ಧಮ್, ಕಿಸ್ ಮತ್ತು ಏಕಲವ್ಯ
Team Udayavani, Feb 21, 2020, 5:57 AM IST
ಪ್ರೇಮ್ ನಿರ್ದೇಶನದ “ಏಕಲವ್ಯ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್, ಈ ಬಾರಿ ಸಖತ್ ಬೋಲ್ಡ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಟೀಸರ್‌ನಲ್ಲೇ ತನ್ನ ಸಿನಿಮಾ ಬೋಲ್ಡ್ ಆಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದು ರಾಣಾ ಮತ್ತು ರಚಿತಾ ರಾಮ್ ಕಿಸ್ಸಿಂಗ್ ಸೀನ್ ಮೂಲಕ. ಹೌದು, “ಏಕಲವ್ಯ’ ಚಿತ್ರದಲ್ಲಿ ರಚಿತಾ ಮತ್ತೂಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಉಪೇಂದ್ರ ನಾಯಕರಾಗಿರುವ “ಐ ಲವ್ ಯು’ ಚಿತ್ರದ ಹಾಡೊಂದರಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಆ ಬಗ್ಗೆ ಸಾಕಷ್ಟು ಪರ-ವಿರೋಧದ ಕಾಮೆಂಟ್ಸ್‌ಗಳು ಬರುತ್ತಿದ್ದಂತೆ ರಚಿತಾ, ಆ ಸಿನಿಮಾದ ಬಿಡುಗಡೆಯ ಸಮಯದಲ್ಲಿ ಚಿತ್ರದ ಪ್ರಚಾರದಿಂದಲೇ ದೂರ ಉಳಿದಿದ್ದರು. ಈಗ ಮತ್ತೆ ರಚಿತಾ ಸುದ್ದಿಯಲ್ಲಿದ್ದಾರೆ. ಅದು ಕೂಡಾ ಬೋಲ್ಡ್ ಆಗಿ ಕಾಣಿಸಿಕೊಂಡು. ಟೀಸರ್ ಓಪನಿಂಗ್‌ನಲ್ಲೇ ರಚಿತಾ ಹಾಗೂ ನಾಯಕ ರಾಣಾ ಸಿಗರೇಟ್ ಸೇದುವ ದೃಶ್ಯವಿದ್ದರೆ, ಆ ನಂತರದ ದೃಶ್ಯದಲ್ಲಿ ರಚಿತಾ ಹಾಗೂ ರಾಣಾ ಲಿಪ್ ಕಿಸ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡುವ ರಚಿತಾ, “ನನ್ನ ಪಾತ್ರದ ಬಗ್ಗೆ ನಾನು ಏನು ಹೇಳ್ಳೋದಿಲ್ಲ. ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ. ಸುಮಾರು 15 ದಿನಗಳ ಕಾಲ ನಾನು ಈ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ನನಗೆ ಎರಡು ಹಾಡುಗಳಿವೆ. ಪ್ರೀತಿಯಲ್ಲಿ ನೋವುಂಡ ಹುಡುಗಿಯರಿಗಾಗಿ ಒಂದು ಹಾಡು ಇದೆ. ಕಷ್ಟಪಟ್ಟು ಸಿಗರೇಟ್ ಸೇದಿದ್ದೇನೆ’ ಎನ್ನುವುದು ರಚಿತಾ ಮಾತು.
ಚಿತ್ರದಲ್ಲಿ ನಟ ಸುಚೇಂದ್ರ ಪ್ರಸಾದ್ ಕೂಡಾ ನಟಿಸಿದ್ದಾರೆ. ಪ್ರೇಮ್ ಅವರ ಸಿನಿಮಾ ಪ್ರೀತಿ, ಕ್ರಿಯಾಶೀಲತೆ ಕಂಡು ಖುಷಿಯಾದರಂತೆ. ನಾಯಕ ರಾಣಾ, ನಾಯಕಿ ಗ್ರೀಷ್ಮಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಿರ್ದೇಶಕ ಪ್ರೇಮ್ ರಿಯಲ್ ಲೈಫ್ಸ್ಟೋರಿಯನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು. ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಿಸಿದ್ದಾರೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.