ಸೌಂಡ್ ಲ್ಲೇ ಬೆಚ್ಚಿ ಬೀಳಿಸೋ ಸಿನ್ಮಾ
ಎಸ್ಟೇಟ್ ಸುತ್ತ ಭಯದ ಹುತ್ತ
Team Udayavani, Oct 25, 2019, 5:12 AM IST
“ಸೆನ್ಸಾರ್ ಮಂಡಳಿಯವರನ್ನ ಬೆಚ್ಚಿ ಬೀಳಿಸಿರುವ ಚಿತ್ರ…’
-ಇದು “ಮೂರ್ಕಲ್ ಎಸ್ಟೇಟ್’ ಚಿತ್ರ ಸ್ಟಾಂಡಿಯಲ್ಲಿ ಕಂಡು ಬಂದ ಬರಹ. ಹಾಗಾದರೆ, ನೋಡುಗರನ್ನು ಈ ಚಿತ್ರ ಇನ್ನೆಷ್ಟು ಬೆಚ್ಚಿಬೀಳಿಸಹುದು? ಇಂಥದ್ದೊಂದು ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಅಷ್ಟಕ್ಕೂ ಸೆನ್ಸಾರ್ ಮಂಡಳಿ ಬೆಚ್ಚಿದ್ದು ಯಾಕೆ? ಇದಕ್ಕೆ ನಿರ್ದೇಶಕ ಪ್ರಮೋದ್ ಕುಮಾರ್ ಉತ್ತರಿಸಿದ್ದು ಹೀಗೆ. “ಇದು ಹಾರರ್ ಸಿನಿಮಾ. ಹಾಗಂತ, ಇಲ್ಲಿ ದೆವ್ವ, ಪಿಶಾಚಿ ಯಾವುದೂ ಇಲ್ಲ. ಹೆಣ್ಣು, ದೆವ್ವ, ಗಂಡು ದೆವ್ವದ ಕಾಟವೂ ಇಲ್ಲ. ಬ್ಲಿಡ್ ಆಗಲಿ, ಕೊಲೆಯಾಗಲಿ ಯಾವುದೂ ಇಲ್ಲಿಲ್ಲ. ಆದರೂ ಸೆನ್ಸಾರ್ ಮಂಡಳಿ ಬೆಚ್ಚಿದ್ದು ಯಾಕೆಂದರೆ, ಅದು ಚಿತ್ರದ ಸೌಂಡ್ ಮತ್ತು ಎಫೆಕ್ಟ್ಸ್ ಗೆ. ಇಲ್ಲಿ ಎನರ್ಜಿ ಬೇಸ್ ಇಟ್ಟುಕೊಂಡು ಪಾಸಿಟಿವ್, ನೆಗೆಟಿವ್ ಅಂಶಗಳನ್ನು ಹೇಳಹೊರಟಿದ್ದೇನೆ, ಸ್ಮೋಕ್‌ನಲ್ಲಿ, ವಾಟರ್‌ನಲ್ಲಿ ಇತರೆ ಅಂಶಗಳಲ್ಲೇ ನಾನು ಹೆದರಿಸುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಡಲು ಮುಂದಾಗಿತ್ತು. ಕೊನೆಗೆ ರಿವೈಸಿಂಗ್ ಕಮಿಟಿಗೂ ಹೋದ್ವಿ. ಅಲ್ಲೂ ಅದನ್ನೇ ಕೊಡುವುದಾಗಿ ಹೇಳಿದರು. ಅದಕ್ಕಾಗಿ 8 ತಿಂಗಳು ಕಾಯಬೇಕಾಯ್ತು’ ಎಂದು ವಿವರ ಕೊಟ್ಟ ನಿರ್ದೇಶಕರು, ನಾಗರಹೊಳೆ ಸಮೀಪ ಇರುವ ಮೂರ್ಕಲ್ ಹೆಸರನ್ನು ಚಿತ್ರದ ಶೀರ್ಷಿಕೆಯನ್ನಾಗಿಸಿದ್ದೇನೆ. ಒಂದು ಮನೆಯಲ್ಲಿ ನಡೆಯೋ ಕಥೆ ಇಲ್ಲಿದೆ. ಹಾಗಂತ, ಇಲ್ಲಿ ದ್ವೇಷ, ಅಸೂಯೆ ಯಾವುದೂ ಇಲ್ಲದ ಕಥೆ. ಮೈಸೂರಲ್ಲಿ ನಡೆದ ಒಂದು ಘಟನೆ ಇಟ್ಟುಕೊಂಡು, ಚಿತ್ರ ಮಾಡಿದ್ದಾಗಿ ಹೇಳಿದರು ಪ್ರಮೋದ್ ಕುಮಾರ್. ಪ್ರವೀಣ್ ಈ ಚಿತ್ರದ ನಾಯಕರು. ಅವರಿಗೆ ಇದು ಮೊದಲ ಚಿತ್ರ. “ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಇಲ್ಲಿ ಗ್ರಾಫಿಕ್ಸ್ ಹಾಗು ಎಫೆಕ್ಸ್ಟ್ ಚಿತ್ರದ ಹೈಲೈಟ್. ನೋಡುಗರಿಗೆ ಭಯಪಡಿಸು ಅಂಶಗಳು ಜಾಸ್ತಿ ಇವೆ. ಆದರೆ, ನೋಟಕ್ಕಿಂತ ಸೌಂಡೇ ಹೆಚ್ಚು ಬೆಚ್ಚಿಬೀಳಿಸುತ್ತೆ. ಹಾರರ್ ಇಷ್ಟಪಡುವ ಜನರಿಗೆ “ಮೂರ್ಕಲ್ ಎಸ್ಟೇಟ್’ ಇಷ್ಟವಾಗುತ್ತೆ’ ಎಂಬುದು ಪ್ರವೀಣ್ ಮಾತು.
ನಿರ್ಮಾಪಕ ಕುಮಾರ್ ಅವರಿಗೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ಕೊಟ್ಟಿದ್ದನ್ನು ಕಂಡು ಬೇಸರವಾಯ್ತಂತೆ. ಆದರೂ, ತಮ್ಮ ಚಿತ್ರದಲ್ಲಿ ರಕ್ತಪಾತವಿಲ್ಲ ಎಂದು ಪ್ರತಿಭಟನೆಗೂ ಮುಂದಾದರಂತೆ. ಕೊನೆಗೂ ಅವರಿಗೆ “ಎ’ ಪ್ರಮಾಣ ಪತ್ರವೇ ಸಿಕ್ಕಿದೆ. ಇನ್ನು, ಹಾರರ್ ಇಷ್ಟಪಡುವ ವರ್ಗ ನಮ್ಮನ್ನು ಕೈ ಬಿಡುವುದಿಲ್ಲ ಎಂದು ಈ ವಾರ ರಿಲೀಸ್ ಮಾಡಲು ಮುಂದಾಗಿದ್ದಾಗಿ ಹೇಳಿಕೊಂಡರು ಕುಮಾರ್.
ವಿತರಕ ವಿಜಯ್ ಅವರು ವಿತರಣೆ ಮಾಡುತ್ತಿದ್ದು, ಸುಮಾರು 70 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರಂತೆ. ಚಿತ್ರಕ್ಕೆ ಕೃಷ್ಣ ಹಾಗೂ ಮುನಿಸ್ವಾಮಿ ಅವರು ಸಹನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಲಕ್ಷ್ಮೀನಾರಾಯಣ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಂಕರ್ ಎಫೆಕ್ಟ್ಸ್ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.