ನೇರ, ದಿಟ್ಟ , ಖಲಂದರ! ಕಲರ್‌ಫುಲ್ ಹುಡುಗನ ಮಸ್ತ್ ಸಿನಿಮಾ
Team Udayavani, Mar 31, 2017, 10:47 AM IST
ರವಿಚಂದ್ರನ್ ಅಭಿನಯದ “ದೃಶ್ಯಂ’ ಚಿತ್ರದಲ್ಲಿ ಮಗಳ ಪಾತ್ರಧಾರಿಯಾಗಿದ್ದ ಸ್ವರೂಪಿಣಿ ನಾಯಕಿಯಾಗುತ್ತಿದ್ದಾರೆ ಅಂತ ಈ ಹಿಂದೆ
ಹೇಳಲಾಗಿತ್ತು. ಅದಾಗಲೇ ಸ್ವರೂಪಿಣಿ ನಾಯಕಿಯಾದ ಚಿತ್ರವೊಂದು ಸದ್ದಿಲ್ಲದೆಯೇ ಪೂರ್ಣಗೊಂಡು, ಇದೀಗ ಬಿಡುಗಡೆ ಹಂತಕ್ಕೆ
ಬಂದಿದೆ. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ರಾಜ್‌ಕುಮಾರ್ ಆದಿತ್ಯ, “ಮಸ್ತ್ ಖಲಂದರ್’ ಚಿತ್ರ ಮಾಡಿ ಈಗ ಬಿಡುಗಡೆಗೆ ಅಣಿಯಾಗಿದ್ದಾರೆ. ಈ ಚಿತ್ರಕ್ಕೆ ನಿತಿನ್ ಹೀರೋ. ಈ ಹಿಂದೆ “ಹೊಸ ಪ್ರೇಮ ಪುರಾಣ’ ಚಿತ್ರ ಮಾಡಿದ್ದ ನಿತಿನ್, ನಾಲ್ಕು ವರ್ಷ ಸುದ್ದಿಯೇ ಇರಲಿಲ್ಲ. ಈಗ “ಮಸ್ತ್ ಖಲಂದರ್’ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ.
ಈ ಚಿತ್ರದ ಶೀರ್ಷಿಕೆಗೆ “ನಮ್ ಕತೆ ನಿಮ್ ಜೊತೆ’ ಎಂಬ ಅಡಿಬರಹವಿದೆ. ಚಿತ್ರದ ನಾಯಕ ಸದಾ ಬಿಂದಾಸ್ ಆಗಿರಬೇಕೆಂದುಕೊಳ್ಳುವ ವ್ಯಕ್ತಿತ್ವ ಕಲರ್ ಫುಲ್ ಲೈಫನ್ನು ಎಂಜಾಯ್ ಮಾಡೋದೇ ಅವನ ಗುರಿ. ನಿಜಾಂಶವನ್ನು ನೇರವಾಗಿ ಹೇಳುವ ಹುಡುಗ. ತನ್ನ ಬದುಕಿನಲ್ಲಾಗುವ ಎಲ್ಲವನ್ನೂ ಮನರಂಜನೆ ಮೂಲಕವೇ ಹೇಳುತ್ತ ಹೋಗುತ್ತಾನೆ. ಒಟ್ಟಾರೆ, ಈಗಿನ ಹುಡುಗ, ಹುಡುಗಿಯರ ಜೀವನ ಶೈಲಿ ಬಗ್ಗೆ ಜನರು ಹೇಗೆಲ್ಲಾ ಆಡಿಕೊಳ್ಳುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರವನ್ನು ಬೆಂಗಳೂರು ಹಾಗೂ ಗೋವಾ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಧುಗಿರಿಯಲ್ಲಿ ಸುಮಾರು 6 ಸಾವಿರ ಜನರನ್ನು ಸೇರಿಸಿ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ಸಿನಿಮಾ ಮೂಲಕ ನಿತಿನ್ ಗೆ ನಿರ್ಮಾಪಕರು “ಸ್ಟೈಲಿಶ್ ಸ್ಟಾರ್’ ಎಂಬ ಬಿರುದು ಕೊಟ್ಟಿದ್ದಾರೆ. ಅದಕ್ಕೆ ಕಾರಣ, ತೆರೆಯ ಮೇಲೆ ಸಾಕಷ್ಟು ಸ್ಟೈಲ್ ಮಾಡಿದ್ದರಿಂದ ಆ ಬಿರುದು ಕೊಡಲಾಗಿದೆ ಎಂಬುದು ನಿರ್ಮಾಪಕ ಎಸ್.ಎಲ್.ಚಂದ್ರು ಮಾತು. ಅಂದಹಾಗೆ, ಚಂದ್ರು ಗೀತೆರಚನೆಕಾರರಾಗಿದ್ದವರು. ಈ ಚಿತ್ರದಲ್ಲಿ ನಿರ್ಮಾಪಕರೂ ಆಗಿದ್ದಾರೆ. ನಿರ್ಮಾಣದ ಜತೆಗೆ ಹಾಡುಗಳನ್ನೂ ಬರೆದಿದ್ದಾರೆ. ಎಸ್.ಪ್ರೇಮ್‌ಕುಮಾರ್ ಆರು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
ಇನ್ನು, ಇಲ್ಲಿ ನಾಯಕಿ ತಾಯಿಯಾಗಿ ಸ್ವಾತಿ ನಟಿಸಿದ್ದಾರೆ. ಸುಮಾರು 12 ವರ್ಷಗಳ ಬಳಿಕ ಒಪ್ಪಿಕೊಂಡ ಸಿನಿಮಾ ಇದಾಗಿದ್ದರಿಂದ ಅವರಿಗೆ ಒಳ್ಳೆಯ ಪಾತ್ರವೇ ಸಿಕ್ಕಿದೆಯಂತೆ. ನಿರ್ಮಾಣದಲ್ಲಿ ಲಿಯಾ.ಕೆ.ಜಿ.ಸ್ವಾಮಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಬಿಡುಗಡೆ ತಯಾರಿ
ನಡೆಯುತ್ತಿದ್ದು, ಮೇ ತಿಂಗಳಲ್ಲಿ ಪ್ರೇಕ್ಷಕರ ಎದುರು ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.