ಎವಿಡೆನ್ಸ್ ಜೊತೆಬಂದವರು..
Team Udayavani, Sep 25, 2020, 8:49 PM IST
ಹೊಸತರ ಪ್ರಯೋಗಗಳನ್ನು ಮಾಡಲು ಬಯಸುವವರಿಗೆ ಸಿನಿಮಾದಲ್ಲಿ ಹತ್ತಾರು ಅವಕಾಶಗಳು ಇದ್ದೇ ಇರುತ್ತದೆ. ಇಂಥದ್ದೇ ಅವಕಾಶಗಳನ್ನು ಬಳಸಿಕೊಂಡು ಇಲ್ಲೊಂದು ಹೊಸಬರ ತಂಡ ಹೊಸ ಪ್ರಯೋಗದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಹೊರಟಿದೆ.
ಅಂದಹಾಗೆ, ಆ ಸಿನಿಮಾದ ಹೆಸರು “ಎವಿಡೆನ್ಸ್’. ಈ ಚಿತ್ರದ ವಿಶೇಷತೆ ಎಂದರೆ, ಕೇವಲ ಒಂದೇ ಲೊಕೇಶನ್‌ನಲ್ಲಿ, ಎರಡು ಪಾತ್ರಗಳನ್ನು ಇಟ್ಟುಕೊಂಡು ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ಸೆಟ್ಟೇರಿದ್ದ ಈ ಚಿತ್ರ ಕೇವಲ ಐದು ದಿನಗಳಲ್ಲಿ ತನ್ನ ಇಡೀ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಈಗ ಪೋಸ್ಟ್ ಪ್ರೊಡಕ್ಷನ್‌ಕೆಲಸಗಳಲ್ಲಿ ನಿರತವಾಗಿದೆ. ಯುವ ಪ್ರತಿಭೆ ಪ್ರವೀಣ್ ರಾಮಕೃಷ್ಣ “ಎವಿಡೆನ್ಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇಂಥದ್ದೊಂದು ಸಿನಿಮಾ ಪ್ರಯೋಗದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರವೀಣ್ ರಾಮಕೃಷ್ಣ, “ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಂಥದ್ದೊಂದು ಸಿನಿಮಾ ಮಾಡಬಹುದಾ ಎಂಬ ಯೋಚನೆ ಬಂತು. ಅದರಂತೆ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಸ್ಕ್ರಿಪ್ಟ್ ಕೂಡ ಮಾಡಿಕೊಂಡೆವು. ಲಾಕ್‌ಡೌನ್ ತೆರವಾಗುತ್ತಿದ್ದಂತೆ, ನಮ್ಮ ಪ್ಲಾನ್ ಪ್ರಕಾರ ಒಂದೇ ಲೊಕೇಶನ್‌ನಲ್ಲಿ, ಎರಡು ಕ್ಯಾರೆಕ್ಟರ್‌ಗಳನ್ನು ಇಟ್ಟುಕೊಂಡು, ಐದು ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಇದೊಂದು ಸಸ್ಪೆನ್ಸ್ ಕಂ ಕ್ರೈಂ – ಥ್ರಿಲ್ಲರ್ ಶೈಲಿಯ ಸಿನಿಮಾ. ಒಬ್ಬ ಆರೋಪಿ ಮತ್ತು ತನಿಖಾ ಅಧಿಕಾರಿಯ ನಡುವೆ ಹೇಗೆ ವಿಚಾರಣೆ ಪ್ರಕ್ರಿಯೆ ನಡೆಯುತ್ತದೆ ಅನ್ನೋದರ ಸುತ್ತ ಇಡೀ ಸಿನಿಮಾ ಸಾಗುತ್ತದೆ’ ಎಂದು ವಿವರಣೆ ನೀಡುತ್ತಾರೆ.
“ಒಂದು ಸಿನಿಮಾವನ್ನು ಒಂದೇ ಜಾಗ ಮತ್ತು ಎರಡು ಪಾತ್ರಗಳನ್ನು ಬಳಸಿಕೊಂಡುಕಟ್ಟಿಕೊಡುವುದು ನಿಜಕ್ಕೂ ಸವಾಲಿನಕೆಲಸ. ಇಲ್ಲಿಯವರೆಗೆ ಎಲ್ಲೂ ಅನಾವರಣಗೊಳ್ಳದ ಸಸ್ಪೆನ್ಸ್ – ಥ್ರಿಲ್ಲರ್ ಕಥಾವಸ್ತು ಈ ಸಿನಿಮಾದಲ್ಲಿದೆ. ನೋಡುಗರು ಒಂದು ಕ್ಷಣವೂ ಅತ್ತಿತ್ತ ನೋಡದಂತೆ ಹಿಡಿದಿಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಿದ್ದೇವೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ ನಿರ್ದೇಶಕ ಪ್ರವೀಣ್ ರಾಮಕೃಷ್ಣ. “ಧೃತಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಎವಿಡೆನ್ಸ್’ ಚಿತ್ರದಲ್ಲಿ ಮಾನಸ ಜೋಶಿ ಮತ್ತು ರೋಬೋ ಗಣೇಶ್ ಎರಡು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.