![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Feb 8, 2019, 12:30 AM IST
ನೀನಾಸಂ ಸತೀಶ್ ಮುಖದಲ್ಲಿ ಮಂದಹಾಸ ಮೂಡಿದೆ. ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ. ಸತೀಶ್ ಅವರ ಈ ಖುಷಿ, ನಿರೀಕ್ಷೆಗೆ ಕಾರಣ “ಚಂಬಲ್’. ಸತೀಶ್ ನಾಯಕರಾಗಿ ಕಾಣಿಸಿಕೊಂಡಿರುವ “ಚಂಬಲ್’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಈ ಟ್ರೇಲರ್ ಅನ್ನು ಪುನೀತ್‌ರಾಜಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. “ನಿರ್ದೇಶಕ ಜೇಕಬ್ ವರ್ಗಿಸ್ ಜೊತೆ ನಾನು “ಪೃಥ್ವಿ’ ಸಿನಿಮಾದಲ್ಲಿ ನಟಿಸಿದ್ದೆ. ಒಂದೊಳ್ಳೆಯ ಪಾತ್ರ ಕೊಟ್ಟಿದ್ದರು. ಜಿಲ್ಲಾಧಿಕಾರಿ ಪಾತ್ರವನ್ನು ಖುಷಿಯಿಂದ ಮಾಡಿದ್ದೆ. ಈಗ ಸತೀಶ್ ಅವರಿಗೆ “ಚಂಬಲ್’ನಲ್ಲಿ ಮತ್ತೂಂದು ವಿಭಿನ್ನ ಪಾತ್ರ ಕೊಟ್ಟಿದ್ದಾರೆ. ಚಿತ್ರದ ಟ್ರೇಲರ್ ನೋಡಿದಾಗಲೇ ಇದೊಂದು ಹೊಸ ಬಗೆಯ ಸಿನಿಮಾವಾಗುವ ಲಕ್ಷಣ ಕಾಣುತ್ತಿದೆ’ ಎಂದು ಶುಭಕೋರಿದರು.
ನಾಯಕ ಸತೀಶ್ ಕೂಡಾ “ಚಂಬಲ್’ ಹಾಗೂ ಅದರ ಪಾತ್ರದ ಬಗ್ಗೆ ಎಕ್ಸೆ„ಟ್ ಆಗಿದ್ದಾರೆ. “ನಾನು ಹೆಚ್ಚು ಓದಿಲ್ಲ. ಆದರೆ, ಇಲ್ಲಿ ಐಎಎಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ಸತೀಶ್ ಮಾತು. ಇನ್ನು, ಚಿತ್ರದ ಟ್ರೇಲರ್ ನೋಡಿದವರು, ಇದು ಐಎಎಸ್ ಅಧಿಕಾರಿ ಡಿ.ಕೆ.ರವಿ ಕುರಿತಾದ ಕಥೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಸತೀಶ್, “ನನಗೆ ಆ ಬಗ್ಗೆ ಗೊತ್ತಿಲ್ಲ. ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೇನೆ’ ಎಂದು ಜಾಣ ಉತ್ತರ ಕೊಡುತ್ತಾರೆ. ಈ ಚಿತ್ರವನ್ನು ಜೇಕಬ್ ವರ್ಗಿಸ್ ನಿರ್ದೇಶಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಜೇಕಬ್ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. ಪತ್ರಕರ್ತರಿಂದ ಜೇಕಬ್‌ಗ, “ಇದು ಡಿಕೆ ರವಿ ಕುರಿತಾದ ಸಿನಿಮಾನಾ’ ಎಂಬ ಪ್ರಶ್ನೆ ಎದುರಾಯಿತು. “ಇದು ಯಾರ ಕುರಿತಾದ ಸಿನಿಮಾವೂ ಅಲ್ಲ. ನಮ್ಮ ಸುತ್ತಮುತ್ತ ನಡೆದ ಒಂದಷ್ಟು ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾವಷ್ಟೇ. ಒಂದು ವೇಳೆ ಆ ತರಹ ಕಂಡರೆ ಅದು ಕಾಕತಾಳೀಯವಷ್ಟೇ’ ಎಂದರು. ನಾಯಕಿ ಸೋನು ಗೌಡ ಕೂಡಾ “ಚಂಬಲ್’ ಬಗ್ಗೆ ಖುಷಿಯಾಗಿದ್ದಾರೆ. ಹೊಸ ಬಗೆಯ ಪಾತ್ರ ಸಿಕ್ಕ ಖುಷಿ ಹಂಚಿಕೊಂಡರು. ಜೊತೆಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪುನೀತ್ ಬಂದಿದ್ದರಿಂದ ಸೋನು ಎಕ್ಸೆ„ಟ್ ಆಗಿದ್ದರು. ಶಾಲಾ ದಿನಗಳಲ್ಲಿ ಪುನೀತ್ ಸಿನಿಮಾವನ್ನು ಕ್ಲಾಸ್ ಬಂಕ್ ಮಾಡಿ ನೋಡಿದ್ದನ್ನು ನೆನಪಿಸಿಕೊಂಡರು. ಉಳಿದಂತೆ ಚಿತ್ರದ ತಾಂತ್ರಿಕ ವರ್ಗ ತಮ್ಮ ಅನುಭವ ಹಂಚಿಕೊಂಡಿತು.
ರವಿಪ್ರಕಾಶ್ ರೈ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.