ಎಸ್ಕೇಪ್ ಆದೋರ ಸೇಫ್ ಬೆಟ್ ನಿರ್ಮಾಣ ನಿರ್ದೇಶನ ದರ್ಶನ!
Team Udayavani, Feb 3, 2017, 3:45 AM IST
ದರ್ಶನ್ ಒಂದೆರಡು ವರ್ಷಗಳ ಹಿಂದೆಯೇ ಥ್ರಿಲ್ಲಿಂಗ್ ಸಬೆjಕ್ಟ್ವೊಂದನ್ನು ಮಾಡಿಟ್ಟುಕೊಂಡಿದ್ದರಂತೆ. ಆರಂಭದಿಂದ ಅಂತ್ಯದವರೆಗೂ ಸಖತ್ ಥ್ರಿಲ್ ಕೊಡುತ್ತಲೇ ಸಾಗುವ ಆ ಸಿನಿಮಾವನ್ನು ಮಾಡಲು ದರ್ಶನ್‌ಗೆ ಈಗ ಕಾಲ ಕೂಡಿ ಬಂದಿದೆ. ಅಂದಹಾಗೆ, ದರ್ಶನ್‌ಗೆ ಇದು ಮೊದಲ ಸಿನಿಮಾ. ಯಾವ ದರ್ಶನ್ ಬಗ್ಗೆ ಹೇಳುತ್ತಿದ್ದಾರೆಂದು ಕನ್‌ಫ್ಯೂಸ್ ಆಗಬೇಡಿ. ನಾವು ಹೇಳುತ್ತಿರೋದು ಈಗಷ್ಟೇ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿರುವ ನವ ನಿರ್ದೇಶಕ ದರ್ಶನ್ ಬಗ್ಗೆ. “ಎಸ್ಕೇಪ್’ ಎಂಬ ಸಿನಿಮಾ ಮೂಲಕ ದರ್ಶನ್ ತಮ್ಮ ಸಿನಿ ಜರ್ನಿ ಆರಂಭಿಸಿದ್ದಾರೆ. ಈ ಚಿತ್ರವನ್ನು ದರ್ಶನ್ ಕನಕ ನಿರ್ಮಿಸುತ್ತಿದ್ದಾರೆ.
ದರ್ಶನ್ ಹೇಳುವಂತೆ “ಎಸ್ಕೇಪ್’ ಒಂದು ಪಕ್ಕಾ ಆ್ಯಕ್ಷನ್ ಕಂ ಥ್ರಿಲ್ಲರ್ ಸಬ್ಜೆಕ್ಟ್. ಒಂದು ವಸ್ತು ಕಳೆದು ಹೋಗುವ ಮೂಲಕ ಚಿತ್ರದ ಥ್ರಿಲ್ಲಿಂಗ್ ಅಂಶಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆಯಂತೆ. ಪ್ರತಿ ದೃಶ್ಯ ಕೂಡಾ ಕುತೂಹಲಭರಿತವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ವಿಶ್ವಾಸ ದರ್ಶನ್ ಅವರದು. ಅಂದಹಾಗೆ, “ದಿ ಟಾರ್ಗೆಟ್’ ಎಂಬ ಕೊರಿಯನ್ ಸಿನಿಮಾದ ಸ್ಫೂರ್ತಿಯೊಂದಿಗೆ “ಎಸ್ಕೇಪ್’ ತಯಾರಾಗುತ್ತಿದೆ. ಚಿತ್ರದ ಬಗ್ಗೆ ಹೆಚ್ಚು ಮಾತನಾಡಿದರೆ ಥ್ರಿಲ್ ಇರಲ್ಲ ಎಂಬ ನಿರ್ಧಾರಕ್ಕೆ ಬಂದಂತಿತ್ತು ನಿರ್ದೇಶಕ ದರ್ಶನ್. ಅದೇ ಕಾರಣಕ್ಕಾಗಿ ಅವರು ಏನೇ ಪ್ರಶ್ನೆ ಕೇಳಿದರೂ ತೆರೆಮೇಲೆ ನೋಡಿ ಎಂಬ ಉತ್ತರ ಅವರದ್ದಾಗಿತ್ತು. ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆದ ಬಳಿಕ ಅದ್ಧೂರಿಯಾಗಿ ಮುಹೂರ್ತ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಸ್ಟಾರ್ ನಟರೊಬ್ಬರು ಬಿಝಿ ಇರುವುದರಿಂದ ಈಗ ಚಿತ್ರೀಕರಣ ಮಾಡಿ ಆ ನಂತರ ಮುಹೂರ್ತ ನಡೆಯಲಿದೆಯಂತೆ.
ಚಿತ್ರದಲ್ಲಿ ದೀಪಮ್ ಕೊಹ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಪ್ರಗ್ಯಾ ಎನ್ನುವ ಜಾರ್ಖಂಡ್ ಹುಡುಗಿ “ಎಸ್ಕೇಪ್’ ನಾಯಕಿ. ನಾಯಕ ದೀಪಮ್‌ಗೆ ಇದು ಮೊದಲ ಸಿನಿಮಾ. ಅಮೆರಿಕಾದಲ್ಲಿ ನಟನಾ ತರಬೇತಿ ಪಡೆದಿರುವ ದೀಪಮ್‌ಗೆ “ಎಸ್ಕೇಪ್’ನಲ್ಲಿ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆಯಂತೆ. ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಳ್ಳುತ್ತಿರುವ ಅವರ ಎರಡು ಮುಖಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ. ನಾಯಕಿ ಪ್ರಗ್ಯಾ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ಸಾಯಿಕಿರಣ್ ಮೂರು ಹಾಡುಗಳನ್ನು ಸಂಯೋಜಿಸುತ್ತಿದ್ದಾರೆ. ಹಾಡು ಕಥೆಗೆ ಪೂರಕವಾಗಿದ್ದು, ಕಥೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಅವರ ಮಾತು. ಹೈಟ್ ಮಂಜು “ಎಸ್ಕೇಪ್’ನ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ಕಂ ಛಾಯಾಗ್ರಾಹಕ ದರ್ಶನ್ ಕನಕ ಅವರಿಗೆ ಕಥೆ ಇಷ್ಟವಾದ ಕಾರಣ ನಿರ್ಮಾಣ ಮಾಡುತ್ತಿದ್ದಾರಂತೆ. ಮೈಸೂರು, ಮನಾಲಿ, ಶ್ರೀನಗರದಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.