ಶಿವಣ್ಣ ದಿ ಘೋಸ್ಟ್‌ ರೈಡರ್‌; ಹೊಸ ಗೆಟಪ್‌ ನಲ್ಲಿ ಪ್ರೇಕ್ಷಕರ ಮುಂದೆ..


Team Udayavani, Mar 31, 2023, 2:27 PM IST

ಶಿವಣ್ಣ ದಿ ಘೋಸ್ಟ್‌ ರೈಡರ್‌; ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ..

ಆರಂಭದಲ್ಲಿಯೇ ಚಿತ್ರತಂಡ ಹೇಳಿರುವಂತೆ, “ಘೋಸ್ಟ್‌’ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಈಗಾಗಲೇ ಬಿಡುಗಡೆಯಾಗಿರುವ “ಘೋಸ್ಟ್‌’ ಸಿನಿಮಾದ ಪೋಸ್ಟರ್‌ಗಳಲ್ಲೂ ಶಿವಣ್ಣ ಅವರ ಕೆಲವು ಗೆಟಪ್‌ಗ್ಳು ಗಮನ ಸೆಳೆಯುವಂತಿದೆ. ಹಾಗಾದರೆ, “ಘೋಸ್ಟ್‌’ ಸಿನಿಮಾದಲ್ಲಿ ನಿಜಕ್ಕೂ ಶಿವಣ್ಣ ಎಷ್ಟು ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲೂ ಇದೆ. ಇದಕ್ಕೆ ಈಗ ಶಿವಣ್ಣ ಅವರೇ ಉತ್ತರಿಸಿದ್ದಾರೆ.

“ಈ ಸಿನಿಮಾದಲ್ಲಿ ನಾನು 3 ಶೇಡ್‌ನ‌ಲ್ಲಿ ಕಾಣಿಸಿಕೊಳ್ತೀನಿ. ಕಥೆ ಮತ್ತು ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ 3 ಲುಕ್‌ನಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದು ಎಲ್ಲರಿಗೂ ಖುಷಿ ಕೊಡಲಿದೆ ಅಂತ ಭಾವಿಸಿದ್ದೇನೆ. ಇದಕ್ಕಿಂತ ಹೆಚ್ಚಾಗಿ ಈಗಲೇ ನನ್ನ ಪಾತ್ರದ ಬಗ್ಗೆ ಹೆಚ್ಚೇನೂ ಮಾತನಾಡಲಾರೆ. ಆಡಿಯನ್ಸ್‌ ಥಿಯೇಟರ್‌ನಲ್ಲಿ ನೋಡುವಾಗಲೂ ಒಂದಷ್ಟು ಸಸ್ಪೆನ್ಸ್‌- ಥ್ರಿಲ್ಲಿಂಗ್‌ ಇರಲಿ’ ಎನ್ನುವುದು ಶಿವಣ್ಣ ಮಾತು.

ಪ್ಯಾನ್‌ ಇಂಡಿಯಾದಲ್ಲಿ ಶಿವಣ್ಣ :”ಘೋಸ್ಟ್‌’ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಏಕಕಾಲದಲ್ಲೆ ನಿರ್ಮಾಣವಾಗುತ್ತಿದೆ. ಸಿನಿಮಾದಲ್ಲಿ ನಟ ಶಿವರಾಜಕುಮಾರ್‌ ಅವರೊಂದಿಗೆ ಬಹುಭಾಷಾ ನಟರಾದ ಅನುಪಮ್‌ ಖೇರ್‌, ಜಯರಾಮ್‌ ಇನ್ನಿತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಇಂಥ ದಿಗ್ಗಜರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಶಿವಣ್ಣ ಕೂಡ ಫ‌ುಲ್‌ ಖುಷಿಯಾಗಿದ್ದಾರೆ.

“ಅನುಪಮ್‌ ಖೇರ್‌ ಅವರು ದೇಶದಲ್ಲಿ ಒಂದೇ ಅಲ್ಲ, ವಿಶ್ವದಲ್ಲಿ ಒಳ್ಳೆಯ ನಟ. ಅವರಿಂದ ಕಲಿಯುವುದು ಸಾಕಷ್ಟಿದೆ. ಸಿನಿಮಾದಲ್ಲಿ ಅವರಿಗೊಂದು ವಿಶೇಷ ಪಾತ್ರವಿದೆ. ಖಂಡಿತ ಅವರ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಜಯರಾಮ್‌ ಅವರೊಂದಿಗೆ ಅಭಿನಯಿಸಲು ಕಾಲ ಕೂಡಿ ಬಂದಿರಲಿಲ್ಲ. ಈ ಸಿನಿಮಾದಲ್ಲಿ ಅವರೊಂದಿಗೂ ಅಭಿನಯಿಸುವ ಅವಕಾಶ ಬಂದಿದೆ. ಈ ಸಿನಿಮಾದಲ್ಲಿ ಜಯರಾಮ್‌ ಅವರಿಂದ ಒಂದು ಪಾತ್ರ ಮಾಡಿಸೋಣ ಅಂತ ನಾನು ಹೇಳಿದ್ದೆ. ಟೀಮ್‌ ಕೂಡ ಈ ಪಾತ್ರಕ್ಕೆ ಅವರೇ ಸೂಕ್ತ ಎನಿಸಿತು. ಇಡೀ ಸಿನಿಮಾದ ಶೂಟಿಂಗ್‌ ಖುಷಿಕೊಡುತ್ತಿದೆ’ ಎಂದರು ಶಿವರಾಜಕುಮಾರ್‌.

2 ಪಾರ್ಟ್‌ನಲ್ಲಿ “ಘೋಸ್ಟ್‌’:  “”ಘೋಸ್ಟ್‌’ ಸಿನಿಮಾ ಎರಡು ಪಾರ್ಟ್‌ನಲ್ಲಿ ಬರುತ್ತದೆ’ ಇಂಥದ್ದೊಂದು ಮಾಹಿತಿಯನ್ನು ಸ್ವತಃ ಶಿವರಾಜಕುಮಾರ್‌ ಅವರೇ ಹಂಚಿಕೊಂಡಿದ್ದಾರೆ. ಈಗಾಗಲೇ “ಘೋಸ್ಟ್‌’ ಮೊದಲ ಭಾಗದ ಚಿತ್ರೀಕರಣ ಶೇಕಡಾ 90ರಷ್ಟು ಪೂರ್ಣಗೊಂಡಿದೆ. “ಘೋಸ್ಟ್‌’ ಮೊದಲ ಭಾಗ ಬಿಡುಗಡೆಯಾದ ನಂತರ “ಘೋಸ್ಟ್‌’ ಎರಡನೇ ಭಾಗ ಕೂಡ ತೆರೆಗೆ ಬರಲಿದೆ. ಮೊದಲ ಭಾಗದಲ್ಲಿರುವ ಬಹುತೇಕ ಎಲ್ಲ ಕಲಾವಿದರೂ ಎರಡನೇ ಭಾಗದಲ್ಲೂ ಇರಲಿದ್ದಾರೆ. ನಿರ್ದೇಶಕ ಶ್ರೀನಿ, ನಿರ್ಮಾಪಕ ಸಂದೇಶ್‌ ನಾಗರಾಜ್‌ ದೊಡ್ಡ ಕ್ಯಾನ್ವಾಸ್‌ನಲ್ಲಿ, ಬಿಗ್‌ ಬಜೆಟ್‌ನಲ್ಲಿ “ಘೋಸ್ಟ್‌’ ಸಿನಿಮಾ ಮಾಡುತ್ತಿದ್ದಾರೆ. ಎಲ್ಲ ಥರದ ಎಂಟರ್‌ಟೈನ್ಮೆಂಟ್‌ “ಘೋಸ್ಟ್‌’ನಲ್ಲಿ ಇರಲಿದೆ. ಎಲ್ಲರೂ ಎಂಜಾಯ್‌ ಮಾಡುವಂಥ ಸಿನಿಮಾ ಆಗಲಿದೆ’ ಎಂಬ ವಿಶ್ವಾಸದ ಮಾತು ಶಿವಣ್ಣ ಅವರದ್ದು.

ವರ್ಷಾಂತ್ಯಕ್ಕೆ ದರ್ಶನ  ಸದ್ಯ “ಘೋಸ್ಟ್‌’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಲಿದ್ದು, ಮತ್ತೂಂದೆಡೆ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ಭರದಿಂದ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ವೇಳೆಗೆ “ಘೋಸ್ಟ್‌’ ತೆರೆಗೆ ಬರಲಿದೆ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.