ಏಕ್ ಪ್ರೇಮ್ ಕೀ ಬಾತ್…
ರಕ್ಷಿತಾ ತಮ್ಮ ಹೀರೋ ಆದ್ನಮ್ಮ ...
Team Udayavani, Apr 5, 2019, 6:00 AM IST
“ಈಗ ಚಿತ್ರದ ಟೈಟಲ್ ಲಾಂಚ್’
-ನಿರ್ದೇಶಕ ಯೋಗರಾಜ್ ಭಟ್ ಹೀಗೆ ಘೋಷಿಸುತ್ತಿದ್ದಂತೆ ಯುಬಿ ಸಿಟಿಯ ಸ್ಕೈಬಾರ್‌ನಲ್ಲಿದ್ದವರೆಲ್ಲರೂ ಎದುರಿಗಿದ್ದ ಎಲ್‌ಇಡಿ ಪರದೆಯನ್ನೇ ದಿಟ್ಟಿಸತೊಡಗಿದರು. ಥಟ್ಟನೆ ಲೇಸರ್ ಲೈಟ್ ಯುಬಿ ಸಿಟಿಯ ಪಕ್ಕದ ಟವರ್ ಮೇಲೆ ಬಿತ್ತು. ಎಲ್‌ಇಡಿ ಕಡೆ ನೋಡುತ್ತಿದ್ದವರ ಮುಖ ಪಕ್ಕ ತಿರುಗಿತು. ನೇರವಾಗಿ ಪಕ್ಕದ ಟವರ್ ಮೇಲೆ ಲೇಸರ್ ಲೈಟ್ ಕಲರ್‌ಫುಲ್ ಡ್ಯಾನ್ಸ್ ಮಾಡುತ್ತಾ “ಏಕಲವ್ಯ’ ಎಂದು ಬರೆದೇ ಬಿಟ್ಟಿತು. 16ನೇ ಮಹಡಿಯ ಸ್ಕೈಬಾರ್‌ನಲ್ಲಿದ್ದವರೆಲ್ಲರೂ ಜೋಶ್‌ನಿಂದ ಕಿರುಚಿದರು. ನಿರ್ದೇಶಕ ಪ್ರೇಮ್ ಎಂದಿನಂತೆ, “ಸೂಪರ್ ಸೂಪರ್’ ಎನ್ನುತ್ತಾ ನಗುತ್ತಿದ್ದರು. ಅಲ್ಲಿಗೆ ಪ್ರೇಮ್ ಹಾಗೂ ರಕ್ಷಿತಾ ಕನಸು ನನಸಾಗುವ ಜೊತೆಗೆ ರಾಣಾ ಅವರ ಎಂಟ್ರಿ ಕೂಡಾ ಭರ್ಜರಿಯಾಗಿಯೇ ಆಯಿತು.
ಇಷ್ಟು ದಿನ ಬೇರೆ ಹೀರೋಗಳಿಗೆ ಸಿನಿಮಾ ಮಾಡುತ್ತಿದ್ದ ಪ್ರೇಮ್ ಈ ಬಾರಿ ತಮ್ಮ ಕುಟುಂಬದಿಂದಲೇ ಒಬ್ಬರನ್ನು ಹೀರೋ ಆಗಿ ಲಾಂಚ್ ಮಾಡಿದ್ದಾರೆ. ಅದು ಅವರ ಭಾಮೈದ. ರಕ್ಷಿತಾ ಅವರ ಸಹೋದರ ಅಭಿಷೇಕ್ “ಏಕಲವ್ಯ’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದಾರೆ. ಸಿನಿಮಾ ಆರಂಭದಿಂದಲೂ ಸಖತ್ ಸೌಂಡ್ ಮಾಡುತ್ತಲೇ ಬರುವ ಪ್ರೇಮ್ ಈ ಬಾರಿ ತಮ್ಮ ಭಾಮೈದ ಲಾಂಚ್ ಅನ್ನು ವಿಭಿನ್ನವಾಗಿಯೇ ಮಾಡಿದರು. ಸಾಮಾನ್ಯವಾಗಿ ಸ್ಕೈಬಾರ್‌ನಲ್ಲಿ ಸಿನಿಮಾ ಲಾಂಚ್ ಆಗೋದು ಕಡಿಮೆ. ಆದರೆ, ಪ್ರೇಮ್ ತಮ್ಮ “ಏಕಲವ್ಯ’ ಚಿತ್ರವನ್ನು ಅಲ್ಲೇ ಅದ್ಧೂರಿಯಾಗಿ ಲಾಂಚ್ ಮಾಡಿದರು.
ಅಭಿಷೇಕ್ ಚಿತ್ರರಂಗಕ್ಕೆ ಬರುವಾಗಲೇ ಹೆಸರು ಬದಲಿಸಿಕೊಂಡೇ ಬಂದಿದ್ದಾರೆ. ರಾಣಾ ಎಂಬ ಹೆಸರಿನೊಂದಿಗೆ ಎಂಟ್ರಿಕೊಟ್ಟಿದ್ದಾರೆ. ಇನ್ನು, ಸಹೋದರನ ಲಾಂಚ್ ದಿನ ಸಹಜವಾಗಿಯೇ ರಕ್ಷಿತಾ ಎಕ್ಸೆ„ಟ್ ಆಗಿದ್ದರು. “ಕನ್ನಡ ಚಿತ್ರರಂಗ ನನ್ನನ್ನು ಕೈ ಹಿಡಿದು ನಡೆಸಿದೆ. ನೇಮು-ಫೇಮು ಎಲ್ಲವನ್ನು ಕೊಟ್ಟಿದೆ. ಈಗ ನಮ್ಮ ಕುಟುಂಬದಿಂದ ಮತ್ತೂಬ್ಬರು ಬರುತ್ತಿದ್ದಾರೆ. ಹೀರೋ ಆಗಬೇಕೆಂಬುದು ನಮ್ಮ ಆಸೆಯಲ್ಲ. ಎಂಬಿಎ ಮಾಡಲು ಅಮೆರಿಕಾಕ್ಕೆ ಹೋಗು ಅಂದಾಗ, ಅವನು ಆ್ಯಕ್ಟಿಂಗ್ ಸ್ಕೂಲ್‌ಗೆ ಹೋಗುತ್ತೇನೆ ಎಂದ. ಅವನಲ್ಲಿ ಸಿನಿಮಾದ ಆಸಕ್ತಿ, ಶ್ರದ್ಧೆ ಎಲ್ಲವೂ ಇದೆ. ನನಗಿಂತ ಹೆಚ್ಚು ಡೆಡಿಕೇಶನ್ ಇದೆ. ನಾನು ಒಂದು ದಿನಾನೂ ಜಿಮ್‌ಗೆ ಹೋದವಳಲ್ಲ. ಆದರೆ, ರಾಣಾ ತುಂಬಾ ವಕೌìಟ್ ಮಾಡುತ್ತಾನೆ. ಇವನನ್ನು ಹರಸಿ, ಬೆಳೆಸಿ’ ಎಂದರು. “ಏಕಲವ್ಯ’ ಒಂದು ಪಕ್ಕಾ ಯೂತ್‌ಫುಲ್ ಸಿನಿಮಾವಾಗಿದ್ದು, ತುಂಬಾ ಸ್ಟೈಲಿಶ್ ಹಾಗೂ ಮಾಡರ್ನ್ ಆಗಿರುವಂತಹ ಹಾಡುಗಳನ್ನು ನೀಡುವಂತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರನ್ನು ಕೇಳಿಕೊಂಡಿದ್ದಾರಂತೆ. ನಿರ್ದೇಶಕ ಪ್ರೇಮ್ ಹೆಚ್ಚೇನು ಮಾತನಾಡಲಿಲ್ಲ. ಎಂದಿನಂತೆ ಈ ಬಾರಿಯೂ ಸಿನಿಮಾದ ಕಥೆಯ ಬಗ್ಗೆ ಏನೂ ಮಾತನಾಡದೇ, ನಗುತ್ತಲೇ ಎಲ್ಲರಿಗೂ ಥ್ಯಾಂಕ್ಸ್ ಹೇಳಿದರು. ನಾಯಕ ರಾಣಾ ಅವರು ಈಗಾಗಲೇ ಪ್ರೇಮ್ ಜೊತೆ “ದಿ ವಿಲನ್’ ಸಿನಿಮಾದಲ್ಲಿ ಕೆಲಸ ಮಾಡಿರುವುದರಿಂದ ಅವರ ಶೈಲಿ ಗೊತ್ತಿದೆ. “ಪ್ರೇಮ್ ಅವರ ಜೊತೆ “ದಿ ವಿಲನ್’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಅವರ ಕಲ್ಪನೆಯ ದೃಶ್ಯ ಬರುವವರೆಗೆ ಅವರು ಬಿಡುವುದಿಲ್ಲ’ ಎನ್ನುತ್ತಾ ಎಲ್ಲರಿಗೂ ಥ್ಯಾಂಕ್ಸ್ ಹೇಳಿದರು.
ಟೈಟಲ್ ಲಾಂಚ್‌ಗೆ ಆಗಮಿಸಿದ್ದ ಯೋಗರಾಜ್ ಭಟ್, ಪ್ರೇಮ್ ಅವರು ಸಿನಿಮಾವನ್ನು ಮಾರ್ಕೇಟಿಂಗ್ ಮಾಡುವ ಶೈಲಿಯನ್ನು ಕೊಂಡಾಡಿದರು. ಹಲಸಿನ ಹಣ್ಣು ತೆರೆದರೆ ಅದರೊಳಗೆ ಚಿತ್ರದ ಟೈಟಲ್ ಬರೆದಿರುತ್ತಾರೆ ಎಂದು ಪ್ರೇಮ್ ಬಗ್ಗೆ ಗುಣಗಾನ ಮಾಡಿದರು. ಈ ಚಿತ್ರವನ್ನು ರಕ್ಷಿತಾ ಫಿಲಂ ಫ್ಯಾಕ್ಟರಿನಡಿ ನಿರ್ಮಾಣ ಮಾಡಲಾಗುತ್ತಿದೆ. ಅಂದಹಾಗೆ, “ಏಕಲವ್ಯ’ ಚಿತ್ರದ ಟೈಟಲ್ ಲಾಂಚ್ ಜೊತೆಗೆ ಅಂದು ರಕ್ಷಿತಾ ಅವರ ಹುಟ್ಟುಹಬ್ಬವೂ ಇದ್ದ ಕಾರಣ ಸ್ಕೈ ಬಾರ್ ಮತ್ತಷ್ಟು ರಂಗೇರಿತ್ತು.
ಸ್ಟೈಲಿಶ್ ಟೈಟಲ್
ಪ್ರೇಮ್ “ಏಕಲವ್ಯ’ ಚಿತ್ರದ ಟೈಟಲ್ ಅನ್ನು ಭಿನ್ನವಾಗಿ ಬರೆಸಿದ್ದಾರೆ. ಮೇಲ್ನೋಟಕ್ಕೆ ಅದು “ಏಕ್ ಲವ್ ಯಾ’ ಎಂದು ಕಾಣುತ್ತದೆ. ಆದರೆ, ಟೈಟಲ್ “ಏಕಲವ್ಯ’. ಪ್ರೇಮ್ ಈ ರೀತಿ ಬರೆಸಲು ಕಾರಣ ಚಿತ್ರದ ಕಥೆ. “ಏಕಲವ್ಯ’ ಚಿತ್ರದ ಕಥೆ ಕೂಡಾ ತುಂಬಾ ಸ್ಟೈಲಿಶ್ ಹಾಗೂ ಮಾಡರ್ನ್ ಆಗಿದ್ದು, ಅದಕ್ಕೆ ತಕ್ಕಂತೆ ಟೈಟಲ್ ಡಿಸೈನ್ ಮಾಡಿಸಲಾಗಿದೆ. ಜೊತೆಗೆ ಈ ಚಿತ್ರಕ್ಕೆ ಲವ್ ಇಸ್ ಆಲ್ ಯು ನೀಡ್ ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ಈ ಚಿತ್ರಕ್ಕಾಗಿ ರಾಣಾ ಸಾಕಷ್ಟು ತಯಾರಿ ಕೂಡಾ ನಡೆಸಿದ್ದಾರೆ. “ದಿ ವಿಲನ್’ ಸೆಟ್‌ನಲ್ಲೇ ತರಬೇತಿ ಪಡೆದಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ಕ್ಯಾಮರಾ ಮುಂದೆ ನಟಿಸುವ ಮುನ್ನ ರಾಣಾ ಅವರು ಆ ದೃಶ್ಯವನ್ನು ಮಾಡಿ, ತರಬೇತಿ ಪಡೆಯುತ್ತಿದ್ದರಂತೆ.
ಪ್ರೇಮ್, ಹೆಂಡ್ತಿ-ಮಗನಿಗೆ ಹೆಚ್ಚು ಟೈಮ್ ಕೊಡಲ್ಲ. ಹಾಗಾಗಿ, ಅವರು ಒಳ್ಳೆಯ ಗಂಡ ಅಲ್ಲ. ಆದರೆ ಒಳ್ಳೆಯ ನಿರ್ದೇಶಕ. ಸಿನಿಮಾವನ್ನು ತುಂಬಾ ಪ್ರೀತಿಸಿ, ಅದರಲ್ಲೇ ಮುಳುಗಿರುತ್ತಾರೆ..
-ರಕ್ಷಿತಾ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.