ಧ್ರುವ ಈಗ ದುಬಾರಿ ಹೀರೋ…
ಉದಯ್ ಮೆಹ್ತಾ ನಿರ್ಮಾಣದ ಬಿಗ್ ಬಜೆಟ್ ಚಿತ್ರ
Team Udayavani, Nov 6, 2020, 12:10 PM IST
ಧ್ರುವ ಸರ್ಜಾ ಈಗ ಸಿಕ್ಕಾಪಟ್ಟೆ ದುಬಾರಿಯಾಗಿದ್ದಾರೆ…. – ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಲೆಕ್ಕಾಚಾರ ಅವರ ಸಂಭಾವನೆಯ ಸುತ್ತ ಸುತ್ತಬಹುದು. ಆದರೆ ನಾವು ಹೇಳುತ್ತಿರುವುದು ಅವರ ಸಂಭಾವನೆ ಕುರಿತಾಗಿಯಲ್ಲ, ಹೊಸ ಸಿನಿಮಾ ಬಗ್ಗೆ.
ಹೌದು, ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದೆ. ಅದು “ದುಬಾರಿ’. ಹೀಗೊಂದು ಸ್ಟೈಲಿಶ್ ಹಾಗೂ ಪಕ್ಕಾ ಕಮರ್ಷಿಯಲ್ ಟೈಟಲ್ ಅನ್ನು ಅವರ ಸಿನಿಮಾಕ್ಕಿಡಲಾಗಿದೆ. ಈ ಮೂಲಕ ಧ್ರುವ ಮತ್ತೂಮ್ಮೆ ತಮ್ಮ ನೆಚ್ಚಿನ “ರಿ’ ಟೈಟಲ್‌ನಡಿ ನಟಿಸಲಿದ್ದಾರೆ. “ಅದ್ಧೂರಿ’, “ಭರ್ಜರಿ’… ಹೀಗೆ “ರಿ’ಯಿಂದ ಕೊನೆಯಾಗುವ ಟೈಟಲ್‌ನಲ್ಲಿ ದೊಡ್ಡ ಹಿಟ್‌ಕೊಟ್ಟಿದ್ದ ಧ್ರುವ ಈಗ “ದುಬಾರಿ’ಯಾಗಿದ್ದಾರೆ.
ಉದಯ್ ಮೆಹ್ತಾ ಈ ಚಿತ್ರದ ನಿರ್ಮಾಪಕರು. ಈಗಾಗಲೇಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನುಕೊಟ್ಟಿರುವ ಉದಯ್ ಮೆಹ್ತಾ ಈಗ ಧ್ರುವ ಸರ್ಜಾ ನಟನೆಯಲ್ಲಿ ಮತ್ತೂಂದು ಬಿಗ್ ಬಜೆಟ್ “ದುಬಾರಿ’ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಇಂದು ನಡೆಯಲಿದೆ. ಚಿತ್ರದ ಬಗ್ಗೆ ಮಾತನಾಡುವ ಉದಯ್ ಮೆಹ್ತಾ, “ಕಥೆ ತುಂಬಾ ಚೆನ್ನಾಗಿದೆ. ಧ್ರುವ ಅವರ ಮ್ಯಾನರಿಸಂಗೆ ಚೆನ್ನಾಗಿ ಹೊಂದುತ್ತದೆ. ಇದೊಂದು ಬಿಗ್ ಬಜೆಟ್‌ನ “ದುಬಾರಿ’ ಸಿನಿಮಾವಾಗಲಿದೆ’ ಎನ್ನುತ್ತಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ “ಪೊಗರು’ ಚಿತ್ರವನ್ನು ನಿರ್ದೇಶಿಸಿರುವ ನಂದಕಿಶೋರ್‌ಗೆ ಇದು ಧ್ರುವ ಜೊತೆ ಎರಡನೇ ಸಿನಿಮಾ. ನವೆಂಬರ್ ಮೂರನೇ ವಾರದಿಂದ “ದುಬಾರಿ’ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಇತರ ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣವಿದೆ.
ಪೊಗರು ರೆಡಿ : ನಟ ಧ್ರುವ ಸರ್ಜಾ “ಪೊಗರು’ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಸಿದ್ಧತೆಯಲ್ಲಿದೆ. ಈಗಾಗಲೇ ಬಿಡುಗಡೆಯಾಗಿರುವ “ಪೊಗರು’ ಚಿತ್ರದಕರಾಬ್ ಸಾಂಗ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. “ಪೊಗರು’ ಸಿನಿಮಾದಲ್ಲಿ ಸಂಪೂರ್ಣವಾಗಿ ಧ್ರುವ ಗೆಟಪ್ ಬದಲಾಗಿದೆ. ಈ ಚಿತ್ರಕ್ಕಾಗಿ ಧ್ರುವ ಮಾಡಿದ ತಯಾರಿ ಇದೆಯಲ್ಲ, ಅದು ಸುಲಭದ್ದಲ್ಲ. ಬಾಡಿ ಬಿಲ್ಡಿಂಗ್‌ನಿಂದ ಹಿಡಿದು ಪ್ರತಿಯೊಂದು ವಿಚಾರ ದಲ್ಲೂ ಧ್ರುವ ಸಾಕಷ್ಟು ಶ್ರಮಿಸಿದ್ದಾರೆ. ಈ ಹಿಂದಿನ ಚಿತ್ರಗಳಲ್ಲೇಕಟ್ಟು ಮಸ್ತಾಗಿ ಕಾಣಿಸಿ ಕೊಂಡಿದ್ದ ಧ್ರುವ “ಪೊಗರು’ ಚಿತ್ರದ ಲ್ಲಂತೂ ಇನ್ನೂ ಕಟ್ಟು ಮಸ್ತಾಗಿ ಅಭಿಮಾನಿ ಗಳ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಹೈಸ್ಕೂಲ್ ಹುಡುಗನ ಗೆಟಪ್‌ನಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದು. ಹೌದು, ಚಿತ್ರದ ಪ್ರಮುಖ ದೃಶ್ಯವೊಂದರಲ್ಲಿ ಧ್ರುವ ಸರ್ಜಾ ಹೈಸ್ಕೂಲ್ ಹುಡುಗ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಗೆಟಪ್ ಗಾಗಿ ಧ್ರುವ ಬರೋಬ್ಬರಿ 30ಕೆ.ಜಿ. ತೂಕ ಇಳಿಸಿದ್ದರಂತೆ ಧ್ರುವ. ಬಿ.ಕೆ. ಗಂಗಾಧರ್ “ಪೊಗರು’ ಚಿತ್ರದ ನಿರ್ಮಾಪಕರು.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.