ದುನಿಯಾ ದುನಿಯಾ 2
Team Udayavani, Mar 3, 2017, 3:50 AM IST
ಶಿರಸಿಯ ಮಾರಿಕಾಂಭ ಜಾತ್ರೆಯಲ್ಲೇ “ದುನಿಯಾ 2′ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೂ ಮತ್ತೆ ಹಾಡುಗಳನ್ನು ಬಿಡುಗಡೆ ಮಾಡುತ್ತಿರುವುದೇಕೆ ಎಂಬ ಪ್ರಶ್ನೆ, ಆಹ್ವಾನ ಪತ್ರಿಕೆ ನೋಡಿದ ತಕ್ಷಣ ಹಲವರಿಗೆ ಬಂದಿತ್ತು. ಕೊನೆಗೆ ಗೊತ್ತಾಗಿದ್ದೇನೆಂದರೆ, ಅದಕ್ಕೊಂದು ಸೆಂಟಿಮೆಂಟಲ್ ಕಾರಣವಿದೆ ಎಂದು. ಹೌದು, ಅದೇ ದಿನ 10 ವರ್ಷಗಳ ಹಿಂದೆ “ದುನಿಯಾ’ ಚಿತ್ರ ಬಿಡುಗಡೆಯಾಗಿತ್ತು. ಆ ದಶಕದ ಸಂಭ್ರಮವನ್ನು ನೆನಪಿಸಿಕೊಳ್ಳುವದಕ್ಕೆ ಸಿದ್ದರಾಜು ಆಡಿಯೋ ಬಿಡುಗಡೆಯ ನೆಪದಲ್ಲಿ, ತಮ್ಮ ಹಳೆಯ ಸ್ನೇಹಿತರನ್ನು, ತಂಡದವರನ್ನು ಮತ್ತು ಮಾಧ್ಯಮದವರನ್ನು ಸೇರಿಸಿದರು. ಎಲ್ಲರ ಸಮ್ಮುಖದಲ್ಲಿ “ದುನಿಯಾ’ ಚಿತ್ರದ ದಶಕದ ಸಂಭ್ರಮವನ್ನು ಹಂಚಿಕೊಳ್ಳುವುದರ ಜೊತೆಗೆ “ದುನಿಯಾ 2′ ಚಿತ್ರದ ಹಾಡುಗಳನ್ನು ಮತ್ತೂಮ್ಮೆ ಬಿಡುಗಡೆ ಮಾಡಿ, ಚಿತ್ರದ ಬಗ್ಗೆಯೂ ಹೇಳಿಕೊಂಡರು.
ಅಂದಹಾಗೆ, “ದುನಿಯಾ 2′ ಚಿತ್ರವನ್ನು ಹರಿ ಎನ್ನುವವರು ಬರೆದು, ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಈ ಚಿತ್ರದ ಮೂಲಕ ಅವರು ಕತ್ತಲೆ ದುನಿಯಾವನ್ನು ಎಕ್ಸ್ ಪೋಸ್ ಮಾಡುವುದಕ್ಕೆ ಹೊರಟಿದ್ದಾರಂತೆ. “ಚಿತ್ರದ ಶೇ 90ರಷ್ಟು ಭಾಗವನ್ನು ಕತ್ತಲೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ರಾತ್ರಿ 9ರ ನಂತರದ ಮೆಜೆಸ್ಟಿಕ್ ಜೀವನ ಹೇಗಿರುತ್ತದೆ ಎಂದು ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಹೀರೋ ಪಕ್ಕಾ ಲೋಕಲ್ ಹುಡುಗ. ಟ್ರಾವಲ್ಸ್‌ನಲ್ಲಿ ಕೆಲಸ ಮಾಡುವ ಹುಡುಗ. ಅವನ ಜೀವನದಲ್ಲಿ ಏನೇನು ಆಗುತ್ತದೆ ಎಂಬುದು ಚಿತ್ರದ ಕಥೆ’ ಎಂದು ಹೇಳಿದರು ಹರಿ. ಈ ಚಿತ್ರದಿಂದ ರಾತ್ರಿ ಎದ್ದಿರೋದನ್ನು ಕಲಿತರಂತೆ ಯೋಗಿ. “ರಾತ್ರಿ ಹೊತ್ತೇ ಚಿತ್ರೀಕರಣವಾಗುತ್ತಿದ್ದರಿಂದ, ರಾತ್ರಿ ಎದ್ದಿರೋದನ್ನು ಕಲಿತರಂತೆ ಯೋಗಿ. ಇಲ್ಲೊಬ್ಬ ಸಾಮಾನು ಹುಡುಗನ ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರಂತೆ. ಕೆಲಸದ ವಿಷಯದಲ್ಲಿ ಹರಿ ತುಂಬಾ ಗಟ್ಟಿ. ಇದೇ ತರಹ ಬರಬೇಕು ಎಂದು ಕಷ್ಟಪಡುತ್ತಾರೆ. ಅವರು ಸಂಭಾಷಣೆ ಹೇಳಿಕೊಡುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ಕೊನೆಗೆ ಡೈಲಾಗ್ ಶೀಟ್ ಕೊಡಿ ಎಂದು ಕೇಳಿ ನಾನೇ ಓದಿಕೊಳ್ಳುತ್ತಿದ್ದೆ’ ಎಂದರು ಯೋಗಿ. ಇನ್ನು ಸಿಹಿಕಹಿ ಚಂದ್ರು ಮತ್ತು ಗೀತಾ ಅವರ ಮಗಳು ಹಿತ, ಈ ಹಿಂದೆ ಯೋಗಿ ಜೊತೆಗೆ “ಸ್ನೇಕ್
ನಾಗ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಮತ್ತೆ ಈ ಚಿತ್ರದಲ್ಲಿ ಯೋಗಿ ಜೊತೆಗೆ ನಟಿಸುತ್ತಿದ್ದಾರೆ. “ಬಹಳ ಗಂಭೀರವಾದ ಪಾತ್ರ. ನಗುವಿಲ್ಲ. ಅವಳದ್ದೇ ದುನಿಯಾದಲ್ಲಿ ಬದುಕುತ್ತಿರುತ್ತಾಳೆ. ಗಾರ್ಮೆಂಟ್ ಹುಡುಗಿಯ ಪಾತ್ರ ನನ್ನದು’ ಎಂಬಂತಹ ವಿವರಗಳನ್ನು ಕೊಟ್ಟರು ಅವರು. ಇನ್ನು ಅಂದು ಸಂಗೀತ ನಿರ್ದೇಶಕ ಬಿ.ಜೆ. ಭರತ್, ವಿ.
ಮನೋಹರ್, ಸತ್ಯ ಹೆಗಡೆ, ಅಂಬುಜಾ ಸಿದಟಛಿರಾಜು, ಎ.ಟಿ. ಲೋಕೇಶ್, “ಕಡ್ಡಿಪುಡಿ’ ಚಂದ್ರು, “ಸಿಂಪಲ್’ ಸುನಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.