ಶ್ಯಾಡೊ ಮೂಲಕ ವಿನೋದಾವಳಿ
ಕಾಮನ್ ಮ್ಯಾನ್‌ನ ರಿವೆಂಜ್ ಸ್ಟೋರಿ
Team Udayavani, Feb 28, 2020, 5:56 AM IST
ನಟ ವಿನೋದ್ ಪ್ರಭಾಕರ್ ಅಭಿನಯದ ಹೊಸಚಿತ್ರ “ಶ್ಯಾಡೊ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ “ಶ್ಯಾಡೊ’ ಚಿತ್ರದ ಹಾಡುಗಳನ್ನು ಅದ್ಧೂರಿಯಾಗಿ ಹೊರತಂದಿತು. ಇದೇ ವೇಳೆ ಮಾತನಾಡಿದ ನಾಯಕ ನಟ ವಿನೋದ್ ಪ್ರಭಾಕರ್, “ಈ ಸಿನಿಮಾದಲ್ಲಿ ನನ್ನದು ಸಿ.ಎಂ ಪಾತ್ರ. ಅಂದರೆ ಚೀಫ್ ಮಿನಿಸ್ಟರ್ ಅಂಥಲ್ಲ. ಕಾಮನ್ ಮ್ಯಾನ್ ಪಾತ್ರ. ಈ ಚಿತ್ರದ ತುಣುಕುಗಳು ನೋಡುಗರಿಗೆ ಇಷ್ಟವಾಗಿದೆ ಅಂತ ನಂಬಿದ್ದೇನೆ. ನಾವು ಸಿನಿಮಾ ಮಾಡುವುದು ಜನರು ನೋಡಲಿ ಅಂತ. ಯಾವುದೇ ಸಿನಿಮಾ ಆಗಿರಲಿ, ಪ್ರಚಾರವನ್ನು ಚೆನ್ನಾಗಿ ಮಾಡಿದರೆ ಮಾತ್ರ ಅದು ಜನರಿಗೆ ತಲುಪುತ್ತದೆ. ಒಳ್ಳೆಯ ಸಮಯ ನೋಡಿಕೊಂಡು ಬಿಡುಗಡೆ ಮಾಡುವುದು ಸೂಕ್ತ. ನಿರ್ದೇಶಕರು ಒಳ್ಳೆ ಕಥೆಯ ಮೂಲಕ ಒಂದಷ್ಟು ಹೊಸ ಅಂಶಗಳನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಸಿನಿಮಾದಲ್ಲಿ ಸಿಜಿ ಕೆಲಸ ಸಾಕಷ್ಟು ಇರುವ ಕಾರಣ, ಚಿತ್ರ ಸ್ವಲ್ಪ ತಡವಾಗಿದೆ. ಆದಷ್ಟು ಬೇಗ “ಶ್ಯಾಡೊ’ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದೇನೆ’ ಎಂದು ಸಿನಿಮಾ ಕುರಿತು ಹೇಳಿಕೊಂಡರು ವಿನೋದ್ ಪ್ರಭಾಕರ್.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರವಿಗೌಡ, “ಇದೊಂದು ಥ್ರಿಲ್ಲರ್, ಫ್ಯಾಮಿಲಿ ಡ್ರಾಮಾ. ಜೊತೆಗೆ ರಿವೆಂಜ್, ಆ್ಯಕ್ಷನ್ ಕೂಡ ಚಿತ್ರದಲ್ಲಿದೆ. ಇಡೀ ಫ್ಯಾಮಿಲಿ ಕುಳಿತುನೋಡಬಹುದಾದ ಮನರಂಜನೆ ಚಿತ್ರ ಇದಾಗಿದೆ’ ಎಂದರು.
“ಶ್ಯಾಡೊ’ ಚಿತ್ರದಲ್ಲಿ ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಶೋಭಿತ ರಾಣ ಜೋಡಿಯಾಗಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಚ್ಚು ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ರಾಮ್ ನಾರಾಯಣ್ ಸಾಹಿತ್ಯ ಒದಗಿಸಿದ್ದಾರೆ. ಮನೋಹರ ಜೋಶಿ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. “ಶ್ಯಾಡೊ’ ಚಿತ್ರದ ಶೇಕಡ 80ರಷ್ಟು ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ನಡೆಸಲಾಗಿದೆ.
“ಶ್ರೀ ಕನಕದುರ್ಗ ಚಲನಚಿತ್ರ’ ಲಾಂಚನದ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. “ಶ್ಯಾಡೊ’ ಚಿತ್ರಕ್ಕೆ “ನನ್ನ ನೆರಳು ಮರೆತುಹೋಗಿದೆ’ ಎಂಬ ಅಡಿಬರಹವಿದ್ದು, ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.