ವಿಕ್ರಾಂತ್ ರೋಣ ನಿರೀಕ್ಷೆ ದುಪ್ಪಟ್ಟು: ಪ್ಯಾನ್ ಇಂಡಿಯಾ ರೋಣ ಸೌಂಡ್ ಜೋರು
Team Udayavani, Sep 3, 2021, 11:14 AM IST
ನಿರೀಕ್ಷೆ ದುಪ್ಪಟ್ಟಾಗಿದೆ. ಇದು ಕನ್ನಡ ಸಿನಿಮಾನಾ ಅಥವಾ ಹಾಲಿವುಡ್ ಸಿನಿಮಾನಾ ಎಂದು ಅಭಿಮಾನಿಗಳು ಮಾತನಾಡಿ ಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ “ವಿಕ್ರಾಂತ್ ರೋಣ’. ಹೌದು, ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ “ವಿಕ್ರಾಂತ್ ರೋಣ’ ಚಿತ್ರದ ಡೆಡ್‌ಮ್ಯಾನ್ಸ್ ಆ್ಯಂಥಮ್ ಹೆಸರಿನಲ್ಲಿ ಬಿಡುಗಡೆಯಾಗಿರುವ ವಿಡಿಯೋ ಗ್ಲಿಮ್ಸ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಜೊತೆಗೆ ಸಿನಿಮಾ ಮಂದಿ ಕೂಡಾ “ವಿಕ್ರಾಂತ್ ರೋಣ’ನಿಗೆ ಕಾತರದಿಂದ ಕಾಯುತ್ತಿದ್ದಾರೆ. ಇದು ಸುದೀಪ್ ಕೆರಿಯರ್‌ನ ಬಹುನಿರೀಕ್ಷಿತ ಚಿತ್ರವಾಗಿರೋದು ಸುಳ್ಳಲ್ಲ. ಆ ಮಟ್ಟಿಗೆ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಚಿತ್ರದ ವಿಡಿಯೋ ಗ್ಲಿಮ್ಸ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಚಿತ್ರದ ಒಂದು ಸಣ್ಣ ಬಿಟ್ ಇಡೀ ಸಿನಿಮಾದ ಗುಣಮಟ್ಟವನ್ನು ಸಾರಿ ಹೇಳುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಇಡೀ ಸಿನಿಮಾವನ್ನು ಹೊಸದಾಗಿ ಕಟ್ಟಿಕೊಟ್ಟಿರೋದು ಎದ್ದು ಕಾಣುತ್ತಿದೆ.ಕಿಚ್ಚ ಸುದೀಪ್ ಅವರ ಸ್ಟೈಲಿಶ್ ಲುಕ್ ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ:ದುಬಾೖಯಲ್ಲಿ “ಗೋಲ್ಡನ್ ಪಾವ್’
ಈಗಾಗಲೇ “ವಿಕ್ರಾಂತ್ ರೋಣ’ ಚಿತ್ರಕ್ಕೆ ಡಬ್ಬಿಂಗ್ ಮಾಡಿರುವ ಕಲಾವಿದರು ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಆ ಮಟ್ಟಿಗೆ ಸಿನಿಮಾ ಮೂಡಿಬಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ- 3ಡಿ ರಿಲೀಸ್
“ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಆ್ಯಕ್ಷನ್ ಅಡ್ವೆಂಚರ್ ಶೈಲಿಯ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3ಡಿ ಬಿಡುಗಡೆಯನ್ನುಕಾಣಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗೂ ಶಾಲಿನಿ ಮಂಜುನಾಥ್ ರವರ ನಿರ್ಮಾಣ, ಅಲಂಕಾರ್ ಪಾಂಡಿಯನ್ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ.
ಚಿತ್ರದಲ್ಲಿಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ಜಾಕ್ವೆಲಿನ್ ಕೇವಲ ಹಾಡಿನಲ್ಲಷ್ಟೇ ಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಾಕ್ವೆಲಿನ್ “ವಿಕ್ರಾಂತ್ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು. ಜಾಕ್ವೆಲಿನ್ ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್ ಕಲರ್‌ಫುಲ್ ಸೆಟ್ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಒಂದು ಹಾಡಿಗಾಗಿಯೇ 4 ಕೋಟಿಗೂ ಅಧಿಕ ವೆಚ್ಚ ಮಾಡಿದೆ ಚಿತ್ರತಂಡ. ಇನ್ನು, ಬಿಗ್ ಬಜೆಟ್‌ನ ಚಿತ್ರಗಳ ಸಾಲಿನಲ್ಲಿ “ವಿಕ್ರಾಂತ್ ರೋಣ’ಕೂಡಾ ನಿಲ್ಲುತ್ತದೆ. ಚಿತ್ರಕ್ಕಾಗಿ 10ಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಲಾಗಿದ್ದು, 70 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರ 3ಡಿಯಲ್ಲೂ ತಯಾರಾಗುತ್ತಿರುವುದರಿಂದ ಚಿತ್ರದ ಬಜೆಟ್‌ನಲ್ಲೂ ಏರಿಕೆಯಾಗಿದೆ.
ರಿಲೀಸ್ ಕಾತರ
“ವಿಕ್ರಾಂತ್ ರೋಣ’ ಚಿತ್ರವನ್ನು ಯಾವಾಗ ತೆರೆ ಮೇಲೆ ಕಣ್ತುಂಬಿಕೊಳ್ಳುತ್ತೇವೋ ಎಂಬ ನಿರೀಕ್ಷೆಯಿಂದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಚಿತ್ರದ ಬಹುತೇಕಕೆಲಸಗಳು ಪೂರ್ಣಗೊಂಡಿದ್ದು, ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶ ಸಿಕ್ಕಿದ ಬಳಕ ಚಿತ್ರ ಬಿಡುಗಡೆಯಾಗಲಿದೆ. ಮೊದಲು ಈ ಚಿತ್ರವನ್ನು ಆಗಸ್ಟ್ 19ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿಕೊಂಡಿತ್ತು. ಆದರೆ, ಕೋವಿಡ್‌ನಿಂದ ಅದು ಸಾಧ್ಯವಾಗಿಲ್ಲ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.