ದಾರಿ ತಪ್ಪಿದ ಮಕ್ಕಳು: ಜಂಗಲ್‌ ಬುಕ್‌ ಅಲ್ಲ; ಇದು ಪುಟಾಣಿ ಸಫಾರಿ

Team Udayavani, Apr 21, 2017, 12:18 PM IST

21-SUCHI-1.jpg

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳ ಚಿತ್ರಗಳು ತಯಾರಾಗಿ ಬಿಡುಗಡೆಯಾಗಿವೆ. ಆ ಸಾಲಿಗೆ “ಪುಟಾಣಿ ಸಫಾರಿ’ ಹೊಸ ಸೇರ್ಪಡೆ. ಹೊಸತಂಡ ಸೇರಿಕೊಂಡು ಹೀಗೊಂದು ಅಡ್ವೆಂಚರ್‌ ಕುರಿತು ಸಿನಿಮಾ ಮಾಡಿದೆ. ಆ ಬಗ್ಗೆ ಹೇಳಲೆಂದೇ ನಿರ್ದೇಶಕ ರವೀಂದ್ರ ವಂಶಿ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಹಾಜರಾಗಿದ್ದರು. ನಿರ್ದೇಶಕ ರವೀಂದ್ರ ವಂಶಿ ಅವರಿಗೆ “ಜಂಗಲ್‌ ಬುಕ್‌’ ಚಿತ್ರ ನೋಡಿದಾಗ, ನಾವೇಕೆ ಅಂಥದ್ದೊಂದು ಮಕ್ಕಳ ಸಿನಿಮಾವನ್ನು ಕನ್ನಡದಲ್ಲಿ ಮಾಡಬಾರದು ಅಂತ ಯೋಚನೆ ಬಂತಂತೆ. ಹಾಗೆ ಹುಟ್ಟಿಕೊಂಡ ಯೋಚನೆಯೇ “ಪುಟಾಣಿ ಸಫಾರಿ’. ಇದೊಂದು ಅಡ್ವೆಂಚರ್‌ ಕುರಿತಾದ ಸಿನಿಮಾ ಎಂದು ಮಾತಿಗಿಳಿದ ಅವರು, ಬರೀ ಓದಿನ ಕಡೆ ಗಮನಹರಿಸುವ ಮಕ್ಕಳು, ಒಮ್ಮೆ ಕಾಡಿಗೆ ಹೋಗಿ, ಅಲ್ಲಿ ದಾರಿ ತಪ್ಪಿ, ಕಾಡು ಪ್ರಾಣಿಗಳ ನಡುವೆ ಸಿಲುಕಿ ಅನುಭವಿಸುವ ಸಮಸ್ಯೆಗಳು ಹಾಗೂ ಅವರು ಹೇಗೆ ಅಲ್ಲಿಂದ ಆಚೆ ಬರುತ್ತಾರೆ ಎಂಬುದು ಚಿತ್ರದ ಒನ್‌ಲೈನ್‌. ಇಲ್ಲಿ ಸಫಾರಿ ಅಂದಮೇಲೆ ಪ್ರಾಣಿಗಳು ಇರಲೇಬೇಕು. ಗ್ರಾಫಿಕ್ಸ್‌ ಹೆಚ್ಚಾಗಿ ಬಳಸಲಾಗಿದೆ. ಗ್ರೀನ್‌ಮ್ಯಾಟ್‌ನಲ್ಲೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಶಿರಸಿ, ಸಿದ್ಧಾಪುರ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿದ್ದು, ಇಷ್ಟರಲ್ಲೇ ಸಿನಿಮಾ ತೋರಿಸುವುದಾಗಿ ಹೇಳಿಕೊಂಡರು ನಿರ್ದೇಶಕರು.

ನಿರ್ಮಾಪಕ ಚಂದ್ರಶೇಖರ್‌ ಅವರಿಗೆ ಇದು ಮೊದಲ ಸಿನಿಮಾ. “ಶಾಸಕ ಮುನಿರತ್ನ ಅವರ ಸಹಕಾರ, ಸಲಹೆಯಿಂದ ಈ ಚಿತ್ರ ಮಾಡಿದ್ದೇನೆ. ಇಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಅಂಶಗಳಿವೆ. ಪೋಷಕರೂ ತಿಳಿದುಕೊಳ್ಳುವ ವಿಷಯಗಳಿವೆ. ಇದೊಂದು ಮನರಂಜನೆಯ ಜತೆಗೆ ಸಣ್ಣದ್ದೊಂದು ಸಂದೇಶ ಸಾರುವ ಚಿತ್ರ’ ಎಂದು ವಿವರ ಕೊಟ್ಟರು ಅವರು.

ಅಂದು ಚಿತ್ರದ ಹಾಡು ಮತ್ತು ಟೀಸರ್‌ ರಿಲೀಸ್‌ ಮಾಡಿದ ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, “ಚಂದ್ರಶೇಖರ್‌ ನಮ್ಮ ಕ್ಷೇತ್ರದವರು. ಮೊದಲ ಸಿನಿಮಾ ಆಗಿದ್ದರಿಂದ ಭಯ ಇದ್ದೇ ಇರುತ್ತೆ. ಮಕ್ಕಳ ಸಿನಿಮಾಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನೂ ಕಾನೂನು ರೀತಿಯಲ್ಲಿ ಸಿಗಲು ಸಹಾಯ ಮಾಡುತ್ತೇನೆ. ಕನ್ನಡ ಚಿತ್ರರಂಗ ಸಣ್ಣ ಮಾರುಕಟ್ಟೆ ಹೊಂದಿದೆ. ಹಾಗಾಗಿ ಇಲ್ಲಿ ಯಾರೇ ಬಂದರೂ, ಇತಿಮಿತಿಯಲ್ಲಿ ಸಿನಿಮಾ ಮಾಡಬೇಕು’ ಎಂದು ಕಿವಿ ಮಾತು ಹೇಳಿದರು ಮುನಿರತ್ನ.

ಚಿತ್ರಕ್ಕೆ ಯೋಗರಾಜ್‌ ಭಟ್‌ ಗೀತೆ ಬರೆದರೆ, ವೀರ್‌ ಸಮರ್ಥ್ ಸಂಗೀತ ನೀಡಿದ್ದಾರೆ. ಜೀವನ್‌ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್‌ ಅವರು ಕತ್ತರಿ ಪ್ರಯೋಗಿಸಿದ್ದಾರೆ. ಚಿತ್ರದಲ್ಲಿ ರಾಕಿನ್‌, ರಾಜೀವ್‌, ವಿಜಯ್‌, ಸಹನಾ, ಬೇಬಿ ಮಾನಸ ಇತರರು ನಟಿಸಿದ್ದಾರೆ. ಮನೀಶ್‌, ರೇಣುಕಾ ಪ್ರಸಾದ್‌, ರವಿಗೌಡ್ರು, ಮೋಹನ್‌ಕುಮಾರ್‌ ಇತರರು “ಪುಟಾಣಿ ಸಫಾರಿ’ ತಂಡಕ್ಕೆ ಶುಭಹಾರೈಸುವ ಹೊತ್ತಿಗೆ ಪತ್ರಿಕಾಗೋಷ್ಠಿಗೆ ತೆರೆಬಿತ್ತು.

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.