ವಿಜಯದ ನಗು ಚೆಲ್ಲಿದ ‘ಏಕ್ ಲವ್ ಯಾ’; ಖುಷಿ ಹಂಚಿಕೊಂಡ ಚಿತ್ರತಂಡ
Team Udayavani, Mar 11, 2022, 1:05 PM IST
‘ಏಕ್ ಲವ್ ಯಾ’ ಚಿತ್ರತಂಡ ಸದ್ಯ ಖುಷಿಯ ಮೂಡ್ ನಲ್ಲಿದೆ. ಅದಕ್ಕೆ ಕಾರಣ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಹೌದು, ಸುಮಾರು 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ “ಏಕ್ ಲವ್ ಯಾ’ ಸಿನಿಮಾಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಗಳಿಕೆಯಲ್ಲೂ ಸಿನಿಮಾ ಮುಂದಿದೆ. ಇದೇ ವಿಷಯವನ್ನು ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಬಿಡುಗಡೆಯ ಬಳಿಕದ ಬೆಳವಣಿಗೆಗಳ ಬಗ್ಗೆ ಮಾತನಾಡಿತು.
ಮೊದಲಿಗೆ “ಏಕ್ ಲವ್ ಯಾ’ ಬಗ್ಗೆ ಮಾತನಾಡಿದ ನಿರ್ಮಾಪಕಿ ರಕ್ಷಿತಾ ಪ್ರೇಮ್, “ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದಲ್ಲಿ ಆಡಿಯನ್ಸ್ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಪ್ರೇಕ್ಷಕರು, ಮಾಧ್ಯಮಗಳು ಮತ್ತು ಸಿನಿಮಾ ಇಂಡಸ್ಟ್ರಿ ಕಡೆಯಿಂದಲೂ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್ ಸಿಗುತ್ತಿದೆ. ಇಂಥದ್ದೊಂದು ಸಕ್ಸಸ್‌ಗೆ ಕಾರಣರಾದ ತಂಡದವರಿಗೆ, ಪ್ರೇಕ್ಷಕರಿಗೆ ಎಲ್ಲರಿಗೂ ಧನ್ಯವಾದಗಳು’ ಎಂದರು.
ಮೊದಲ ಸಿನಿಮಾದಲ್ಲೆ ಒಂದು ಬಿಗ್ ಎಂಟ್ರಿ ಕೊಟ್ಟಿರುವುದಕ್ಕೆ ನಾಯಕ ನಟ ರಾಣಾ ಕೂಡ ಖುಷಿಯಾಗಿದ್ದಾರೆ. “ಮೊದಲ ಸಿನಿಮಾದರೂ, ಪ್ರೇಕ್ಷಕರು ತುಂಬ ಪ್ರೀತಿಯಿಂದ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದವನ್ನು ಬಿಟ್ಟು ಬೇರೇನೂ ಹೇಳುವಂತಿಲ್ಲ’ ಎಂಬುದು ರಾಣಾ ಮಾತು.
ಇದನ್ನೂ ಓದಿ:ಸ್ಯಾಂಡಲ್ ವುಡ್ ಗೆಲುವಿನ ಓಟ…; ಮೀಡಿಯಂ ಬಜೆಟ್ ಚಿತ್ರಗಳ ಭರ್ಜರಿ ಕಲೆಕ್ಷನ್!
ನಾಯಕಿ ರೀಷ್ಮಾ ನಾಣಯ್ಯ ಮತ್ತು ನಟ ಸುಚೇಂದ್ರ ಪ್ರಸಾದ್ ಅವರಿಗೂ “ಏಕ್ ಲವ್ ಯಾ’ ಹೊಸ ಅನುಭವ ಕೊಟ ಸಿನಿಮಾ. ಎಲ್ಲರಿಗೂ ಮುಟ್ಟುವಂಥ ಮತ್ತು ಎಲ್ಲರೂ ಮೆಚ್ಚುವಂಥ ಸಿನಿಮಾದಲ್ಲಿ ಅಭಿನಯಿಸಿರುವುದಕ್ಕೆ ಇಬ್ಬರೂ ಖುಷಿಯ ಮಾತುಗಳನ್ನಾಡಿದರು.
ಖುಷಿಯ ಹಿಂದೆ ಪೈರಸಿ ಬಗ್ಗೆ ಬೇಸರ: “ಇವತ್ತು ಪೈರಸಿ ಅನ್ನೋದು ಸಿನಿಮಾರಂಗಕ್ಕೆ ದೊಡ್ಡ ಶಾಪವಾಗಿದೆ. ಏನೇ ಪ್ರಯತ್ನ ಮಾಡಿದ್ರೂ ಪೈರಸಿ ತಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಒಳ್ಳೆಯ ಸಿನಿಮಾ ಸಿನಿಮಾ ಪೈರಸಿಗೆ ಬಲಿಯಾದಾಗ ತುಂಬ ನೋವಾಗುತ್ತದೆ. ಪೈರಸಿ ಅನ್ನೋದು ಕೇವಲ ನಮ್ಮ ಸಿನಿಮಾಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ಸಿನಿಮಾಗಳಿಗೂ ಪೈರಸಿ ಕಾಟ ಇದ್ದೇ ಇದೆ. ಪೈರಸಿ ಬಗ್ಗೆ ವಾಣಿಜ್ಯ ಮಂಡಳಿಗೆ, ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿಕೊಂಡರೂ, ಏನೂ ಪ್ರಯೋಜನವಾಗುತ್ತಿಲ್ಲ. ಎಲ್ಲರೂ ಒಟ್ಟಾಗಿ ಹೋರಾಡಿದರೆ ಮಾತ್ರ ಇದಕ್ಕೇನಾದ್ರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. “ಏಕ್ ಲವ್ ಯಾ’ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಮುಗಿದ ಅರ್ಧ ಗಂಟೆಯೊಳಗೆ ಅದರ ಕ್ಲೈಮ್ಯಾಕ್ಸ್ ದೃಶ್ಯಗಳು ಯು-ಟ್ಯೂಬ್, ಫೇಸ್‌ಬುಕ್, ಟೆಲಿಗ್ರಾಂ ಹೀಗೆ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿದ್ದವು.
ಸುಮಾರು ಸಾವಿರಕ್ಕೂ ಹೆಚ್ಚು ಸಿನಿಮಾದ ಪೈರಸಿಯ ಆನ್ ಲೈನ್ ಲಿಂಕ್‌ಗಳನ್ನು ಹುಡುಕಿ ಡಿಲೀಟ್ ಮಾಡಲಾಗಿದೆ ಅಷ್ಟಾದರೂ, ಹೊಸ ಲಿಂಕ್‌ಗಳಲ್ಲಿ ಸಿನಿಮಾದ ಪೈರಸಿ ಕಾಪಿ ಹರಿದಾಡುತ್ತಿದೆ’ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು ನಿರ್ದೇಶಕ ಪ್ರೇಮ್.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.