ಡಾರ್ಕ್‌ ಫ್ಯಾಂಟಸಿ ಎಂಬ ಥ್ರಿಲ್ಲರ್‌ : ಕತ್ತಲು ಬೆಳಕಲ್ಲಿ ಹುಡುಗರ ಚೆಲ್ಲಾಟ


Team Udayavani, Oct 30, 2020, 2:33 PM IST

ಡಾರ್ಕ್‌ ಫ್ಯಾಂಟಸಿ ಎಂಬ ಥ್ರಿಲ್ಲರ್‌ : ಕತ್ತಲು ಬೆಳಕಲ್ಲಿ ಹುಡುಗರ ಚೆಲ್ಲಾಟ

ಜೂಜು, ಬೆಟ್ಟಿಂಗ್‌ ಥರದ ಹವ್ಯಾಸಗಳನ್ನುಬೆಳೆಸಿಕೊಂಡ ಹುಡುಗರ ಜೀವನ ಹೇಗೆಲ್ಲ ಇರುತ್ತದೆ ಎಂಬುದನ್ನು ಕೆಲ ಸಿನಿಮಾಗಳಲ್ಲಿ ನೋಡಿರಬಹುದು. ಈಗಅಂಥದ್ದೇ ಮತ್ತೂಂದು ಥ್ರಿಲ್ಲರ್‌ ಅಂಶವನ್ನು ಇಟ್ಟುಕೊಂಡು “ಡಾರ್ಕ್‌ ಫ್ಯಾಂಟಸಿ’ ಚಿತ್ರ ತೆರೆಗೆ ಬರುತ್ತಿದೆ. ಫ‌ಣೀಶ್‌ ಭಾರದ್ವಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಡಾರ್ಕ್‌ ಫ್ಯಾಂಟಸಿ’ ಚಿತ್ರದಲ್ಲಿ ಯುವನಟ ಶ್ರೀ ನಾಯಕನಾಗಿ, ಸುನೀತಾ ಮತ್ತು ಸುಶ್ಮಿತಾ ದಾಮೋದರ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಬಾಲರಾಜ್‌, ಶೋಭರಾಜ್, ಮೋಹನ್‌ ಜುನೇಜಾ, ಮನದೀಪರಾಯ್‌ ಮತ್ತಿತರರುಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೋವಿಡ್ ಲಾಕ್‌ಡೌನ್‌ಗೂ ಮೊದಲೇ ಶುರುವಾದ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರತಂಡ “ಡಾರ್ಕ್‌ ಫ್ಯಾಂಟಸಿ’ಯ ಫ‌ಸ್ಟ್ ಲುಕ್‌ ಮತ್ತು ಟೀಸರ್‌ ಬಿಡುಗಡೆ ಮಾಡಿದೆ. ಹಿರಿಯ ನಿರ್ಮಾಪಕ ಎಸ್‌.ಎ ಗೋವಿಂದ ರಾಜ್‌, ನಟ ಧೀರನ್‌ ರಾಮಕುಮಾರ್‌, ಷಣ್ಮುಖ ಗೋವಿಂದರಾಜ್‌ ಮೊದಲಾದ ಗಣ್ಯರು ಹಾಜರಿದ್ದು, “ಡಾರ್ಕ್‌ ಫ್ಯಾಂಟಸಿ’ಯ ಫ‌ಸ್ಟ್‌ಲುಕ್‌ ಮತ್ತು ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಫ‌ಣೀಶ್‌ ಭಾರದ್ವಾಜ್‌, “ಈಗಾಗಲೇ ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣವಾಗಿದ್ದು, ಇದೊಂದು ಜೂಜು, ಬೆಟ್ಟಿಂಗ್‌ ನಡುವೆ ಡೇ ಆ್ಯಂಡ್‌ ನೈಟ್‌ ನಡೆಯುವ ಸಿನಿಮಾ. ಒಂದಷ್ಟುಸಸ್ಪೆನ್ಸ್‌ – ಥ್ರಿಲ್ಲರ್‌ ಅಂಶಗಳು ಈ ಸಿನಿಮಾದಲ್ಲಿ ಹೈಲೈಟ್ಸ್‌ ಆಗಿರಲಿದೆ. ಇಂದಿನ ಯುವಕರ ಲೈಫ್ಸ್ಟೈಲ್‌ ಹೊರಜಗತ್ತಿಗೆಕಾಣದ ಒಂದಷ್ಟು ವಿಷಯಗಳನ್ನು ತೆರೆಮೇಲೆ ಹೇಳುತ್ತಿದ್ದೇವೆ. ನಮ್ಮ ಪ್ಲಾನ್‌ ಪ್ರಕಾರ ಎಲ್ಲ ನಡೆದರೆ, ಇದೇ ಡಿಸೆಂಬರ್‌ ವೇಳೆಗೆ ಸಿನಿಮಾವನ್ನು ಸ್ಕ್ರೀನ್‌ಗೆ ತರುವ ಪ್ಲಾನ್‌ ಇದೆ’ ಎಂದರು.

“ಚಿತ್ರದ ಕಥೆ ಇಷ್ಟವಾಗಿದ್ದರಿಂದ, ಈ ಸಿನಿಮಾ ನಿರ್ಮಾಣಕ್ಕೆ ಮುಂದಾದೆವು. ಲಾಕ್‌ಡೌನ್‌ ಇಲ್ಲದಿದ್ದರೆ, ಸಿನಿಮಾ ಇಷ್ಟೊತ್ತಿಗಾಗಲೇ ರಿಲೀಸ್‌ ಮಾಡಲುವ ಪ್ಲಾನ್‌ನಲ್ಲಿದ್ದೆವು. ಸಿನಿಮಾ ತುಂಬ ಚೆನ್ನಾಗಿ ಬರುತ್ತಿದ್ದು, ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎಂಬ ವಿಶ್ವಾಸದ ಮಾತುಗಳನ್ನಾಡಿದರು.

ನಿರ್ಮಾಪಕರಲ್ಲಿ ಒಬ್ಬರಾದ ನಿತಿನ್‌ ಆರ್‌.ವಿ. ಕಾರ್ಯಕ್ರಮದಲ್ಲಿ ಹಾಜರಿದ್ದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಗ್ಗೆ ಅನುಭವಗಳನ್ನು ಹಂಚಿಕೊಂಡರು. “ಡಾರ್ಕ್‌ ಫ್ಯಾಂಟಸಿ’ ಚಿತ್ರಕ್ಕೆ ಆನಂದ ಇಲ್ಲರಾಜ್‌ ಛಾಯಾಗ್ರಹಣ, ತುಳಸಿರಾಮ ರಾಜುಸಂಕಲನವಿದೆ. ಚಿತ್ರದ ಹಾಡುಗಳಿಗೆ ಕ್ಲಾರೆನ್ಸ್‌ ಅಲೆನ್‌ ಕ್ರಾಸ್ಟ ಸಂಗೀತವಿದ್ದು, ಪದ್ಮನಾಭ ಭಾರದ್ವಾಜ್‌ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿರುವ ನಾಗರಾಜ್‌ ವಿ ಮತ್ತು ನಿತಿನ್‌ ಆರ್‌.ವಿ ಜಂಟಿಯಾಗಿ “ಡಾರ್ಕ್‌ ಫ್ಯಾಂಟಸಿ’ ಚಿತ್ರವನ್ನು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.