ಐಫೋನ್‌ನಲ್ಲಿ ಸಹಿಷ್ಣು
Team Udayavani, Dec 8, 2017, 7:30 AM IST
ತಂತ್ರಜ್ಞಾನ ಮುಂದುವರೆದಂತೆ ಸಿನಿಮಾ ಮಾಡೋದು ಕೂಡಾ ಸುಲಭವಾಗುತ್ತಿದೆ. ಹಾಗಾಗಿಯೇ ಸಾಕಷ್ಟು ಪ್ರಯೋಗಗಳು ಕೂಡಾ ನಡೆಯುತ್ತಿರುತ್ತದೆ. ಈಗಾಗಲೇ ಅನೇಕರು ಐಫೋನ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಸಹಿಷ್ಣು’. ಹೌದು, “ಸಹಿಷ್ಣು’ ಎಂಬ ಸಿನಿಮಾವೊಂದು ಸಂಪೂರ್ಣವಾಗಿ ಐಫೋನ್‌ನಲ್ಲಿ ಚಿತ್ರೀಕರಣವಾಗಿದೆ. ವಿಶೇಷವೆಂದರೆ ಸಿಂಗಲ್ ಶಾಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎರಡು ಗಂಟೆ 1 ನಿಮಿಷ 18 ಸೆಕೆಂಡಿನ ಈ ಸಿನಿಮಾವನ್ನು ಸಿಂಗಲ್ ಶಾಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರವನ್ನು ಸಂಪತ್ ಎನ್ನುವವರು ನಿರ್ಮಿಸಿ, ನಿರ್ದೇಶಿಸಿದ್ದಾರೆ.
ಈಗಾಗಲೇ ಕೆಲವು ಸಿನಿಮಾಗಳಿಗೆ ಸಹಾಯಕರಾಗಿ ದುಡಿದ ಅನುಭವವಿರುವ ಸಂಪತ್ ಅವರಿಗೆ ಏನಾದರೊಂದು ಹೊಸ ಪ್ರಯೋಗ ಮಾಡಬೇಕೆಂದೆನಿಸಿದಾಗ ಈ ಆಲೋಚನೆ ಬಂತಂತೆ. ಅದಕ್ಕಾಗಿ ಐಫೋನ್ ಹಾಗೂ ಅದಕ್ಕೆ ತಾಂತ್ರಿಕವಾಗಿ ಬೇಕಾದ ವಸ್ತುಗಳನ್ನು ಖರೀದಿಸಿ, ಮೊದಲು ಇಡೀ ಬೆಂಗಳೂರು ಸುತ್ತಾಡಿ ಟೆಸ್ಟ್ ಶೂಟ್ ಮಾಡಿದರಂತೆ. ಎಲ್ಲವೂ ಪಕ್ಕಾ ಆದ ಮೇಲೆ ಮಡಿಕೇರಿಯ ಸುತ್ತಮುತ್ತ ಸಿಂಗಲ್ ಟೇಕ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇದೊಂದು ದಾಖಲೆಯಾಗಿದ್ದು, ಅಗತ್ಯ ಪತ್ರಗಳೊಂದಿಗೆ ಗಿನ್ನೆಸ್‌ಗೆ ಕಳುಸಿದ್ದಾರಂತೆ.
ಈಗಾಗಲೇ ಅನೇಕ ಸಿನಿಮಾಗಳು ಸಿಂಗಲ್ ಟೇಕ್‌ನಲ್ಲಿ ಶೂಟ್ ಆದರೂ ಆ ನಂತರ ಅವುಗಳನ್ನು ಎಡಿಟ್ ಮಾಡಲಾಗಿದೆ. ಆದರೆ, “ಸಹಿಷ್ಣು’ ಮಾತ್ರ ಎಡಿಟ್ ಮಾಡದ ಸಿಂಗಲ್ ಟೇಕ್ ಸಿನಿಮಾವಾದ್ದರಿಂದ ವಿಶ್ವದಲ್ಲೇ ಇಂತಹ ಪ್ರಯತ್ನ ಮೊದಲು ಎನ್ನುವುದು ಸಂಪತ್ ಅವರು ಮಾತು. ವಿಚಾರವಾದಿಯೊಬ್ಬನ ಹತ್ಯೆಗೆ ಸುಪಾರಿ ನೀಡುವ ಕಾಣದ ವ್ಯಕ್ತಿಗಳು ಒಂದು ಕಡೆಯಾದರೆ, ವಿಚಾರವಾದಿಯನ್ನು ಕಿಡ್ನಾಪ್ ಮಾಡುವ ಮಂದಿ, ಆ ವಿಚಾರವಾದಿಯ ನಿರ್ಲಿಪ್ತತೆ ಹಾಗೂ ನಡವಳಿಕೆಯಿಂದ ಬದಲಾಗುತ್ತಾರಾ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ವಿಚಾರಧಾರೆ ಏನೇ ಇರಬಹುದು. ಆದರೆ, ಮನುಷ್ಯನನ್ನು ಮನುಷ್ಯ ಸಾಯಿಸೋದು ತಪ್ಪು ಎಂಬ ಸಂದೇಶವನ್ನು ಕೂಡಾ ಇಲ್ಲಿ ನೀಡಲಾಗಿದೆಯಂತೆ.
“ಮುಂದೆ ವಿಭಿನ್ನವಾದ ಸಿನಿಮಾಗಳನ್ನು ಮಾಡಬೇಕೆಂದಿದ್ದೇನೆ. ಅದಕ್ಕಿಂತ ಮೊದಲು ನನಗೊಂದು ಪ್ರೊಫೈಲ್ ಬೇಕು. ಆ ಉದ್ದೇಶದ ಜೊತೆಗೆ ಪ್ರಯೋಗಾತ್ಮಕ ಸಿನಿಮಾ ಮಾಡಬೇಕೆಂಬ ಕಾರಣದಿಂದ ಈ ಸಿನಿಮಾ ಮಾಡಿದ್ದೇನೆ’ ಎನ್ನುವುದು ಸಂಪತ್ ಮಾತು. ಚಿತ್ರದಲ್ಲಿ ಹಿರಿಯ ನಟ ವಿಶ್ವನಾಥ್ ಹಾಗೂ ಅಶೋಕ್ ಎನ್ನುವವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.