ಬೆಳ್ಳಿತೆರೆಯ ಮೇಲೆ ಮಹಾಕಾವ್ಯ
Team Udayavani, Sep 21, 2018, 6:00 AM IST
ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳು ಆಗಾಗ ಸದ್ದು ಮಾಡುತ್ತವೆ. ಆ ಸಾಲಿಗೆ ಈಗ “ಮಹಾಕಾವ್ಯ’ ಎಂಬ ಚಿತ್ರವೂ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಪೂರ್ಣಗೊಂಡಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾ ರಂಗದ ಗಣ್ಯರಿಗೆ ವಿಶೇಷ ಪ್ರದರ್ಶನ ಏರ್ಪಡಿಸಿತ್ತು ಚಿತ್ರತಂಡ. ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟರು ನಿರ್ದೇಶಕ ಶ್ರೀದರ್ಶನ್. ನಿರ್ದೇಶಕರಿಲ್ಲಿ ದುರ್ಯೋಧನ ಪಾತ್ರವನ್ನೂ ಮಾಡಿದ್ದಾರೆ. ಎಸ್.ಆರ್.ಕೆ. ಪಿಕ್ಚರ್ ಬ್ಯಾನರ್‌ನಲ್ಲಿ ತಯಾರಾಗಿರುವ ಎರಡನೇ ಸಿನಿಮಾವಿದು.
ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡ ನಿರ್ದೇಶಕ, ಶ್ರೀದರ್ಶನ್, “58 ಗ್ರಂಥಗಳನ್ನು ಓದಿ ಆ ಪೈಕಿ ಪಂಪನ “ಶಾಂತಿನಾಥ ಪುರಾಣ’, ರನ್ನನ “ಗದಾಯುದ್ಧ’ ಮತ್ತು ಪೊನ್ನನ “ಶಕ್ತಿ ಪುರಾಣ’ದ ಭಾಗವನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವುಗಳೊಂದಿಗೆ ಸುಮಾರು 38 ಕಾವ್ಯ ಪದ್ಯಗಳನ್ನು ಸಹ ಚಿತ್ರದಲ್ಲಿ ಬಳಸಲಾಗಿದೆ ಎಂದು ವಿವರ ಕೊಟ್ಟ ಶ್ರೀದರ್ಶನ್, “ಚಿತ್ರಕ್ಕೆ ಕಣಗಾಲ್ ಪ್ರಭಾಕರಶಾಸಿŒ ಪುತ್ರ ಪುರುಷೊತ್ತಮ್ ಕಣಗಾಲ್ ಅವರು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಹೆಚ್ಚಾಗಿದೆ. ಸುಮಾರು ಆರು ತಿಂಗಳ ಕಾಲ ಗ್ರಾಫಿಕ್ಸ್ ಕೆಲಸ ನಡೆದಿದೆ. ಚಿತ್ರದಲ್ಲಿ 52 ನಿಮಿಷಗಳ ಸಿಜಿ ಕೆಲಸ ಕಾಣಿಸಿಕೊಳ್ಳುತ್ತದೆ. ನಾಲ್ಕು ದಶಕ ಬಳಿಕ ಈ ರೀತಿಯ ಚಿತ್ರ ಮಾಡಲು ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಇಂತಹ ಚಿತ್ರಗಳು ಜನರನ್ನು ತಲುಪಬೇಕು. ಹಾಗಾಗಿ ಮಾಧ್ಯಮದ ಸಹಕಾರ ಬೇಕು’ ಅಂದರು ಶ್ರೀದರ್ಶನ್.
ಅಂದು ಚಿತ್ರ ವೀಕ್ಷಿಸಿ, ಮಾತನಾಡಿದ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ, “ಇಂತಹ ಚಿತ್ರವನ್ನು ಚಿಂತಕರು ನೋಡುವುದಕ್ಕಿಂತ ಶಿಕ್ಷಕರು ನೋಡಬೇಕು. ಅಂತಹವರಿಗೆ ತೋರಿಸಿದರೆ, ಅವರು ಒಂದಷ್ಟು ಮಕ್ಕಳಿಗೆ ಕಲಿಸುತ್ತಾರೆ. ಕಮರ್ಷಿಯಲ್ ಚಿತ್ರಗಳ ನಡುವೆ ಈ ರೀತಿಯ ಚಿತ್ರಗಳು ತಯಾರಾಗುವುದು ಅಪರೂಪ. ಚಿತ್ರದಲ್ಲಿ ಪ್ರಾಚೀನ, ಹಳೆಗನ್ನಡ ಬಳಸಿ ಮಾಡುವುದು ಸುಲಭವಲ್ಲ. ಪುರಾಣ ಮತ್ತು ಮಹಾಕಾವ್ಯ ಚೆನ್ನಾಗಿ ಅರಿತುಕೊಂಡಿದ್ದರೆ ಮಾತ್ರ ಇಂತಹ ಚಿತ್ರಕ್ಕೆ ಕೈ ಹಾಕಲು ಸಾಧ್ಯ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಹರಸಿದಿರು ಬರಗೂರು ರಾಮಚಂದ್ರಪ್ಪ.
ನಿರ್ಮಾಪಕಿ ಎಸ್.ವಿಜಯ ಅವರು, “ತಮ್ಮ ಪತಿ ಇಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಹಾಕಿದ ಹಣ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಚಿತ್ರ ದಾಖಲೆಯಾಗಿ ಉಳಿಯುತ್ತದೆ ಎಂಬ ವಿಶ್ವಾಸವಿದೆ. ಒಳ್ಳೆಯ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ’ ಎಂಬುದು ನಿರ್ಮಾಪಕರ ಮಾತು. ಅಂದು ಆಡಿಯೋ ಬಿಡುಗಡೆ ವೇಳೆ, ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಸೇರಿದಂತೆ ಹಲವರು ಇದ್ದರು. ಟೋಟಲ್ ಕನ್ನಡ ಸಂಸ್ಥೆ ಹಾಡುಗಳನ್ನು ಹೊರತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.