ಖುಷಿ ಹುಡುಗನ ಖುಷಿ ಸಿನಿಮಾ
Team Udayavani, Jun 22, 2018, 6:00 AM IST
ಅಂತೂ “ಮಸ್ತ್ ಖಲಂದರ್’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ನಿತಿನ್ ಮತ್ತು ಸ್ವರೂಪಿಣಿ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರವು ಪ್ರಾರಂಭವಾಗಿ ನಾಲ್ಕು ವರ್ಷಗಳೇ ಆಗಿವೆ. ಕಾರಣಾಂತರಗಳಿಂದ ಚಿತ್ರ ತಡವಾಗಿ, ಈಗ ಕೊನೆಗೂ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡದವರು ಒಂದೆಡೆ ಸೇರಿದ್ದರು.
ಈ ಚಿತ್ರವನ್ನು ಆದಿತ್ಯ ರಾಜಕುಮಾರ್ ನಿರ್ದೇಶಿಸಿದ್ದಾರೆ. ಅವರ ಪ್ರಕಾರ ಇದೊಂದು ಕಲರ್‌ಫುಲ್ ಚಿತ್ರವಂತೆ. ಇವತ್ತಿನ ತಲೆಮಾರಿನವರಿಗೆ ಇಷ್ಟವಾಗುವ ಚಿತ್ರವಾಗಿ ಮೂಡಿ ಬಂದಿದೆಯಂತೆ. “ನಮ್ಮ ಅಕ್ಕ-ಪಕ್ಕದಲ್ಲೇ ನಡೆದಂತಹ ಕಥೆ ಇಲ್ಲಿದೆ. ಅದನ್ನೇ ಸಿನಿಮ್ಯಾಟಿಕ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಇನ್ನು ನಿರ್ಮಾಪಕರಲ್ಲೊಬ್ಬರಾದ ಚಂದ್ರ ಈ ಚಿತ್ರಕ್ಕೆ ಕಥೆ ಬರೆದಿದ್ದಾರಂತೆ. ಮಧುಗಿರಿಯ ಏಕಶಿಲಾ ಬೆಟ್ಟದಲ್ಲಿ ಚಿತ್ರೀಕರಣ ಮಾಡಿದ ಮೊದಲ ಚಿತ್ರ ಎಂದು ಅವರು ಖುಷಿಪಟ್ಟರು. ಚಿತ್ರವು ಈಗಿನ ಟ್ರೆಂಡ್‌ಗೆ ಇದೆ ಎಂದರು ನಾಯಕ ನಿತಿನ್. “ನಿರ್ಮಾಪಕರು ಬಹಳ ಚೆನ್ನಾಗಿ ಕಥೆ ಮಾಡಿದ್ದಾರೆ. ಅವರಿಗೆ ನಿರ್ದೇಶಕರು ಸಾಥ್ ಕೊಟ್ಟಿದ್ದಾರೆ. ಇದೊಂದು ತಂದೆ-ಮಗನ ಬಾಂಧವ್ಯದ ಸಿನಿಮಾ. ಇಲ್ಲಿ ನಾಯಕನಿಗೆ ತಂದೇನೇ ಪ್ರಪಂಚ’ ಎಂದು ಹೇಳಿದರು.
ನಿತಿನ್ ತಂದೆಯಾಗಿ “ಸಿದ್ಲಿಂಗು’ ಶ್ರೀಧರ್ ನಟಿಸಿದ್ದಾರೆ. ಅವರು ತಮ್ಮ ತಂದೆಯ ಜೊತೆಗಿನ ಬಾಂಧವ್ಯನ್ನು ನೆನಪಿಸಿಕೊಳ್ಳುತ್ತಾ, “ಇಲ್ಲಿ ಅಪ್ಪ-ಮಗನ ಸಂಬಂಧವನ್ನು ಚೆನ್ನಾಗಿ ತೋರಿಸಿದ್ದಾರೆ. ಅವರು ಅಪ್ಪ-ಮಗನಾದರೂ ಸ್ನೇಹಿತರ ತರಹ ಇರುತ್ತಾರೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಖುಷಿಯಾಯಿತು. ಸುಳ್ಳು ಹೇಳಬಾರದು ಎಂಬ ಸಂದೇಶ ಈ ಚಿತ್ರದಲ್ಲಿ’ ಎಂದು ಹೇಳಿದರು. ನಟಿ ಸ್ವಾತಿ, ಛಾಯಾಗ್ರಾಹಕ ವಿನ್ಸೆಂಟ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.