ಕೃಷ್ಣನ ಲವ್ ಸ್ಟೋರಿ ‘ದಿಲ್ ಪಸಂದ್’ ಇಂದು ತೆರೆಗೆ
Team Udayavani, Nov 11, 2022, 9:14 AM IST
ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ “ದಿಲ್ ಪಸಂದ್’ ಚಿತ್ರ ಇಂದು ತೆರೆಕಾಣುತ್ತಿದೆ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ಕೃಷ್ಣ ಈಗ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಇದೊಂದು ಲವ್‌ಸ್ಟೋರಿಯಾಗಿದ್ದು, ಇಡೀ ಸಿನಿಮಾ ಕಾಮಿಡಿ ಹಿನ್ನೆಲೆಯಲ್ಲಿ ಸಾಗುತ್ತದೆ. ಸುಮನ್ ಕ್ರಾಂತಿ ನಿರ್ಮಾಣದ ಈ ಸಿನಿಮಾವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿಶ್ವಿಕಾ ಹಾಗೂ ಮೇಘಾ ಶೆಟ್ಟಿ ನಾಯಕಿಯರು.
“ನಾನು ಕಥೆ ಕೇಳಬೇಕಾದರೆ ಸಾಕಷ್ಟು ಖುಷಿ ಪಟ್ಟಿದೆ. ಸಾಕಷ್ಟು ಎಂಜಾಯ್ ಮಾಡಿಕೊಂಡು ಡಬ್ಬಿಂಗ್ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ ದಿಲ್ ಪಸಂದ್ ಎಲ್ಲರಿಗೂ ಪ್ರಿಯವಾಗಲಿದೆ. ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ’ ಎಂಬ ವಿಶ್ವಾಸ ನಾಯಕ ಕೃಷ್ಣ ಅವರದು.
ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ನಾಯಕಿಯರು. ತಮ್ಮ ಪಾತ್ರದ ಬಗ್ಗೆ ಮಾತನಾಡುವ ನಿಶ್ವಿಕಾ, “ಐಶು ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ತುಂಬಾ ಎಮೋಷನ್ ಹುಡುಗಿ ನಾನು. ಲವ್ ಟ್ರ್ಯಾಕ್ ಇರುವ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ಕಂಪ್ಲೀಟ್ ಲವ್ ಸ್ಟೋರಿಯಳ್ಳ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ನಾನು ನಟಿಸಿರುವ ಪೂರ್ಣ ಪ್ರೇಮಕಥೆಯುಳ್ಳ ಮೊದಲ ಚಿತ್ರ “ದಿಲ್ ಪಸಂದ್’ ಎನ್ನುವುದು ನಿಶ್ವಿಕಾ ಮಾತು.
ಇದನ್ನೂ ನೋಡಿ:ಯಲ್ಲಾಪುರ: ಅಡಿಕೆ ಕೊಯ್ಯುವ ವಿಚಾರದಲ್ಲಿ ಉಂಟಾದ ಕಲಹ; ಹಲ್ಲೆ, ಆತ್ಮಹತ್ಯೆಗೆ ಯತ್ನ
ಮೇಘಾ ಶೆಟ್ಟಿ ಈ ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿದ್ದಾರಂತೆ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ ದಿಲ್ ಪಸಂದ್. ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಾಗಿದೆ ಎನ್ನುತ್ತಾರೆ ಮೇಘಾ.
“ದಿಲ್ ಪಸಂದ್’ ಚಿತ್ರದ ಮತ್ತೂಂದು ವಿಶೇಷವೆಂದರೆ ಈ ಚಿತ್ರದಲ್ಲಿ ಇಬ್ಬರು ಕೃಷ್ಣಂದಿರು ಜೊತೆಯಾಗಿದ್ದಾರೆ. ಅದು “ಡಾರ್ಲಿಂಗ್’ ಕೃಷ್ಣ ಹಾಗೂ ಸ್ಯಾಂಡಲ್‌ವುಡ್ ಕೃಷ್ಣ. ಸ್ಯಾಂಡಲ್‌ವುಡ್ ನಲ್ಲಿ ಕೃಷ್ಣ ಸೀರಿಸ್ ಸಿನಿಮಾಗಳ ಮೂಲಕ ಕೃಷ್ಣ ಎನಿಸಿಕೊಂಡಿರುವ ಅಜೇಯ್ ರಾವ್ “ದಿಲ್ ಪಸಂದ್’ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಅದು ಚಿತ್ರದ ಟರ್ನಿಂಗ್ ಪಾಯಿಂಟ್ ಎನ್ನುವುದು ಚಿತ್ರತಂಡದ ಮಾತು.
ಇನ್ನು ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಡಾರ್ಲಿಂಗ್ ಕೃಷ್ಣ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ನಟಿಸಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ “ದಿಲ್ ಪಸಂದ್ ‘ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.