ಕುಸ್ತಿ ಅಖಾಡಕ್ಕೆ ಅಪ್ಪ-ಮಗ ರೆಡಿ!
Team Udayavani, May 18, 2018, 6:00 AM IST
ರಾಜಕೀಯ ಅಖಾಡದಲ್ಲಿ ಅಪ್ಪ-ಮಕ್ಕಳ, ಅಣ್ತಮ್ಮಂದಿರ ಕಾರುಬಾರು ಜೋರಿರುವಾಗಲೇ, ಇನ್ನೊಂದು ಕಡೆ ಚಿತ್ರರಂಗದ ಅಖಾಡದಲ್ಲಿ
ಅಪ್ಪ-ಮಗನ ಕಾರುಬಾರು ಶುರುವಾಗಿದೆ. ಹೌದು, “ದುನಿಯಾ’ ವಿಜಯ್ ಮತ್ತು ಅವರ ಪುತ್ರ ಸಾಮ್ರಾಟ್ “ಕುಸ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ
ಸುದ್ದಿ ಎಲ್ಲರಿಗೂ ಗೊತ್ತು. “ಕುಸ್ತಿ’ಗಾಗಿ ಸಾಮ್ರಾಟ್, ಪಕ್ಕಾ ಕುಸ್ತಿ ಪಟುವಾಗಿ ತಯಾರಿ ಪಡೆಯುತ್ತಿರುವ ಫೋಟೋ ಕೂಡ ಎಲ್ಲೆಡೆ ಭರ್ಜರಿ ಸದ್ದು ಮಾಡಿತ್ತು. ಈಗ ಹೊಸ ಸುದ್ದಿಯೆಂದರೆ, “ಕುಸ್ತಿ’ಗಾಗಿ ಅಪ್ಪ-ಮಗ ಇಬ್ಬರೂ ತೊಡೆ ತಟ್ಟಿ ಸೆಡ್ಡು ಹೊಡೆಯೋ ಮೂಲಕ ಸಜ್ಜಾಗಿದ್ದಾರೆ. ದಿನವೊಂದಕ್ಕೆ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ ಅನ್ನೋದೇ ವಿಶೇಷ.
“ದುನಿಯಾ’ ವಿಜಯ್ ಅಂದಾಕ್ಷಣ ನೆನಪಾಗೋದೇ, ಕಟ್ಟುಮಸ್ತಾದ ದೇಹ. ಅವರು ತಮ್ಮ ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅವರಂತೆಯೇ ಅವರ ಪುತ್ರ ಸಾಮ್ರಾಟ್ ಕೂಡ ಸಿಕ್ಕಾಪಟ್ಟೆ ವಕೌìಟ್ ಮಾಡುತ್ತಿದ್ದಾನೆ ಅನ್ನೋದು ಹೊಸ ಸುದ್ದಿ. “ಕುಸ್ತಿ’ ಚಿತ್ರ ನೋಡಿದವರಿಗೆ, ಅಪ್ಪ-ಮಗನ ಸಾಮರ್ಥ್ಯ ಎಂಥದ್ದು ಎಂಬುದು ಗೊತ್ತಾಗಬೇಕಾದರೆ, ಸಿಕ್ಕಾಪಟ್ಟೆ ಕಸರತ್ತು ನಡೆಸಬೇಕು ಎಂಬ ಕಾರಣಕ್ಕೆ, ದುನಿಯಾ ವಿಜಯ್ ದಿನವೊಂದಕ್ಕೆ ಐದು ತಾಸು ವಕೌìಟ್ ಮಾಡಿದರೆ, ಅವರ ಪುತ್ರ ಸಾಮ್ರಾಟ್ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು
ತಾಸು ವಕೌìಟ್ ಮಾಡುತ್ತಿದ್ದಾನೆ. “ಕುಸ್ತಿ’ಗೋಸ್ಕರ ಪಕ್ಕಾ ಪೈಲ್ವಾನ್‌ಗಳಂತೆ ರೆಡಿಯಾಗಬೇಕೆಂಬುದು ವಿಜಯ್ ಆಸೆ. ಅದಕ್ಕಾಗಿಯೇ, ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ, ಬರೀ “ಕುಸ್ತಿ’ಗಾಗಿಯೇ ಬೆಳಗ್ಗೆ, ಸಂಜೆ ತಯಾರಿ ನಡೆಸುತ್ತಿದ್ದಾರೆ.
“ಕುಸ್ತಿ’ ಚಿತ್ರದಲ್ಲಿ ರಿಯಲ್ “ಕುಸ್ತಿ’ ಇರದಿದ್ದರೆ ಹೇಗೆ? ಇಬ್ಬರೂ ಪಕ್ಕಾ ಕುಸ್ತಿಪಟುವಿನಂತೆಯೇ ಅಣಿಯಾಗಬೇಕು. ಹಾಗಾಗಿ ಸಾಮ್ರಾಟ್‌ಗೆ
ಈಗಾಗಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಡುತ್ತಿದ್ದಾರಂತೆ. ವಿಜಯ್ ಅವರೂ ಕೂಡ “ಕುಸ್ತಿ’ಯ ಪಟ್ಟುಗಳನ್ನು ಹೇಗೆಲ್ಲಾ ಹಿಡಿಯಬೇಕೆಂಬ ಬಗ್ಗೆಯೂ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಒಟ್ಟು ಮೂವರು ಪ್ರಸಿದ್ಧ ಕುಸ್ತಿ ಪಟುಗಳಿಂದ ಅಪ್ಪ-ಮಗ ತರಬೇತಿ ಪಡೆಯುತ್ತಿದ್ದಾರೆ. ಮಗನ ಶಿಸ್ತು, ಶ್ರದ್ಧೆ ಬಗ್ಗೆ ಮಾತನಾಡುವ ದುನಿಯಾ ವಿಜಯ್, “ಅವನಲ್ಲಿ ಕಲೆ ತುಂಬಿಕೊಂಡಿದೆ. ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಾನೆ. ಹುಮ್ಮಸ್ಸಿದೆ, ಉತ್ಸಾಹವೂ ಇದೆ. ಅವನ ಶ್ರದ್ಧೆ ಗಮನಿಸುತ್ತಿದ್ದರೆ, ಮುಂದೊಂದು ದಿನ, ಬಹುಶಃ ನನಗೇ ಕಾಂಪಿಟೇಷನ್ ಕೊಡ್ತಾನೇನೋ ಎನಿಸುತ್ತದೆ. ಅಷ್ಟರಮಟ್ಟಿಗೆ ಶ್ರದ್ಧೆಯಿಂದ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾನೆ’ ಎನ್ನುತ್ತಾರೆ ದುನಿಯಾ ವಿಜಯ್.
ು¾ ಮಕ್ಕಳನ್ನು ರಜೆಯ ಮಜ ಅನುಭವಿಸಲು ಎಲ್ಲೆಡೆ ಕರೆದೊಯ್ಯುತ್ತಾರೆ. ಆದರೆ, ದುನಿಯಾ ವಿಜಯ್ ಮಾತ್ರ, ಈ ಬೇಸಿಗೆ ರಜೆಯಲ್ಲಿ ಸಾಮ್ರಾಟ್ ಗೆ ಎಲ್ಲಿಗೂ ಕಳುಹಿಸಿಲ್ಲವಂತೆ. ಹೆಚ್ಚು “ರಜೆಯ ಮಜ ಅನುಭವಿಸಲು ಬಿಟ್ಟಿಲ್ಲ. ಕಾರಣ, ಸಾಮ್ರಾಟ್‌ನನ್ನು “ಕುಸ್ತಿ’ ಪಾತ್ರಕ್ಕೆ ಅಣಿಗೊಳಿಸಬೇಕಾದ ಹಿನ್ನೆಲೆಯಲ್ಲಿ ಒಬ್ಬ ಕುಸ್ತಿಪಟುವಾಗಿ ಕಾಣಲು ಏನೆಲ್ಲಾ ಬೇಕೋ ಅದರ ತಯಾರಿ ಮಾಡಿಕೋ ಅಂತ, ದಿನ ನಿತ್ಯ ವಕೌìಟ್ ಬಿಟ್ಟರೆ, ಕುಸ್ತಿ ಪಟ್ಟುಗಳ ಬಗ್ಗೆ ತಿಳಿದುಕೊಳ್ಳುವುದನ್ನು ಬಿಟ್ಟರೆ, ಬೇರೆ ಕಡೆ ಗಮನಹರಿಸಲು ಬಿಟ್ಟಿಲ್ಲವಂತೆ. ಆ ಕುರಿತು ಹೇಳಿಕೊಳ್ಳುವ ವಿಜಿ, “ಕುಸ್ತಿ’ ನನ್ನ ಬಹುನಿರೀಕ್ಷೆಯ ಚಿತ್ರ. ನಾನೇ ಬರೆದ ಕಥೆ. ಒಂದು ತಂಡದ ಜೊತೆಗೆ ಕುಳಿತು ಚಿತ್ರಕಥೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಸಾಮ್ರಾಟ್ ನನ್ನ ಆಸೆಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾನೆ. ಮೊದಲ ಸಲ ತೆರೆಯ ಮೇಲೆ ಮಗನನ್ನು ತೋರಿಸುತ್ತಿರುವುದರಿಂದ ನಿರೀಕ್ಷೆಯೂ ಇರುತ್ತೆ. ಅದು ಸುಳ್ಳಾಗಬಾರದು. ಅಷ್ಟರಮಟ್ಟಿಗೆ ತಯಾರಿ ಮಾಡುತ್ತಿರುವುದಾಗಿ ಹೇಳುತ್ತಾರೆ ದುನಿಯಾ ವಿಜಯ್.
ಸದ್ಯಕ್ಕೆ ದುನಿಯಾ ವಿಜಯ್ ಅವರ “ಕುಸ್ತಿ’ಗೆ ನಿರ್ದೇಶಕರು ಯಾರೆಂಬುದು ಗೌಪ್ಯ. ಈಗ ಸ್ಕ್ರಿಪ್ಟ್ ಬಗ್ಗೆಯಷ್ಟೇ ಹೆಚ್ಚು ಗಮನಹರಿಸಿರುವ ಅವರು, ಇಷ್ಟರಲ್ಲೇ ನಿರ್ದೇಶಕರ್ಯಾರು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬ ಕುರಿತು ವಿವರ ಕೊಡುತ್ತಾರಂತೆ. ಬಹುತೇಕ ಕರ್ನಾಟಕದಲ್ಲೇ “ಕುಸ್ತಿ’ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ “ಕುಸ್ತಿ’ಯ ಆಟ ನಡೆಯಲಿದೆ. ಚಿತ್ರದಲ್ಲಿ ರಿಯಲ್ ಕುಸ್ತಿ ಪಟುಗಳು ತುಂಬಿಕೊಳ್ಳುತ್ತಾರೆ ಎನ್ನುವ ವಿಜಯ್, ಇಷ್ಟರಲ್ಲೇ ಯಾರೆಲ್ಲಾ ಈ “ಕುಸ್ತಿ’ ಅಖಾಡಕ್ಕೆ ಬರುತ್ತಾರೆ ಎಂಬುದನ್ನು ಹೇಳಲಿದ್ದಾರೆ.
ವಿಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.