ಮಂಕಿ ಸೀನ ಮನ್‌ಕೀ ಬಾತ್‌

ಡಾಲಿ ಕೈಲಿ ಸೂರಿ ಪಾಪ್‌ ಕಾರ್ನ್

Team Udayavani, Feb 21, 2020, 6:04 AM IST

chitra-24

ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ, ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ . ಡಾಲಿ ಬಳಿಕ ಅದೇ ರೀತಿಯ ಪಾತ್ರ ಬರುತ್ತಿಲ್ಲ. ಪಾತ್ರದಲ್ಲಿನ ಅಟಿಟ್ಯೂಡ್‌ ಸ್ಪೆಷಲ್‌ ಆಗಿರುತ್ತೆ. ನನಗೆ ಪಾತ್ರ ಸ್ಟ್ರಾಂಗ್‌ ಆಗಿ ನಿಲ್ಲಬೇಕಷ್ಟೇ. “ಬಡವ ರಾಸ್ಕಲ್‌’ ಕೂಡ ರೌಡಿಸಂ ಅಲ್ಲ. ಅದೊಂದು ಹೊಸ ಬಗೆಯ ಕಥೆಯ ಚಿತ್ರ. ಇನ್ನೂ ಎರಡು ಸಿನಿಮಾಗಳಿವೆ. ಅವೂ ಕೂಡ ಹೊಸದಾಗಿವೆ…

“ಡಾಲಿ…’
-ಸದ್ಯಕ್ಕೆ ಕನ್ನಡ­ದಲ್ಲಿ ತುಂಬಾ ಸೌಂಡು ಮಾಡುತ್ತಿರುವ ಹೆಸರಿದು. ಹೌದು. “ಟಗರು’ ಮೂಲಕ “ಡಾಲಿ’ ಎನಿಸಿಕೊಂಡ ನಟ ಧನಂಜಯ್‌, ಈಗ ಫ‌ುಲ್‌ ಬಿಝಿ. ಅಷ್ಟೇ ಅಲ್ಲ, ಲವ್ವರ್‌ ಬಾಯ್‌ ಆಗಿದ್ದ ಅವರು, ಸ್ಟೈಲಿಶ್‌ ವಿಲನ್‌ ಮೂಲಕ ಎಲ್ಲರ ಮನಗೆದ್ದಿದ್ದಾರೆ. “ಡಾಲಿ’ ಹೀಗಿದ್ದರೆ ಚೆನ್ನ, ಇಂಥ ಪಾತ್ರಕ್ಕೇ ಅವರು ಸರಿ ಎನ್ನುವಷ್ಟರ ಮಟ್ಟಿಗೆ ಧನಂಜಯ್‌ ಅವರನ್ನು ರಗಡ್‌ ಲುಕ್‌ನಲ್ಲಿ ನೋಡೋಕೆ ಇಷ್ಟಪಡುವ ಮಂದಿಯ ಸಂಖ್ಯೆ ದುಪ್ಪಟ್ಟಾಗಿದೆ. ಆ ಕಾರಣಕ್ಕೇ, ಧನಂಜಯ್‌ ಅಂಥದ್ದೇ ಪಾತ್ರಗಳ ಹಿಂದೆ ಹೊರಟಿದ್ದಾರೆ ಕೂಡ. ಅದು ಅವರನ್ನು ಅಷ್ಟೇ ಪ್ರೀತಿಯಿಂದ ಅಪ್ಪಿಕೊಂಡಿದೆ ಅನ್ನೋದು ಅಷ್ಟೇ ಸತ್ಯ. ಈಗ ಎಲ್ಲೆಡೆ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಜಪ. ಈ ಚಿತ್ರದ ನಿರೀಕ್ಷೆ , ಕುತೂಹಲಕ್ಕೆ ಕಾರಣ, “ಟಗರು’ ಬಳಿಕ ಸೂರಿ ಧನಂಜಯ್‌ಗೆ ಮಾಡಿದ ಚಿತ್ರವಿದು.

ನಿರ್ದೇಶಕ ಸೂರಿ ಯಾವಾಗ, ಧನಂಜಯ್‌ಗೆ ಮತ್ತೂಂದು ಚಿತ್ರ ಅನೌನ್ಸ್‌ ಮಾಡಿದರೋ, ಅಂದೇ ಕುತೂಹಲ ಶುರುವಾಗಿತ್ತು. ಅದರಲ್ಲೂ, “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಎಂಬ ಹೆಸರಿಟ್ಟಾಗ, ಧನಂಜಯ್‌ ಅವರ ಸ್ಪೆಷಲ್‌ ಲುಕ್‌ ಹೊರ­ಬಂದಾಗ ಅದು ಇನ್ನಷ್ಟು ಹೆಚ್ಚಿದ್ದು ಸುಳ್ಳಲ್ಲ. ಅಂಥ­­ದ್ದೊಂದು ನಿರೀಕ್ಷೆ ಮತ್ತು ಕುತೂಹಲ ಸ್ವತಃ ಧನಂಜಯ್‌ ಅವರಿಗೂ ಇದೆ. ಆ ಬಗ್ಗೆ ಹೇಳುವ ಅವರು, ” ನಾನು ಕೂಡ ಇನ್ನು ಪೂರ್ಣ ಸಿನಿಮಾ ನೋಡಿಲ್ಲ. ಚಿತ್ರದಲ್ಲಿ ಕೆಲಸ ಮಾಡಿದ್ದು ಹೊಸ ಅನುಭವ. ಒಂದು ವರ್ಷ ಚಿತ್ರಕ್ಕಾಗಿ ದುಡಿದಿದ್ದೇನೆ. ಡಬ್ಬಿಂಗ್‌ ಮಾಡುವಾಗ ನಿಜಕ್ಕೂ ಎಂಜಾಯ್‌ ಮಾಡಿದೆ. ಹಾಗಾಗಿ ಆಡಿಯನ್ಸ್‌ ಕೂಡ ಎಂಜಾಯ್‌ ಮಾಡ್ತಾರೆ ಎಂಬ ನಂಬಿಕೆ ಇದೆ. ಚಿತ್ರ ನಿಜವಾಗಿಯೂ ಕಾಡುತ್ತೆ, ಅಳಿಸುತ್ತೆ, ಹೊರಬಂದವರು ತುಂಬಾ ಡಿಸ್ಕಷನ್‌ ಮಾಡ್ತಾರೆ. ಸಾಕಷ್ಟು ಚರ್ಚೆಗೆ ಕಾರಣವಾಗುತ್ತೆ. ಅದಕ್ಕಾಗಿ ನಾನೂ ಕಾಯುತ್ತಿದ್ದೇನೆ’ ಎನ್ನುವ ಧನಂಜಯ್‌, “ಪುನಃ ಸೂರಿ ಸರ್‌ ಕಾಂಬಿನೇಷನ್‌ ಜೊತೆ ಕೆಲಸ ಮಾಡಿದ್ದೇನೆ. ಖಂಡಿತ ನೋಡುಗರಿಗೆ ನಿರೀಕ್ಷೆ ಸುಳ್ಳಾಗಲ್ಲ. ಪಾತ್ರ ತುಂಬ ಇಂಟೆನ್ಸ್‌ ಆಗಿದೆ. ಕಥೆ ಕೂಡ ಹಾಗೆಯೇ ಇದೆ. ಡಾಲಿ ಪಾತ್ರವನ್ನು ಎಂಜಾಯ್‌ ಮಾಡಿದ್ರಲ್ಲ, ಆ ಪಾತ್ರದ ಇಂಟೆನ್ಸಿಟಿ ಇಲ್ಲಿರುತ್ತೆ. ಆದರೆ, ಪಾತ್ರ ಬೇರೆಯದ್ದೇ ಆಗಿರುತ್ತೆ ಅಷ್ಟೇ’ ಎಂದು ಹೇಳುತ್ತಾರೆ ಧನಂಜಯ್‌.

“ಟಗರು ಚಿತ್ರದಲ್ಲಿ “ಡಾಲಿ’ಯಾಗಿಯೇ ಧನಂಜಯ್‌ ಗುರುತಿಸಿಕೊಂಡರು. ಈ ಸಿನ್ಮಾ ಮೂಲಕ ಹೊಸ ಇಮೇಜ್‌ ಬದಲಾಗಬಹುದಾ? ಈ ಪ್ರಶ್ನೆಗೆ, “ನಾನು ಯಾವತ್ತೂ ಇಮೇಜ್‌ಗೆ ಫಿಕ್ಸ್‌ ಆಗಿಲ್ಲ. “ಡಾಲಿ’ ಪಾತ್ರವೇ ಬೇರೆ. “ಮಂಕಿ ಸೀನ’ ಪಾತ್ರವೇ ಬೇರೆ. ಖಂಡಿತ ಈ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಬರುತ್ತೆ. ಇದು ಇಂಥದ್ದೇ ವರ್ಗಕ್ಕೆ ಮಾಡಿದ ಸಿನಿಮಾ ಅಂತ ಹೇಳುವುದು ಕಷ್ಟ. ಮಾಸ್‌ ಮತ್ತು ಕ್ಲಾಸ್‌ ಆಡಿಯನ್ಸ್‌ಗೂ ಸಲ್ಲುವ ಚಿತ್ರ. ಕ್ರೈಮ್‌ ಥ್ರಿಲ್ಲರ್‌ ಒಳಗೊಂಡ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಪ್ರತಿಯೊಬ್ಬರ ಜೀವನಕ್ಕೆ ಕನೆಕ್ಟ್ ಆಗುವಂಥ ಕಥೆ ಇಲ್ಲಿದೆ. ಸೂರಿ ಸರ್‌ ಹೇಳಿದಂತೆ, ನಡೆಯುವ ವಾಸ್ತವ ಅಂಶಗಳಿಗೆ ಕನ್ನಡಿ ಹಿಡಿದಿದ್ದೇನೆ ಎಂಬ ಮಾತಿಗೆ ಹೋಲುವ ಚಿತ್ರವಿದು. ಇನ್ನು, ಚಿತ್ರದ ಟ್ರೇಲರ್‌ ನೋಡಿದವರಿಗೆ ಮಂಕಿ ಸೀನನ ಪಾತ್ರ ಪಾಪ ಎನಿಸುವಂತಿದೆ ಅನಿಸಬಹುದು. ಆದರೆ, ಅದು ಹೇಗೆ ಅನ್ನೋದನ್ನ ಹೇಳುವುದಕ್ಕಾಗಲ್ಲ. ಅದನ್ನು ನೋಡಿಯೇ ಅನುಭವಿಸಬೇಕು’ ಎಂಬುದು ಧನಂಜಯ್‌ ಮಾತು.

ಪಾತ್ರ ಸ್ಟ್ರಾಂಗ್‌ ಇರಬೇಕಷ್ಟೇ…
ಯಾವುದೇ ನಟನಿರಲಿ, ಪಾತ್ರಕ್ಕೆ ತಯಾರಿ ಮಾಡಿಕೊಳ್ಳಲೇ ಬೇಕು. ಅದರಲ್ಲೂ ವಿಶೇಷ ಪಾತ್ರ ಸಿಕ್ಕಾಗ ಜಾಸ್ತೀನೇ ಎಫ‌ರ್ಟ್‌ ಹಾಕಬೇಕು. ಮಂಕಿ ಸೀನ ಪಾತ್ರಕ್ಕೆ ಧನಂಜಯ್‌ ಮಾಡಿಕೊಂಡ ತಯಾರಿ ಹೇಗಿತ್ತು? ಈ ಮಾತಿಗೆ ಹೇಳುವ ಅವರು, “ಸೂರಿ ಸರ್‌ ಜೊತೆ ಮಾತಾಡುವಾಗ, ಕಥೆ, ಪಾತ್ರ ಚರ್ಚಿಸುವಾಗಲೇ, ತಲೆಯಲ್ಲಿ ಮತ್ತು ಮನಸ್ಸಲ್ಲಿ ಪಾತ್ರದ ತಯಾರಿ ಓಡುತ್ತಿರುತ್ತೆ. ಒಬ್ಬ ರೈಟರ್‌, ಡೈರೆಕುó ಹೇಗೆ ಸ್ಟೋರಿ ರೀಡ್‌ ಮಾಡ್ತಾರೆ, ಆರ್ಟಿಸ್ಟ್‌ಗೆ ಹೇಗೆಲ್ಲಾ ಫೀಡ್‌ ಮಾಡ್ತಾರೆ ಎಂಬುದರ ಮೇಲೆ ನಟನಿಗೆ ಆ ಪಾತ್ರದ ಗಾತ್ರ, ಕಲ್ಪನೆ ಹುಟ್ಟೋಕೆ ಸಾಧ್ಯ. ಈ ಚಿತ್ರದಲ್ಲೂ ತಯಾರಿ ಇತ್ತು. ಸನ್ನಿವೇಶವೊಂದರಲ್ಲಿ ತಲೆ ಬೋಳಿಸಬೇಕು ಅಂದಾಗ, ನಿಜಕ್ಕೂ ಒಂದು ರೀತಿಯ ಖುಷಿ ಆಯ್ತು. ಯಾಕೆಂದರೆ, ನಮ್ಮನ್ನು ನಾವು ಬೇರೆ ರೀತಿ ನೋಡುವ ಅವಕಾಶವದು. ಅಂತಹ ಚಾನ್ಸ್‌ ಸಿಗೋದು ಒಂದೇ ಸಲ. ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ, ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ ಎನ್ನುತ್ತಾರೆ. ಧನಂಜಯ್‌.

ಡಾಲಿ ಬಳಿಕ ಅದೇ ರೀತಿಯ ಪಾತ್ರ ಬರುತ್ತಿಲ್ಲ. ಪಾತ್ರದಲ್ಲಿನ ಅಟಿಟ್ಯೂಡ್‌ ಸ್ಪೆಷಲ್‌ ಆಗಿರುತ್ತೆ. ನನಗೆ ಪಾತ್ರ ಸ್ಟ್ರಾಂಗ್‌ ಆಗಿ ನಿಲ್ಲಬೇಕಷ್ಟೇ. “ಬಡವ ರಾಸ್ಕಲ್‌’ ಕೂಡ ರೌಡಿಸಂ ಅಲ್ಲ. ಅದೊಂದು ಹೊಸ ಬಗೆಯ ಕಥೆಯ ಚಿತ್ರ. ಇನ್ನೂ ಎರಡು ಸಿನಿಮಾಗಳಿವೆ. ಅವೂ ಕೂಡ ಹೊಸದಾಗಿವೆ’ ಎನ್ನುತ್ತಾರೆ ಧನಂಜಯ್‌.

ಸಾರ್ಥಕ ಜಪ
ಸದ್ಯಕ್ಕೆ ಧನಂಜಯ್‌ ಅವರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ಸೆಟ್ಟೇರುತ್ತಿವೆ ಇದಕ್ಕೆ ಧ್ವನಿಯಾಗುವ ಅವರು, “ನಾನು ಆಯ್ಕೆ ಮಾಡಿಕೊಳ್ಳುವ ಮುನ್ನ ಮನುಷ್ಯರನ್ನು ನೋಡ್ತೀನಿ. ಇಷ್ಟವಾದರೆ ಕೆಲಸ ಮಾಡ್ತೀನಿ. ಅವರೊಂದಿಗೆ 6 ತಿಂಗಳು ಜರ್ನಿ ಮಾಡಲೇಬೇಕು. ಹಾಗಾಗಿ, ಅಂತಹವರ ಜೊತೆ ಕೆಲಸ ಮಾಡೋಕೂ ಖುಷಿ ಎನಿಸಬೇಕು. ಸಿನಿಮಾ ಬರುತ್ತಿವೆ. ಇದಕ್ಕಾಗಿಯೇ ತಾನೇ ಇಷ್ಟು ವರ್ಷ ಜಪ ಮಾಡಿದ್ದು. ಆ ದಿನಗಳನ್ನು ನೆನಪಿಸಿಕೊಂಡಾಗ ಈಗ ಹೆಮ್ಮೆ ಎನಿಸುತ್ತೆ. “ಸಲಗ’ ಕೂಡ ಜೋರು ಸದ್ದು ಮಾಡುವ ಚಿತ್ರ. ಅಲ್ಲಿ ಸ್ಟ್ರಾಂಗ್‌ ಪೊಲೀಸ್‌ ಅಧಿಕಾರಿ. ಪೊಲೀಸ್‌ ಆಫೀಸರ್‌ ಅಂದ್ರೆ, ಹೀಗಿರಬೇಕು ಎನಿಸುವಂತಹ ಪಾತ್ರವದು. ಇನ್ನು, ಜಯರಾಜ್‌ ಬಯೋಪಿಕ್‌ ಇರುವ ಸಿನಿಮಾ ಅನೌನ್ಸ್‌ ಆಗಿದೆ. ಆ ಪಾತ್ರ ಒಪ್ಪೋಕೆ ಕಾರಣ ಏನು, ಯಾಕೆ ಆ ಪಾತ್ರ ಮಾಡ್ತಾ ಇದ್ದೀರಿ ಎಂಬ ಪ್ರಶ್ನೆಗಳು ಟ್ವಿಟ್ಟರ್‌ನಲ್ಲಿ ಬಂದವು. ಅದಕ್ಕೆ ನಾನು ಹೇಳುವುದಿಷ್ಟೇ. ನಾನು ಸಿಸ್ಟಂನಲ್ಲಿ ಇರೋದನ್ನೇ ಮಾಡ್ತಾ ಇರೋದು. ಅಲ್ಲೆಲ್ಲೋ “ಡಾಲಿ’ ಆಗಿ ಒಂದು ವರ್ಗವನ್ನು ಪ್ರತಿನಿಧಿಸಿದೆ.

“ಅಲ್ಲಮ’ನಾಗಿ ಒಂದು ವರ್ಗಕ್ಕೆ ರೀಚ್‌ ಆದೆ. ಇನ್ನೆಲ್ಲೋ “ಎಸಿಪಿ ಸಾಮ್ರಾಟ್‌’ ಆಗಿ ಒಂದು ವರ್ಗವನ್ನು ಪ್ರತಿನಿಧಿಸುತ್ತೇನೆ. ಹಾಗೇ, ಜಯರಾಜ್‌ ಪಾತ್ರದ ಮೂಲಕವೂ ಒಂದು ವರ್ಗವನ್ನು ಪ್ರತಿನಿಧಿಸುತ್ತಿದ್ದೇನೆ. ಕಲಾವಿದನಾಗಿ ಎಲ್ಲಾ ರೀತಿಯ ಪಾತ್ರ ನಿರ್ವಹಿಸುವುದು ನನ್ನ ಕರ್ತವ್ಯ. ಆ ಮೂಲಕ ಹೇಗೆ ಬದುಕಬೇಕು, ಬದುಕಬಾರದು ಎಂಬುದನ್ನು ಹೇಳುತ್ತಿರಬೇಕು. ಆಡಿಯನ್ಸ್‌ ಅದರಿಂದ ಏನು ತಗೋತ್ತಾರೆ ಎಂಬುದು ಅವರವರ ಮನಸ್ಥಿತಿಗೆ ಬಿಟ್ಟಿದ್ದು. ನನ್ನ ತಂದೆ ಸ್ಕೂಲ್‌ ಟೀಚರ್‌. ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದವರು. ಅವರೆಲ್ಲರೂ ಮಹಾತ್ಮ ಗಾಂಧಿ ಆಗ್ತಾರೆ ಅಂತ ಹೇಳ್ಳೋಕೆ ಆಗಲ್ಲ. ಎಲ್ಲದರಲ್ಲೂ ಒಳ್ಳೆಯದು, ಕೆಟ್ಟದ್ದು ಅಂಶ ಇರುತ್ತೆ. ಅದನ್ನು ತೆಗೆದು ಮುಂದಿಡಬೇಕಷ್ಟೇ. ಅದು ನಮ್ಮ ಕೆಲಸ. ಜಯರಾಜ್‌ ಬಯೋಪಿಕ್‌ನಲ್ಲಿ ತುಂಬಾ ಕೆಲಸವಿದೆ. ಫಿಜಿಕಲಿ ಎಫ‌ರ್ಟ್‌ ಹಾಕಬೇಕು. ರೆಟ್ರೋ ಶೇಡ್‌ ಕೂಡ ಇರಲಿದೆ. ಪಾತ್ರವಾಗಿ ಜೀವಿಸಲೇಬೇಕು. ಹಾಗಾಗಿ ತಯಾರಿ ಇದ್ದೇ ಇರುತ್ತೆ’ ಎಂದು ವಿವರ ಕೊಡುವ ಧನಂಜಯ್‌, “ಬಡವ ರಾಸ್ಕಲ್‌’ ಮೂಲಕ ನಿರ್ಮಾಣಕ್ಕೂ ಇಳಿದಿದ್ದಾರೆ. ದಿನ ದಿನಕ್ಕೂ ಮೈಲೇಜ್‌ ಹೆಚ್ಚುತ್ತಿದೆ. ಹಾಗಾದರೆ, ಧನಂಜಯ್‌ ಪೇಮೆಂಟ್‌ ಕೂಡ ಹೆಚ್ಚಾಗಿಗರಬೇಕಲ್ಲವೇ? ಇದಕ್ಕೆ ನಗುತ್ತಲೇ ಹೇಳುವ ಅವರು, “ಈ ಮಾತು ಕೇಳ್ಳೋಕೆ ಖುಷಿ ಆಗುತ್ತಿದೆ. ಯಾರು, ಎಷ್ಟು ಚೆನ್ನಾಗಿ ಪ್ರೀತಿಯಿಂದ ಕೊಟ್ಟರೂ ಪಡೆಯುತ್ತೇನೆ. ನನ್ನೊಳಗೆ ಇನ್ನಷ್ಟು ಕನಸುಗಳಿವೆ. ಅದನ್ನು ಇನ್ನೊಮ್ಮೆ ಹೇಳ್ತೀನಿ’ ಎಂದಷ್ಟೇ ಹೇಳಿ ಮಾತು ಮುಗಿಸುತ್ತಾರೆ ಧನಂಜಯ್‌.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.