ಅನುಭವಗಳೇ ಸರ್ವಸ್ವ: ಸ್ನೇಹ ಪ್ರೀತಿ ಗುರಿ
Team Udayavani, Mar 3, 2017, 3:50 AM IST
ತಿಲಕ್ ಇನ್ನೊಂದು ಸಿನಿಮಾ ಮಾಡಿದ್ದಾರೆ. ಈ ಬಾರಿ ಅವರನ್ನು ನಿರ್ದೇಶಿಸಿರುವುದು ಶ್ರೇಯಸ್ ಕಬಾಡಿ ಎಂಬ ಹೊಸಬರು.
ಇಂಜಿನಿಯರಿಂಗ್ ಮಾಡಿ, ಚಿತ್ರರಂಗಕ್ಕೆ ಬಂದ ಶ್ರೇಯಸ್, ತಮ್ಮ ಅನುಭವಗಳಿಗೇ ಚಿತ್ರದ ರೂಪ ಕೊಡುತ್ತಿದ್ದಾರೆ. ಈಗಾಗಲೇ
ಶ್ರೇಯಸ್, “ಸರ್ವಸ್ವ’ ಚಿತ್ರವನ್ನು ಮಾಡಿ ಮುಗಿಸಿದ್ದಾರೆ.
ಆ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಶೇಯಸ್ ಮತ್ತು ಚಿತ್ರತಂಡದವರು ಮಾಧ್ಯಮದವರೆದುರು ಬಂದಿದ್ದರು. ಪ್ರೇಮಿಗಳು ಪರಸ್ಪರ ನೀನೇ ಸರ್ವಸ್ವ ಎನ್ನುತ್ತಾರೆ, ಸ್ವೇಹಿತರು ಸಹ ಅದೇ ಮಾತು ಹೇಳುತ್ತಾರೆ. ಆದರೆ, ನಿಜಕ್ಕೂ ಯಾರು ಸರ್ವಸ್ವ ಎಂದು ಈ ಚಿತ್ರದ ಮೂಲಕ ಚರ್ಚಿಸುವುದಕ್ಕೆ ಹೊರಟಿದ್ದಾರಂತೆ ಶ್ರೇಯಸ್. “ನಾನು ಚಿತ್ರರಂಗಕ್ಕೆ ಬಂದ ನಂತರ ಆದ ಕೆಲವು ಅನುಭವಗಳನ್ನು
ಈ ಚಿತ್ರದಲ್ಲಿ ಸೇರಿಸಿದ್ದೇನೆ. ಈ ಚಿತ್ರದಲ್ಲಿ ತಿಲಕ್ ಅವರು ನಿರ್ದೇಶಕನ ಪಾತ್ರ ಮಾಡಿದ್ದಾರೆ. ಇನ್ನು ನಾಯಕಿ ಚರ್ಚ್ನಲ್ಲಿ ವಯೊಲಿನ್ ನುಡಿಸುತ್ತಿರುತ್ತಾಳೆ. ಆಮೇಲೇನಾಗುತ್ತದೆ ಎಂಬುದನ್ನು ನೀವು ಚಿತ್ರದಲ್ಲೇ ನೋಡಿ’ ಎನ್ನುತ್ತಾರೆ ಶ್ರೇಯಸ್.
ಶ್ರೇಯಸ್ ಹೇಳಿದ ಕಥೆಯನ್ನು ಕೇಳಿ ತಿಲಕ್ಗೆ ಏನು ಮಾಡುತ್ತಾರೋ ಎಂದು ಅನಿಸಿತ್ತಂತೆ. ಆದರೆ, ಕೆಲಸ ನೋಡಿ
ಖುಷಿಯಾಯಿತಂತೆ. “ಈ ಚಿತ್ರ ಆ ಜಾನರ್ಗೆ ಸೇರುತ್ತದೆ, ಈ ಶ್ರೇಯಸ್ ಜಾನರ್ಗೆ ಸೇರುತ್ತದೆ ಎನ್ನುವುದಕ್ಕಿಂತ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದನ್ನು ಹೇಳಬಹುದು. ನಿರ್ದೇಶಕರಿಗೆ ಏನು ಬೇಕು ಎಂಬುದು ಪಕ್ಕಾ ಗೊತ್ತಿತ್ತು. ಹಾಗಾಗಿ ಬಹಳ ಸುಲಭವಾಯ್ತು. ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಎಲ್ಲಾ ಅಂಶಗಳೂ ಇರುವ ಚಿತ್ರ ಇದು. ಇದಕ್ಕೂ ಮುನ್ನ ಹಲವು ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಒಂದೊಳ್ಳೆಯ ಫ್ಯಾಮಿಲಿ ಚಿತ್ರದಲ್ಲಿ ನಟಿಸಿದ ಖುಷಿ ಇದೆ’ ಎಂದು ಹೇಳಿದರು.
ತಿಲಕ್ ಜೊತೆಗೆ ರನೂಷಾ ಕಾಶ್ವಿ, ಮೇಘನಾ ಅಪ್ಪಯ್ಯ, ಚೇತನ್ ಮುಂತಾದವರು ನಟಿಸಿದ್ದಾರೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ ಮತ್ತು ಭುಪಿಂದರ್ ಸಿಂಗ್ ರಾಣಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.