ಟಾಸ್‌ ವಿನ್‌ ನಿರೀಕ್ಷೆಯಲ್ಲಿ ದಯಾಳ್‌


Team Udayavani, Jul 14, 2017, 6:55 AM IST

Suchi-Toss-Win.jpg

ಸುಮಾರು ಐದು ವರ್ಷಗಳ ಹಿಂದೆ ‘ಒಂದು ರೂಪಾಯಿ ಎರಡು ಪ್ರೀತಿ’ ಎಂಬ ಸಿನಿಮಾ ಆರಂಭವಾಗಿರೋದು ನಿಮಗೆ ನೆನಪಿರಬಹುದು. ದಯಾಳ್‌ ಪದ್ಮನಾಭ್‌ ನಿರ್ದೇಶನದ ಸಿನಿಮಾವಿದು. ಒಂದು ಹಂತದಲ್ಲಿ ಆ ಸಿನಿಮಾ ನಿಂತೇ ಹೋಗಿತ್ತು. ಈಗ ದಯಾಳ್‌ಗೆ ಆ ಸಿನಿಮಾ ಬಿಡುಗಡೆ ಮಾಡುವ ಮನಸ್ಸಾಗಿದೆ. ಅದು ಬದಲಾದ ಟೈಟಲ್‌ನೊಂದಿಗೆ. ಹೌದು, ಚಿತ್ರದ ಶೀರ್ಷಿಕೆ  ಬದಲಾಗಿದೆ. ಈಗ ‘ಟಾಸ್‌’ ಎಂಬ ಶೀರ್ಷಿಕೆಯಡಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ‘ಒಂದು ರೂಪಾಯಿ ಎರಡು ಪ್ರೀತಿ’ ಎಂಬುದು ಟ್ಯಾಗ್‌ಲೈನ್‌ ಆಗಿದೆ.

ಅಷ್ಟಕ್ಕೂ ದಯಾಳ್‌ಗೆ ಈಗ ಸಿನಿಮಾ ಬಿಡುಗಡೆ ಮಾಡುವ ಮನಸ್ಸಾಗಿದ್ದು ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ, ಆ ಸಿನಿಮಾವಂತೆ. ‘ನಾನು ಈ ಸಿನಿಮಾವನ್ನು ನಂಬಿಕೊಂಡು, ಅದರ ಮೇಲಿನ ವಿಶ್ವಾಸದಿಂದ ಬಿಡುಗಡೆ ಮಾಡುತ್ತಿದ್ದೇನೆ. ನನ್ನನ್ನು ಬಿಡುಗಡೆ ಮಾಡು ಎಂದು ಆ ಸಿನಿಮಾ ಕೇಳುತ್ತಿತ್ತು. ನನಗೆ ಅದರ ಕಂಟೆಂಟ್‌ ಮೇಲೆ ವಿಶ್ವಾಸವಿದೆ. ಹಾಗಾಗಿ, ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದೇನೆ. ಚಿತ್ರರಂಗಕ್ಕೆ ಬಂದು ಈಗ ಸಾಕಷ್ಟು ಅನುಭವ ಆಗಿರುವುದರಿಂದ ಈ ಸಿನಿಮಾ ಒಂದು ವಾರ ಓಡಿದರೆ ಏನಾಗುತ್ತದೆ, ಎರಡು ವಾರ ಓಡಿದರೆ ಏನಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ನನಗಿದೆ. ಅದರ ಹೊರತಾಗಿ ಸಿನಿಮಾದಿಂದ ನಷ್ಟ ಆಯಿತು, ಎಲ್ಲವನ್ನು ಕಳೆದುಕೊಂಡೆ ಎಂಬ ಸೀನ್‌ ಇಲ್ಲಿ ಬರೋದಿಲ್ಲ’ ಎಂಬುದು ದಯಾಳ್‌ ಮಾತು. 

ಅಂದಹಾಗೆ, ಚಿತ್ರ ಜುಲೈ 21 ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ ದಯಾಳ್‌. ಈ ಹಿಂದೆ ‘ಹಗ್ಗದ ಕೊನೆ’, ‘ಆ್ಯಕ್ಟರ್‌’ ಸಿನಿಮಾ ಮೂಲಕ ಸಿಕ್ಕ ಒಳ್ಳೆಯ ಹೆಸರು, ‘ಟಾಸ್‌’ ಮೂಲಕ ಮತ್ತಷ್ಟು ಹೆಚ್ಚುತ್ತದೆ ಎಂಬ ವಿಶ್ವಾಸ ಕೂಡಾ ದಯಾಳ್‌ಗಿದೆ.

ದಯಾಳ್‌ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಮೂವರು ಪ್ರಮುಖ ವಿತರಕರಿಗೆ ತೋರಿಸಿದರಂತೆ. ಸಿನಿಮಾ ನೋಡಿದ ಅವರು ಸಿನಿಮಾ ಚೆನ್ನಾಗಿದೆ ಎಂದೇಳಿ, ವಿತರಣೆಗೆ ಅವರದ್ದೇ ಆದ ಷರತ್ತು ಹೇಳಿದರಂತೆ. ಆದರೆ, ದಯಾಳ್‌ ಮಾಡಿಕೊಂಡ ಪ್ಲ್ಯಾನ್‌ಗೆ ಅದು ವಕೌìಟ್‌ ಆಗದ ಕಾರಣ, ಈಗ ಸುಧೀರ್‌ ಎನ್ನುವವರು ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್‌ ರಾಘವೇಂದ್ರ, ಸಂದೀಪ್‌ ಹಾಗೂ ರಮ್ಯಾ ಬಾರ್ನಾ ನಟಿಸಿದ್ದಾರೆ. ವಿಜಯ್‌ ರಾಘವೇಂದ್ರ ಪ್ರಮೋಶನ್‌ಗೆ ಬರುತ್ತಿಲ್ಲ, ಫೋನ್‌ಗೂ ಪ್ರತಿಕ್ರಿಯಿಸುತ್ತಿಲ್ಲ ಎಂಬ ಬೇಸರ ದಯಾಳ್‌ಗಿದೆ. 

ರಮ್ಯಾ ಬಾರ್ನಾ ಅವರ ತಾಯಿಗೆ ಹುಷಾರಿಲ್ಲದ ಕಾರಣ ಪ್ರಮೋಶನ್‌ಗೆ ಬಂದಿಲ್ಲವಂತೆ. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಸಂದೀಪ್‌ ಸಿನಿಮಾ ಚೆನ್ನಾಗಿ ಮೂಡಿಬಂದಿರುವ ಬಗ್ಗೆ ಮಾತನಾಡಿದರು. ದಯಾಳ್‌ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿರುವ ಅವಿನಾಶ್‌, ಸಂಗೀತ ನಿರ್ದೇಶಕ ಗೌತಮ್‌ ಶ್ರೀವಾಸ್ತವ್‌, ಸಂಕಲನಕಾರ ಶ್ರೀ ‘ಟಾಸ್‌’ ಬಗ್ಗೆ ಮಾತನಾಡಿದರು.

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

6

Bantwal: ತುಂಬೆ ಜಂಕ್ಷನ್‌; ಸರಣಿ ಅಪಘಾತ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.