೇ “ಕುರುಕ್ಷೇತ್ರ’ ದೊಡ್ಡ ಹಿಟ್ ಆಗಿದೆ. ಇದರ ಬೆನ್ನಿಗೆ “ಬಾಹುಬಲಿ’ ನಂತರ ಪ್ರಭಾಸ್ ನಟಿಸಿರುವ “ಸಾಹೋ’ ಚಿತ್ರ ಬಿಡುಗಡೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಸುದೀಪ್ ಅಭಿನಯದ “ಪೈಲ್ವಾನ್’, “ಕಿಸ್’, “ಗೀತಾ’ ಬಿಡುಗಡೆಯಾಗುತ್ತಿವೆೆ. ಇನ್ನು, ಅಕ್ಟೋಬರ್‌ನಲ್ಲಿ “ಭರಾಟೆ’, “ಸೈರಾ ನರಸಿಂಹ ರೆಡ್ಡಿ’ ಸೇರಿದಂತೆ ಅನೇಕ ಚಿತ್ರಗಳು ಬರಲಿವೆ .
ಒಂದು ಕಡೆ “ಪೈಲ್ವಾನ್’, ಮತ್ತೂಂದು ಕಡೆ “ಕಿಸ್’, ಇನ್ನೊಂದು ಕಡೆ “ಗೀತಾ’… ಅದನ್ನು ದಾಟಿದರೆ ಸಿಗುವ “ಭರಾಟೆ’, ಪರಭಾಷೆಯ “ಸಾಹೋ’, “ಸೈರಾ ನರಸಿಂಹರೆಡ್ಡಿ’,
“ವಾರ್’…
-ಸೆಪ್ಟೆಂಬರ್ ಮೊದಲ ವಾರದಿಂದಲೇ ಅಭಿಮಾನಿಗಳನ್ನು ಖುಷಿಯಾಗಿಡುವ ಸಿನಿಮಾಗಳಿವು. ಒಂದೇ ಮಾತಲ್ಲಿ ಹೇಳಬೇಕಾದರೆ ಸೆಪ್ಟೆಂಬರ್ ಎರಡನೇ ವಾರದಿಂದಲೇ ಚಿತ್ರರಂಗ ಮತ್ತಷ್ಟು ಕಲರ್‌ಫುಲ್ ಆಗಲಿದೆ ಎಂದರೆ ತಪ್ಪಲ್ಲ. ಸಿನಿಮಾ ಮಂದಿಗೆ ಸೆಪ್ಟೆಂಬರ್ ತಿಂಗಳು ತುಂಬಾ ವಿಶೇಷವೆಂದರೆ ತಪ್ಪಲ್ಲ. ಒಂದು ಕಡೆ ಸುದೀಪ್ ನಟನೆಯ “ಪೈಲ್ವಾನ್’ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾದರೆ, ಮತ್ತೂಂದು ಕಡೆ ಒಂದು ಜೋಡಿ ದೊಡ್ಡ ಕನಸುಗಳೊಂದಿಗೆ “ಕಿಸ್’ ಮೂಲಕ ಅಂಬೆಗಾಲಿಡುತ್ತಾ ಎಂಟ್ರಿಕೊಡುತ್ತಿದೆ. ಇದರ ಜೊತೆಗೆ “ಗೀತಾ’ ಎಂಬ ಸಿನಿಮಾ ಮೂಲಕ ಗಣೇಶ್ ಹೊಸ ಪ್ರಯತ್ನದೊಂದಿಗೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.
ಆಗಸ್ಟ್ ತಿಂಗಳನ್ನು “ಕುರುಕ್ಷೇತ್ರ’ ಹೇಗೆ ಸದಾ ಸುದ್ದಿಯಲ್ಲಿರುವಂತೆ ಹಾಗೂ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತೋ ಸೆಪ್ಟೆಂಬರ್ ತಿಂಗಳು ಮತ್ತೂಂದಿಷ್ಟು ಸಿನಿಮಾಗಳು ಪ್ರೇಕ್ಷಕರನ್ನು ಮತ್ತಷ್ಟು ಬಿಝಿಯಾಗಿಸಲಿವೆ. ಸುದೀಪ್ ಅಭಿನಯದ ಬಹುನಿರೀಕ್ಷಿತ “ಪೈಲ್ವಾನ್’ ಚಿತ್ರ ಸೆಪ್ಟೆಂಬರ್ 12ಕ್ಕೆ ಬಿಡುಗಡೆಯಾಗುತ್ತಿರುವುದು ನಿಮಗೆ ಗೊತ್ತೇ ಇದೆ. ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಕಾಣುವ ಮೂಲಕ ಎಲ್ಲಾ ಭಾಷೆಯ ಸಿನಿಪ್ರಿಯರನ್ನು ರಂಜಿಸಲಿದೆ. ಔಟ್ ಅಂಡ್ ಔಟ್ ಮಾಸ್-ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಎಂಟ್ರಿಕೊಡಲಿದೆ. ಸುದೀಪ್ ಅವರ ಮೊದಲ ಅಧಿಕೃತ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿದೆ.
“ಪೈಲ್ವಾನ್’ ಹವಾದಲ್ಲಿ ಚಿತ್ರರಂಗ ಇರುವಾಗಲೇ ನವಜೋಡಿಯೊಂದು ತುಂಬು ಕನಸಿನೊಂದಿಗೆ ಸೆಪ್ಟೆಂಬರ್ ಕೊನೆಯ ವಾರ ತೆರೆಗೆ ಬರುತ್ತಿದೆ. ಅದು “ಕಿಸ್’. ಎ.ಪಿ.ಅರ್ಜುನ್ ನಿರ್ದೇಶನದ “ಕಿಸ್’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರ ಸೆಪ್ಟೆಂಬರ್ 27ಕ್ಕೆ ತೆರೆಕಾಣುತ್ತಿದೆ. ಅರ್ಜುನ್, ನವಜೋಡಿಯನ್ನಿಟ್ಟುಕೊಂಡು ಒಂದು ಟೀನೇಜ್ ಲವ್‌ಸ್ಟೋರಿಯನ್ನು ಹೆಣೆದಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರ ಯುವ ಮನಸ್ಸುಗಳನ್ನು ಮೋಡಿ ಮಾಡುವ ನಂಬಿಕೆ ಇದೆ. ಇದರ ಜೊತೆಗೆ ಗಣೇಶ್ ಅವರ “ಗೀತಾ’ ಕೂಡಾ ಸೆ.27ಕ್ಕೇ ತೆರೆಕಾಣುತ್ತಿದೆ. ಈ ಹಿಂದಿನ ಗಣೇಶ್ ಅವರ ಒಂದೆರಡು ಚಿತ್ರಗಳು ಪ್ರಚಾರದ ಕೊರತೆಯಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಹೋದವು. ಆದರೆ, ಗಣೇಶ್ ಅವರಿಗೆ “ಗೀತಾ’ ಮೇಲೆ ವಿಶ್ವಾಸವಿದೆ. ನಟನೆಯ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಚಿತ್ರದಲ್ಲೊಂದು ಗಂಭೀರ ವಿಷಯ ಕೂಡಾ ಇದ್ದು, ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ. ಈ ಚಿತ್ರ ಸೆಪ್ಟೆಂಬರ್ ಕೊನೆಯಲ್ಲಿ ಬಿಡುಗಡೆಯಾದರೆ, ಅಕ್ಟೋಬರ್ ಎರಡನೇ ವಾರದಲ್ಲಿ “ಭರಾಟೆ’ ಆಗಮನವಾಗುತ್ತಿದೆ. ಈಗಾಗಲೇ ಚಿತ್ರದ ಹಾಡೊಂದು ಹಿಟ್ ಆಗಿದೆ. ಪೂರ್ಣ ಪ್ರಮಾಣದ ಮಾಸ್ ಸಿನಿಮಾ ಮೂಲಕ ನಟ ಶ್ರೀಮುರಳಿ ಎಂಟ್ರಿಕೊಡುತ್ತಿದ್ದಾರೆ.
ಇದು ಕೇವಲ ಕನ್ನಡ ಸಿನಿಮಾಗಳ ವಿಷಯವಾದರೆ, ಒಟ್ಟಾರೆಯಾಗಿ ಎಲ್ಲಾ ಭಾಷೆಯ ಸಿನಿಮಾಗಳನ್ನು ಇಷ್ಟಪಡುವ ಮಂದಿಗೆ ಆಗಸ್ಟ್ ಕೊನೆಯ ವಾರದಿಂದಲೇ ಹಬ್ಬ ಎನ್ನಬಹುದು.
‘ಬಾಹುಬಲಿ’ ನಂತರ ಪ್ರಭಾಸ್ ನಟಿಸಿರುವ ‘ಸಾಹೋ’ ಚಿತ್ರ ಆಗಸ್ಟ್ ಕೊನೆಗೆ ಬಿಡುಗಡೆಯಾಗುತ್ತಿದೆ. ಅದರ ಬೆನ್ನಿಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ‘ಪೈಲ್ವಾನ್’. ಇನ್ನು, ಅಕ್ಟೋಬರ್ ಆರಂಭದಲ್ಲಿ ಅಂದರೆ ಅಕ್ಟೋಬರ್ 02ರಂದು ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಬಿಡುಗಡೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಕನ್ನಡದಲ್ಲೂ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಅದೇ ದಿನ ಬಾಲಿವುಡ್ ಸ್ಟಾರ್‌ನಟನೊಬ್ಬನ ಚಿತ್ರ ಕೂಡಾ ಬಿಡುಗಡೆಯಾಗುತ್ತಿದೆ. ಅದು ಹೃತಿಕ್ ರೋಶನ್ ಅವರ ‘ವಾರ್’. ಈಗಾಗಲೇ ಹೃತಿಕ್ ಅಭಿನಯ ‘ಸೂಪರ್ 30’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡಿದ ಬೆನ್ನಲ್ಲೇ ‘ವಾರ್’ ಬಿಡುಗಡೆಯಾಗುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿದೆ. ಇವತ್ತು ಪ್ರೇಕ್ಷಕ ಕೇವಲ ಒಂದೇ ಭಾಷೆಯ ಸಿನಿಮಾಕ್ಕೆ ಅಂಟಿಕೊಂಡಿಲ್ಲ. ಕಲೆ ಭಾಷೆಯ ಗಡಿದಾಟಿದೆ. ಕಲೆಗೆ ಭಾಷೆಯ ಹಂಗಿಲ್ಲ ಎಂಬುದನ್ನು ಅನೇಕ ಸಿನಿಮಾಗಳು, ಕಲಾವಿದರು ತೋರಿಸಿಕೊಟ್ಟಿದ್ದಾರೆ ಕೂಡಾ. ಅದೇ ಕಾರಣದಿಂದಲೇ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಹೆಚ್ಚುತ್ತಿದೆ. ಆ ನಿಟ್ಟಿನಲ್ಲಿ ಆಗಸ್ಟ್ ಕೊನೆಯ ವಾರದಿಂದ ಅಕ್ಟೋಬರ್‌ವರೆಗೆ ಬೇರೆ ಬೇರೆ ಸಿನಿಮಾಗಳು ಎಲ್ಲಾ ಭಾಷೆಯ ಪ್ರೇಕ್ಷಕರಿಗೆ ಮನರಂಜನೆ ನೀಡಲಿವೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.