ಧೈರ್ಯಂ ಬೇಕುಂ, ಧೈರ್ಯಂ ಇದೇಂ!

Team Udayavani, Jan 20, 2017, 3:50 AM IST

pjimage (2).jpg

ಬ್ರೇಕ್‌ ಅಂತ ಕೂಗುತ್ತಲೇ ಎಲ್ಲರೂ ಒಬ್ಬೊಬ್ಬರೇ ಸೆಟ್‌ನಿಂದ ಹೊರಗೆ ಬಂದರು. ಹೊರಗೆ ಬರುತ್ತಿದ್ದಂತೆಯೇ ಅಲ್ಲಿ ಹುಲ್ಲು ಹಾಸಿನ ಮುಂದೆ, “ಧೈರ್ಯಂ’ ಎಂಬ ದೊಡ್ಡ ವಿನೈಲು. ಅದರೆದುರು ಒಂದಿಷ್ಟು ಖುರ್ಚಿಗಳು. ಎಲ್ಲರೂ ಒಂದೊಂದು ಚೇರು ಹಿಡಿದು ಕೂತರು.

“ಮಳೆ’ ನಂತರ ಶಿವು ತೇಜಸ್‌, ಈಗ “ಧೈರ್ಯಂ’ ಎಂಬ ಚಿತ್ರ ಮಾಡುತ್ತಿದ್ದಾರೆ. ಅಜೇಯ್‌ ರಾವ್‌ ಅಭಿನಯದ ಈ ಚಿತ್ರ ಮುಗಿಯುವ ಹಂತಕ್ಕೆ ಬಂದಿದ್ದು, ಅಷ್ಟರಲ್ಲಿ ಮಾಧ್ಯಮದವರೆದುರು ಚಿತ್ರದ ಬಗ್ಗೆ ಮಾತಾಡಿದ ಹಾಗೂ ಆಯಿತು, ಚಿತ್ರದ ಶೂಟಿಂಗ್‌ ತೋರಿಸಿದಂತೆಯೂ ಆಯಿತು ಎಂದು ಶಿವು, ಕಂಠೀರವ ಸ್ಟುಡಿಯೋಗೆ ಕರೆದಿದ್ದರು. ಮೊದಲು ಹಾಡಿನ ಚಿತ್ರೀಕರಣ ತೋರಿಸಿ, ನಂತರ ಅವರು ಮಾತಿಗೆ ಕುಂತರು.

ಇದೊಂದು ಕಾಮನ್‌ ಮ್ಯಾನ್‌ ಸಬೆjಕ್ಟ್ ಅಂತೆ. ಸಾಮಾನ್ಯ ಮನುಷ್ಯನೊಬ್ಬ ಧೈರ್ಯ ತೆಗೆದುಕೊಂಡರೆ, ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಈ ಚಿತ್ರದಲ್ಲಿ ಅವರು ಹೇಳುವುದಕ್ಕೆ ಹೊರಟಿದ್ದಾರಂತೆ. “ಇಲ್ಲಿ ಅಜೇಯ್‌ ಎದುರು ರವಿಶಂಕರ್‌ ಇದ್ದಾರೆ. ಒಂದು ಘಟನೆಯಿಂದ ಒಬ್ಬ ಕಾಲೇಜು ವಿದ್ಯಾರ್ಥಿಯ ಲೈಫ‌ು ಬದಲಾಗುತ್ತದೆ. ಅಲ್ಲಿಂದ ಅವನು ಏನೆಲ್ಲಾ ಮಾಡುತ್ತಾನೆ ಎಂದು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ’ ಎಂದರು ಶಿವು.

ಇಲ್ಲಿ ಅಜೇಯ್‌, ಕೆಳ ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. “ನನ್ನ ಪಾತ್ರ ಭಯ ಮತ್ತು ಧೈರ್ಯದ ನಡುವೆ ಟಾಸ್‌ ಆಗುತ್ತಾ ಇರುತ್ತೆ. ಸಾಮಾನ್ಯ ಮನುಷ್ಯನೊಬ್ಬ ಧೈರ್ಯ ತಗೊಂಡು ಸಾಧನೆ ಮಾಡುವಂತಹ ಪಾತ್ರ ಇದು’ ಎಂದರು. ಇನ್ನು ನಾಯಕಿ ಅದಿತಿಗೆ ಇದು ಮೊದಲನೇ ಸಿನಿಮಾ. ಮನೆ ಮಗಳ ತರಹ ಇಡೀ ಚಿತ್ರತಂಡ ತಮ್ಮನ್ನು ನೋಡಿಕೊಳ್ಳುತ್ತಿದೆ ಎಂಬ ಖುಷಿ ಆಕೆಗೆ ಇದೆ. ಈ ಚಿತ್ರದಲ್ಲಿ ಆಕೆಯದು ಗಟ್ಟಿಗಿತ್ತಿಯ ಪಾತ್ರವಂತೆ.

ದಾವಣಗೆರೆಯ ಕೆ. ರಾಜು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಸ್ಕ್ರಿಪ್ಟ್ ಚೆನ್ನಾಗಿತ್ತು ಅಂತ ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.

ಒಂದೊಳ್ಳೆಯ ತಂಡ ಮಾಡಿ ಕೊಂಡು, ಯಾವುದಕ್ಕೂ ಕೊರತೆ ಇಲ್ಲದೆ ಸಿನಿಮಾ ಮಾಡಿದ್ದೇವೆ ಎಂದು ಹೇಳಿಕೊಂಡರು ರಾಜು. ಇನ್ನು ಅಜೇಯ್‌, ನೃತ್ಯದಲ್ಲಿ ಸಾಕಷ್ಟು ಸುಧಾರಿಸಿ ದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅದನ್ನೇ ಹೇಳಿದರು ಅವರು. ಎಮಿಲ್‌ ಅವರ ಸಂಗೀತ ನಿರ್ದೇಶನ ಮತ್ತು ಶೇಖರ್‌ ಚಂದ್ರು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅವರಿಬ್ಬರೂ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಳ್ಳುವಷ್ಟರಲ್ಲಿ ಪತ್ರಿಕಾಗೋಷ್ಠಿಯೂ ಮುಗಿಯಿತು.

– ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.