ಲಾಕ್‌ಡೌನ್ ‘ಖುಷಿ’ಯಾಗಿದೆ. ಆದರೆ.. ರಿಲೀಸ್ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ
Team Udayavani, Jun 18, 2021, 1:42 PM IST
ಕಳೆದ ವರ್ಷದ ಆರಂಭದಲ್ಲಿ ತೆರೆಕಂಡ “ದಿಯಾ’ ಚಿತ್ರದ ಮೂಲಕ ಸಿನಿಪ್ರಿಯರ ದಿಲ್ ಗೆದ್ದ ನಟಿ ಖುಷಿ ರವಿ. “ದಿಯಾ’ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯಶಸ್ವಿಯಾದ ಖುಷಿ ಕೈಯಲ್ಲಿ ಮೂರ್‍ನಾಲ್ಕು ಸಿನಿಮಾಗಳಿವೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಖುಷಿ ನಾಯಕಿಯಾಗಿ ಅಭಿನಯಿಸಿರುವ ಕನಿಷ್ಟ ಎರಡು ಸಿನಿಮಾಗಳಾದ್ರೂ ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳಂತೆ ಸಿನಿಮಾದಲ್ಲೂ ಲೆಕ್ಕಾಚಾರಗಳು ತಲೆಕೆಳಗಾಗಿ, ಥಿಯೇಟರ್‌ಗಳು ಬಂದ್ ಆಗಿರುವುದರಿಂದ, ಸದ್ಯ ಖುಷಿ ಅಭಿನಯದ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಎದುರು ನೋಡುತ್ತಿವೆ.
ಇದೇ ವೇಳೆ ಮಾತಿಗೆ ಸಿಕ್ಕ ನಟಿ ಖುಷಿ ರವಿ, “”ದಿಯಾ’ ಸಿನಿಮಾ ಆದಮೇಲೆ ಒಳ್ಳೆಯ ಪ್ರಾಜೆಕ್ಟ್ಗಳು ಸಿಕ್ಕಿವೆ. ಎಲ್ಲವೂ ಕೂಡ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದೆ. ಲಾಕ್‌ಡೌನ್ ಇಲ್ಲದೆ ಥಿಯೇಟರ್‌ಗಳು ಓಪನ್ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಕನಿಷ್ಟ ಅವುಗಳಲ್ಲಿ ಒಂದೆರಡು ಸಿನಿಮಾಗಳಾದ್ರೂ ರಿಲೀಸ್ ಆಗಿರುತ್ತಿದ್ದವು. ಸದ್ಯಕ್ಕೆ ಕೋವಿಡ್ ಭಯದಿಂದ ಥಿಯೇಟರ್‌ಗಳು ಬಂದ್ ಆಗಿರೋದ್ರಿಂದ, ಅವು ಮತ್ತೆ ಯಾವಾಗ ರೀ-ಓಪನ್ ಆಗುತ್ತವೆಯೋ, ನಮ್ಮ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತದೆಯೋ ಗೊತ್ತಿಲ್ಲ. ನಾನು ಕೂಡ ಅದನ್ನೇ ಕಾಯುತ್ತಿದ್ದೇನೆ’ ಎನ್ನುತ್ತಾರೆ.
“ಕಳೆದ ಮೂರ್‍ನಾಲ್ಕು ವರ್ಷದಿಂದ ಸಿನಿಮಾಗಳಲ್ಲಿ ಹೆಚ್ಚು ಬಿಝಿಯಾಗಿದ್ದರಿಂದ, ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ನನ್ನ ಮಗಳು, ಗಂಡ ಹೀಗೆ ಫ್ಯಾಮಿಲಿಯಲ್ಲಿ ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದ್ರೆ ಈ ಲಾಕ್‌ಡೌನ್‌ನಿಂದ ಸಿನಿಮಾ ಶೂಟಿಂಗ್ ಸೇರಿದಂತೆ ಬೇರೇನೂ ಆ್ಯಕ್ಟಿವಿಟಿಸ್ ಇಲ್ಲದಿದ್ದರಿಂದ, ಕಂಪ್ಲೀಟ್ ಮನೆಯಲ್ಲೇ ಲಾಕ್ ಆಗಬೇಕಾಯ್ತು. ಹೀಗಾಗಿ ಮನೆಯಲ್ಲಿ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯೋದಕ್ಕೆ ಅನುಕೂಲವಾಯ್ತು. ಆ ಮಟ್ಟಿಗೆ ಲಾಕ್ ಡೌನ್‌ನಿಂದ “ಖುಷಿ’ಯಾಗಿದೆ’ ಎನ್ನುತ್ತಾರೆ ಖುಷಿ.
“ಕೋವಿಡ್ ಭಯ ಹೆಚ್ಚಾಗಿದ್ದರಿಂದ, ಲಾಕ್‌ಡೌನ್‌ನಲ್ಲಿ ಎಲ್ಲರೂ ಅನಿವಾರ್ಯವಾಗಿ ಮನೆಯಲ್ಲಿರದೆ ಬೇರೆ ದಾರಿಯಿರಲಿಲ್ಲ. ಆದರೆ ನನ್ನ ಕೆಲಸ ಮತ್ತು ವೃತ್ತಿಯ ವಿಷಯಕ್ಕೆ ಬಂದಾಗ ಲಾಕ್‌ಡೌನ್ ಅಥವಾ ಮತ್ತಿತರ ಯಾವುದೋ ಕಾರಣಗಳಿಂದ ನಾನು ಮನೆಯಲ್ಲಿ ಹೆಚ್ಚು ಸಮಯ ಕುಳಿತುಕೊಂಡಿರಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟು ಬೇಗ ಕೋವಿಡ್ ಭಯ ದೂರವಾಗಿ, ಲಾಕ್‌ಡೌನ್ ಕ್ಲಿಯರ್ ಆಗಲಿ. ಮೊದಲಿನಂತೆ ನಮ್ಮ ಕೆಲಸಗಳು ಶುರುವಾಗಲಿ ಎಂದು ಬಯಸುತ್ತೇನೆ’ ಎನ್ನುತ್ತಾರೆ ಖುಷಿ.
ಸದ್ಯ ಖುಷಿ ರವಿ ಅಭಿನಯದ “ನಕ್ಷೆ’, “ಸ್ಫೂಕಿ ಕಾಲೇಜ್’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಥಿಯೇಟರ್ ಗಳು ಓಪನ್ ಆಗುತ್ತಿದ್ದಂತೆ ರಿಲೀಸ್ ಆಗುವ ಯೋಚನೆಯಲ್ಲಿವೆ. ಇದರ ನಡುವೆ ಇನ್ನೂ ಪೃಥ್ವಿ ಅಂಬಾರ್ ನಾಯಕನಾಗಿರುವ ಹೊಸ ಚಿತ್ರದಲ್ಲೂ ಖುಷಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಲಾಕ್‌ಡೌನ್ ತೆರೆವಾಗುತ್ತಿದ್ದಂತೆ ಆ ಸಿನಿಮಾದ ಶೂಟಿಂಗ್ ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಖುಷಿ.
ಇನ್ನು ಈ ಲಾಕ್‌ಡೌನ್‌ನಲ್ಲಿ ಒಂದಷ್ಟು ಒಳ್ಳೆಯ ಸ್ಕ್ರಿಪ್ಟ್ ಕೇಳಿರುವ ಖುಷಿ, ಅದರಲ್ಲಿ ಕೆಲವೊಂದನ್ನು ಒಪ್ಪಿಕೊಂಡಿದ್ದು, ಆ ಸಿನಿಮಾಗಳು ಕೂಡ ಶೀಘ್ರದಲ್ಲಿಯೇ ಅನೌನ್ಸ್ ಆಗಬಹುದು ಎನ್ನುವ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.