ಈ ವಾರ ತೆರೆಗೆ ನಾಲ್ಕು ಚಿತ್ರಗಳು
Team Udayavani, May 3, 2019, 6:30 AM IST
ಈ ವಾರ ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಗೋಲ್ದನ್ ಸ್ಟಾರ್ ಗಣೇಶ್, ಜಾಕಿ ಭಾವನ, ಹೇಮಂತ್, ಸಮೀಕ್ಷಾ ಮುಂತಾದವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ “99′ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಇಂದು ಕೆ.ಆರ್.ಮುರಳಿ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ “ಗರ’ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ರೆಹಮಾನ್ ಹಾಸನ್, ಆವಂತಿಕಾ, ಆರ್ಯನ್, ನೇಹಾ ಪಾಟೀಲ್, ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್ ರಾಯ್, ತಬಲ ನಾಣಿ, ರೋಹಿತ್, ಸುನೇತ್ರ ಪಂಡಿತ್, ಸುಚಿತ್ರಾ, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ್, ಗುರುರಾಜ್ ಕಲಾಲ್‌ಬಂಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಶೇಷ ಜೋಡಿಯಾಗಿ ಖ್ಯಾತ ನಟರಾದ ಜಾನಿ ಲೀವರ್ ಹಾಗೂ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಹೆಚ್.ಸಿ.ವೇಣು ಛಾಯಾಗ್ರಹಣ, ಉಮಾ ಶಂಕರ್ ಬಾಬು ಸಂಕಲನ ಕಾರ್ಯವಿದೆ. ದಿನೇಶ್ ಕಲಾ ನಿರ್ದೇಶನ, ರವರ್ಮ ಸಾಹಸ ನಿರ್ದೇಶನ ಹಾಗೂ ಬಾಲಿವುಡ್ ಖ್ಯಾತಿಯ ಸರೋಜ್ ಖಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇದರೊಂದಿಗೆ ಎಸ್. ಮೋಹನ್ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ “ಲೋಫರ್’ ಮತ್ತು ಸಂತೋಷ್ ಕುಮಾರ್ ಬೆಟಗೇರಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆ ನಿರ್ದೇಶನ ಮಾಡಿರುವ “ಒಂಭತ್ತನೇ ಅದ್ಭುತ’ ಚಿತ್ರಗಳು ಕೂಡ ತೆರೆ ಕಾಣುತ್ತಿವೆ. ಕಳೆದ ಒಂದು ತಿಂಗಳಿನಿಂದ ಚುನಾವಣೆ, ವಿದ್ಯಾರ್ಥಿಗಳ ಪರೀಕ್ಷೆ ಹೀಗೆ ಕೆಲ ಕಾರಣಗಳಿಂದ ತಮ್ಮ ಬಿಡುಗಡೆಯನ್ನು ಮುಂದೂಡುತ್ತ ಬಂದಿರುವ ಅನೇಕ ಚಿತ್ರಗಳು ಈ ವಾರ ಬಳಿಕ ಒಂದೊಂದಾಗಿ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.