ಡೀಸೆಂಟ್ ಪ್ರಸ್ತ! ಅಶ್ಲೀಲತೆ ಇಲ್ಲ ಫ್ಯಾಮಿಲಿಯೇ ಎಲ್ಲಾ
Team Udayavani, Oct 26, 2018, 6:00 AM IST
“ಪ್ರಸ್ತ’ ಚಿತ್ರದ ಪತ್ರಿಕಾಗೋಷ್ಠಿಗೆ ಮುಂಚೆ ಪತ್ರಕರ್ತರ ಕೈಗೆ ನೀಡಿದ ಸಿನಿಮಾ ಕುರಿತ ಮಾಹಿತಿ ಪತ್ರ ನೋಡಿ ಪತ್ರಕರ್ತರು ಒಮ್ಮೆ ಆಶ್ಚರ್ಯಕ್ಕೊಳಗಾದರು.
ಅದಕ್ಕೆ ಕಾರಣ ನಿರ್ದೇಶಕರು ಕ್ರೆಡಿಟ್ ತಗೊಂಡ ಪಟ್ಟಿ. ಸುಮಾರು 15 ವಿಭಾಗಗಳಲ್ಲಿ ನಿರ್ದೇಶಕ ರವಿ ಶತಾಭಿಷ ತಮ್ಮ ಹೆಸರು ಹಾಕಿಕೊಂಡಿದ್ದರು. ಇಷ್ಟೇನಾ ಸಾರ್? ಎಂದರೆ, “ಇಲ್ಲಾ ಸಾರ್, ಇನ್ನೂ ತುಂಬಾ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಅವೆಲ್ಲವನ್ನು ಹಾಕಿಕೊಂಡಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ.
ಒಬ್ಬ ವ್ಯಕ್ತಿ ತುಂಬಾ ವಿಭಾಗಳಲ್ಲಿ ಕೆಲಸ ಮಾಡಿ ದಾಖಲೆ ಸೇರುವ ಉತ್ಸಾಹ ಕೂಡಾ ಅವರಿಗಿದೆ.”ಪ್ರಸ್ತ’ ಎಂಬ ಸಿನಿಮಾವನ್ನು ಮಾಡಿಮುಗಿಸಿದ್ದಾರೆ ರವಿ ಶತಾಭಿಷ. ನಿರ್ದೇಶಕನಾಗಬೇಕೆಂಬ ಉದ್ದೇಶದಿಂದಲೇ ಅವರು ಚಿತ್ರರಂಗಕ್ಕೆ ಬಂದಿದ್ದು, ಅದೀಗ ಈಡೇರಿದ ಖುಷಿ ಇದೆ. ಈಗಾಗಲೇ ಅವರ ನಿರ್ದೇಶನದ “ಪ್ರಸ್ತ’ ಚಿತ್ರಕ್ಕೆ ಸೆನ್ಸಾರ್ ಆಗಿದ್ದು “ಎ’ಪ್ರಮಾಣ ಪತ್ರ ನೀಡಿದ್ದಾರೆ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ಯಾವುದೇ ಡಬಲ್ ಮೀನಿಂಗ್ ಇಲ್ಲ.ಟೈಟಲ್‌ಗಾಗಿ “ಎ’ ಕೊಟ್ಟಿದ್ದಾರೆ ಎನ್ನುತ್ತಾರೆ. “ನಮ್ಮ ಚಿತ್ರದಲ್ಲಿ ಯಾವುದೇ ಡಬಲ್ ಮೀನಿಂಗ್ ಆಗಲೀ,ಅಶ್ಲೀಲ ದೃಶ್ಯಗಳಾಗಲೀ ಇಲ್ಲ. ಫ್ಯಾಮಿಲಿ ಕುಳಿತು ಈ ಸಿನಿಮಾ ನೋಡಬೇಕೆಂಬ ಕಾರಣಕ್ಕೆ ತುಂಬಾ ನೀಟಾಗಿ ಮಾಡಿದ್ದೇನೆ. ಆದರೆ ಸೆನ್ಸಾರ್ ಮಂಡಳಿ ಟೈಟಲ್‌ಗಾಗಿ “ಎ’ ಕೊಟ್ಟಿದೆ. ಅದು ಬಿಟ್ಟರೆ ಚಿತ್ರದಲ್ಲಿ ಬೇರೇನು ಇಲ್ಲ’ ಎಂದು ವಿವರ ನೀಡಿದರು ರವಿ.
“ಪ್ರಸ್ತ’ದಲ್ಲಿ ನಿರ್ದೇಶಕರು ಮದುವೆ ಶಾಸOಉ ಸೇರಿದಂತೆ ಹಲವು ಅಂಶಗಳನ್ನು ಹೇಳಿದ್ದಾರಂತೆ. ಈ ಚಿತ್ರದ ನಿರ್ಮಾಪಕರು ಕೂಡಾ ರವಿಯವರೇ.ಚಿತ್ರದಲ್ಲಿ ವಿಶ್ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ “ಸ್ಟೈಲ್ ರಾಜ ಎಂಬ ಸಿನಿಮಾ ಮಾಡಿದ್ದ ಗಿರೀಶ್ ಈಗ ತಮ್ಮ ಹೆಸರು ಬದಲಿಸಿಕೊಂಡು ವಿಶ್ ಆಗಿದ್ದಾರೆ.
“ನಿರ್ದೇಶಕರು ತುಂಬಾ ಡೀಸೆಂಟ್ ಆದ ಸಿನಿಮಾ ಮಾಡಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ನಾನು ಡಬಲ್ ಮೀನಿಂಗ್ ಡೈಲಾಗ್ ಹೇಳಿದಾಗಲೂ ಬೇಡ ಎಂದು ತೆಗೆಸಿದರು. ಹಾಗಾಗಿ ಈ ಸಿನಿಮಾವನ್ನು ಕುಟುಂಬ ಸಮೇತರಾಗಿ ನೋಡಬಹುದು’ ಎಂದರು ವಿಶ್.
ಚಿತ್ರದಲ್ಲಿ ವರ್ಷಾ ಹಾಗೂ ಯಾದ್ವಿಕಾ ನಾಯಕಿಯರು. ಅಲಂಕಾರ್ ಚಂದ್ರು ಖಳನಟರಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.