ನಮ್ಮೂರೇ ನಮಗೆ ಮೇಲು…


Team Udayavani, Mar 27, 2020, 7:04 PM IST

ನಮ್ಮೂರೇ ನಮಗೆ ಮೇಲು…

ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್‌ ಮಾಡಿದ್ದೇವೆ… | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ ಚಿತ್ರೀಕರಿಸಲು ನಮಗೆ ಅವಕಾಶ ಸಿಕ್ಕಿದೆ….

-ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಈ ತರಹದ ಮಾತುಗಳು ತುಂಬಾನೇ ಕೇಳಿಬರುತ್ತಿದ್ದವು.ಈ ತರಹ ಹೇಳಿಬಿಟ್ಟರೆ ತಮ್ಮ ಸಿನಿಮಾದ ಮೈಲೇಜ್‌ ಹೆಚ್ಚುತ್ತದೆ ಎಂದು ನಂಬಿದವರ ಸಂಖ್ಯೆ ಜಾಸ್ತಿ ಇದೆ. ನಿರ್ಮಾಪಕರಿಗೆ ಇಷ್ಟವಿದೆಯೋ ಇಲ್ಲವೋ, ಎರಡು ಹಾಡುಗಳಿಗೆ ಫಾರಿನ್‌ ಫ್ಲೈಟ್‌ ಹತ್ತುವ ನಿರ್ದೇಶಕರು, ನಟರು ಕೂಡಾ ಹೆಚ್ಚೇ ಇದ್ದಾರೆ. ಆದರೆ ಕೋವಿಡ್ 19 ಎಂಬ ಮಹಾಮಾರಿ ಸಿನಿಮಾ ಮಂದಿಯನ್ನು ವಿದೇಶದತ್ತ ತಲೆ ಹಾಕಿಯೂ ಮಲಗದಂತೆ ಮಾಡಿದೆ. ವಿದೇಶಿ ಲೊಕೇಶನ್‌ಗಳ ಸಹವಾಸವೂ ಸಾಕು, ರೋಗವೂ ಸಾಕು ಎಂಬಂತಾಗಿದೆ.

ಹಾಗಾಗಿ ಕೋವಿಡ್ 19 ಸಂಪೂರ್ಣ ನಾಶ ಆಗುವವರೆಗೆ ಸಿನಿಮಾ ಮಂದಿ ಕೂಡಾ ವಿದೇಶಿ ಕನಸು ಕಾಣುವಂತಿಲ್ಲ. ಅಷ್ಟಕ್ಕೂ ಒಂದು ಸಿನಿಮಾಕ್ಕೆ ವಿದೇಶಿ ಲೊಕೇಶನ್‌ ಆಗತ್ಯವಿದೆಯೇ ಎಂದರೆ, ಖಂಡಿತಾ ಇಲ್ಲ. ಅದು ಆಯಾ ತಂಡದಸಾಮರ್ಥ್ಯಕ್ಕೆ ಬಿಟ್ಟಿದ್ದು. ಸಿನಿಮಾ ಕೇಳ್ಳೋದು ಒಳ್ಳೆಯ ಕಥೆ ಹಾಗೂ ಆಚ್ಚುಕಟ್ಟಾದ ನಿರೂಪಣೆಯನ್ನಷ್ಟೇ. ಇವೆರಡು ಚೆನ್ನಾಗಿದ್ದರೆ ಇಡೀ ಸಿನಿಮಾವನ್ನು ಒಂದೇ ಲೊಕೇಶನ್‌ನಲ್ಲಿ ಕಟ್ಟಿಕೊಟ್ಟರೂ ಜನ ನೋಡುತ್ತಾರೆ. ಅದೇ ನಿಮ್ಮ ಸಿನಿಮಾದ ಕಥೆಯಲ್ಲಿ ತಾಕತ್ತಿಲ್ಲದೇ ಇದ್ದರೆ ನೀವದನ್ನು ಎಷ್ಟೇ ಶ್ರೀಮಂತಗೊಳಿಸಿದರೂ ಅದರಿಂದ ಪ್ರಯೋಜನವಿಲ್ಲ. ಅದು ಈಗಾಗಲೇ ಸಾಬೀತಾಗಿದೆ ಕೂಡಾ. ಇದು ಗೊತ್ತಿದ್ದರೂ ಸಿನಿಮಾ ಮಂದಿಗೆ ಫಾರಿನ್‌ ಕ್ರೇಜ್‌ ಜಾಸ್ತಿ ಇದೆ.

ಹಾಗಾದರೆ ನಮ್ಮಲ್ಲಿಸುಂದರ ಲೊಕೇಶನ್‌ಗಳು ಇಲ್ಲವೇ ಎಂದರೆ, ಖಂಡಿತಾ ಇದೆ. ಆದರೆ ಅದನ್ನು ಬಳಸಿಕೊಳ್ಳುವ ಮನಸ್ಸು ಮತ್ತು ಸಾಮರ್ಥ್ಯ ಚಿತ್ರತಂಡಕ್ಕೆ ಇರಬೇಕು. ಭಾರತದಲ್ಲಿ ಅದ್ಭುತವಾದ ತಾಣಗಳಿವೆ. ಹುಡುಕುತ್ತಾ ಹೋದರೆ ಬೇರೆ ಯಾವ ಸಿನಿಮಾಗಳಲ್ಲೂ ಕಂಡಿರದಂತಹ ಲೊಕೇಶನ್‌ಗಳು ಸಿಗುತ್ತವೆ. ಆದರೆ ಆದನ್ನು ಹುಡುಕುವ ಮನಸ್ಸು ಹಾಗೂ ತಾಳ್ಮೆ ಬೇಕು. ಡಾ. ರಾಜ್‌ಕುಮಾರ್‌ ಅವರ ಚಿತ್ರಗಳಲ್ಲಿ ಚಿಕ್ಕಮಗಳೂರು, ಕುದುರೆಮುಖ … ಇಲ್ಲಿನ ಪ್ರಕೃತಿಯ ಸೊಬಗು ಬಳಕೆಯಾಗುತ್ತಿದ್ದವು.

ಆ ಸಿನಿಮಾಗಳೆಲ್ಲವೂ ಸೂಪರ್‌ ಹಿಟ್‌. ಆಲ್ಲಿಗೆ ಒಂದು ಸ್ಪಷ್ಟ, ಜನ ಲೊಕೇಶನ್‌ ನೋಡಿಕೊಂಡು ಸಿನಿಮಾಕ್ಕೆ ಬರೋದಿಲ್ಲ. ಹೀಗಿದ್ದೂ ನಮ್ಮಲ್ಲಿ ಫಾರಿನ್‌ ಲೊಕೇಶನ್‌ ಕ್ರೇಜ್‌ ಜೋರಿದೆ. ಅದರಲ್ಲೂ ಸ್ಟಾರ್‌ ಸಿನಿಮಾ ಮಾಡುವವರು ಕಥೆ ಬರೆಯುವ ಮೊದಲೇ ಹಾಡಿಗೆ ಫಾರಿನ್‌ ಟ್ರಿಪ್‌ ಎಂದು ಫಿಕ್ಸ್‌ ಆಗಿರುತ್ತಾರೆ. ಫಾರಿನ್‌ ಶೂಟಿಂಗ್‌ ಸುಲಭವಲ್ಲ. ಅಲ್ಲಿನ ಆನುಮತಿ, ಕೋ-ಅರ್ಡಿನೇಟರ್‌ ಸಮಸ್ಯೆ, ಇಂತಿಷ್ಟೇ ಜನ ಹೋಗಬೇಕು, ಅಲ್ಲಿನ ಮತ್ತೆ ಇನ್ನೇನೋ ಕಿರಿಕ್‌, ಸ್ವಲ್ಪ ಯಾಮಾರಿದರೂ ಲಾಕ್‌… ಹೀಗೆ ಸಾಕಷ್ಟು ಸಮಸ್ಯೆಗಳಿರುತ್ತವೆ. ಇವೆಲ್ಲವನ್ನು ದಾಟಿಕೊಂಡು ಸಪ್ತ ಸಾಗರ ದಾಟುವ ಪ್ರಯತ್ನ ಮಾಡುತ್ತಲೇ ಇದ್ದರು ಸಿನಿಮಾ ಮಂದಿ.

ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಕೋವಿಡ್ ದಿಂದಾಗಿ ಫಾರಿನ್‌ ಟ್ರಿಪ್‌ನ ಲೆಕ್ಕಾಚಾರ ದಲ್ಲಿ ಇದ್ದವರೆಲ್ಲ ಈಗ ಕರ್ನಾಟಕ ದಲ್ಲೇ ಹಾಡುಗಳ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಸೆಟ್‌ ಮೊರೆ ಹೋಗಿದ್ದಾರೆ – ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲೂ.. ಮುಂದಿನ ದಿನಗಳಲ್ಲಿ ನಮ್ಮ ದೇಶದ ಅದರಲ್ಲೂ ನಮ್ಮ ರಾಜ್ಯದ ಲೊಕೇಶನ್‌ ಗಳಿಗೆ ಬೇಡಿಕೆ ಬರುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಒಂದಷ್ಟು ಸಿನಿಮಾಗಳು ತಮ್ಮ ಸಿನಿಮಾ ಫಾರಿನ್‌ ಟ್ರಿಪ್‌ ಕೈ ಬಿಟ್ಟು ಇಲ್ಲೇ ಚಿತ್ರೀಕರಿಸಲು ಮುಂದಾಗಿವೆ. ಕೊರೊನಾ ಬಿಗಿಹಿಡಿತ ಸಡಿಲವಾಗುತ್ತಿದ್ದಂತೆ ಮತ್ತೆ ಸಿನಿಮಾ ಕೆಲಸಗಳು ಆರಂಭವಾಗಲಿವೆ. ಮುಂದಿನ ದಿನಗಳಲ್ಲಿ ಸಿನಿಮಾ ಮಂದಿ ಕೂಡಾ ನಮ್ಮ ಸುತ್ತಮುತ್ತಲಿನ ಲೊಕೇಶನ್‌ ಗಳನ್ನು ಹೆಚ್ಚು ಬಳಸುವತ್ತ ಮನಸ್ಸು ಮಾಡಬೇಕು ಒಂದಂತೂ ಸ್ಪಷ್ಟ, ಮುಂದಿನ ದಿನಗಳಲ್ಲಿ ನಮ್ಮದೇಶದ, ರಾಜ್ಯದ ಲೊಕೇಶನ್‌ಗಳಿಗೆ, ಸ್ಟುಡಿಯೋಗಳಿಗೆ ಬೇಡಿಕೆ ಬರಲಿದೆ.

 

-ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudla namdu Ooru movie

Sandalwood: ಕುಡ್ಲ ನಮ್ದು ಊರು!: ಇದು ಕರಾವಳಿ ತಂಡದ ಹೊಸ ಕನಸು

3

Badagannur: ಆರೋಗ್ಯ ಕೇಂದ್ರ, ಆ್ಯಂಬುಲೆನ್ಸ್‌ಗೆ ಗ್ರಾಮಸ್ಥರ ಬೇಡಿಕೆ

Bidar; ಗುತ್ತಿಗೆದಾರ ಸಚಿನ್‌ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ

Bidar; ಗುತ್ತಿಗೆದಾರ ಸಚಿನ್‌ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

2

Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.