ಭಯ ಮುಂದುವರೆದಿದೆ!
Team Udayavani, Oct 27, 2017, 12:45 PM IST
ಸಂಯುಕ್ತ -2′ ಎಂಬ ಚಿತ್ರವೊಂದು ಸೆಟ್ಟೇರಿದ್ದು ನಿಮಗೆ ನೆನಪಿರಬಹುದು. ಸೆಟ್ಟೇರಿದ್ದು ಬಿಟ್ಟರೆ ಮಿಕ್ಕಂತೆ ಆ ಸಿನಿಮಾ ಏನಾಯಿತೆಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಲಾಂಚ್ ಆಗಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ರಾಮಸ್ವಾಮಿ ಎನ್ನುವವರು ಆರಂಭಿಸಿದ್ದರು. ರಾಮಸ್ವಾಮಿ
ವಿಧಿವಶರಾದ ನಂತರ ನಿಂತು ಹೋಗುವ ಸ್ಥಿತಿಯಲ್ಲಿದ್ದ ಸಿನಿಮಾವನ್ನು ಡಾ.ಮಂಜುನಾಥ್ ಎನ್ನುವವರು ಟೇಕಾಫ್ ಮಾಡಿದ್ದಾರೆ. ಈಗ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಡಾ.ಮಂಜುನಾಥ್, “ಕಥೆ ತುಂಬಾ ಇಷ್ಟವಾಯಿತು. ಜೊತೆಗೆ ಒಳ್ಳೆಯ ತಂಡ ಕೂಡಾ ಇತ್ತು. ಹೀಗಿರುವಾಗ ಸಿನಿಮಾ ಮಾಡದಿರಲು ನನ್ನಿಂದ ಆಗಲಿಲ್ಲ. ಈಗ ಒಳ್ಳೆಯ ಸಿನಿಮಾ ಬಂದಿದೆ. ಎಷ್ಟು ಸಾಧ್ಯವೋ ಅಷ್ಟು ನಿರ್ದೇಶಕರ ತಾಳ್ಮೆ ಪರೀಕ್ಷೆ ಮಾಡಿದ್ದೇನೆ. ತುಂಬಾ ಟ್ಯಾಲೆಂಟ್ ಇರುವ ವ್ಯಕ್ತಿ ಅವರು. ಸಂಗೀತ ನಿರ್ದೇಶಕ ರವಿಚಂದ್ರ ಅವರು ಪ್ರತಿ ಹಂತದಲ್ಲೂ ಬೆಂಬಲ ನೀಡಿದ್ದಾರೆ. ಬೇರೆ ಭಾಷೆಯ ಸಿನಿಮಾ ನೋಡಿದಾಗ ನಮ್ಮಲ್ಲೂ ಈ ತರಹ ಮಾಡಬೇಕೆಂಬ ಆಸೆ ಇತ್ತು.
ಅದನ್ನು ಈ ಸಿನಿಮಾ ಮೂಲಕ ಮಾಡಿದ್ದೇನೆ. ಮುಖ್ಯವಾಗಿ ಚಿತ್ರದಲ್ಲಿ ಗ್ರಾμಕ್ ತುಂಬಾ ಹೈಲೈಟ್. ಅಷ್ಟೊಂದು ನೈಜವಾಗಿ ಬಂದಿದೆ.
ವಿಎಫ್ಎಕ್ ನ ಮಹೇಶ್ ಅವರು ಅಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ’ ಎನ್ನುತ್ತಾ ಇಡೀ ತಂಡವನ್ನು ನೆನಪಿಸಿಕೊಂಡರು ಡಾ.ಮಂಜುನಾಥ್. ಚಿತ್ರವನ್ನು ಅಭಿರಾಮ್ ನಿರ್ದೇಶನ ಮಾಡಿದ್ದಾರೆ. ತುಂಬಾ ಕನಸು ಕಟ್ಟಿಕೊಂಡಿದ್ದ ಸಿನಿಮಾ ನಿಂತು ಹೋಗುತ್ತದೆಂಬ ಭಯದಲ್ಲಿದ್ದಾಗ ಕೈ ಹಿಡಿದ ಮಂಜುನಾಥ್ ಅವರನ್ನು ನೆನಪಿಸಿಕೊಂಡರು ಅಭಿರಾಮ್. ಜೊತೆಗೆ ಚಿತ್ರಕ್ಕೆ ಸಹಕಾರ ನೀಡಿದ ಇಡೀ ತಂಡವನ್ನು ನೆನಪಿಸಿಕೊಂಡರು ಅಭಿರಾಮ್.
ಚಿತ್ರದಲ್ಲಿ ಚೇತನ್ ಚಂದ್ರ ನಾಯಕರಾಗಿ ನಟಿಸಿದ್ದಾರೆ. ಚೇತನ್ ಚಂದ್ರ ಕೂಡಾ ಸಿನಿಮಾವನ್ನು ಟೇಕಾಫ್ ಮಾಡಿದ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ. ಇನ್ನು, ಚಿತ್ರವನ್ನು ಸಾಕಷ್ಟು ಬಾರೀ ರೀಶೂಟ್ ಮಾಡಲಾಗಿದೆಯಂತೆ. ಏನಾದರೂ ಸೇರಿಸಬೇಕು ಅಥವಾ ಮತ್ತಷ್ಟು ಚೆನ್ನಾಗಿ ಮಾಡಬೇಕೆಂದಾಗ ರೀಶೂಟ್ ಮಾಡಿದ್ದಾಗಿ ಹೇಳಿಕೊಂಡರು ಚೇತನ್ ಚಂದ್ರ. ಈ ಚಿತ್ರವನ್ನು ಚೇತನ್ ಸುಮಾರು 30 ಕೆಜಿ ತೂಕ ಹೆಚ್ಚಿಸಿ ಮತ್ತೆ ಇಳಿಸಿದ್ದಾರಂತೆ.
ಚಿತ್ರದಲ್ಲಿ ನೇಹಾ ಪಾಟೀಲ್ ಹಾಗೂ ಐಶ್ವರ್ಯಾ ಸಿಂಧೋಗಿ ನಾಯಕಿಯರು. ನೇಹಾ ಇಲ್ಲಿ ಮೆಡಿಕಲ್ ಸ್ಟೂಡೆಂಟ್ ಆಗಿ
ನಟಿಸಿದ್ದಾರಂತೆ. ಚಿತ್ರದಲ್ಲಿ ನಟಿಸಿದ ಸಂಜಯ್ ಹಾಗೂ ಪ್ರಭು ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.