ಹಾಫ್ ಸೆಂಚುರಿ; ಚಂದನವನದಲ್ಲಿ ನಾಲ್ಕು ತಿಂಗಳು ಭರ್ಜರಿ ಫಸಲು
Team Udayavani, Apr 22, 2022, 1:22 PM IST
ನಾಲ್ಕು ತಿಂಗಳು 50 ಪ್ಲಸ್ ಸಿನಿಮಾ.. – ಈ ಸಂಖ್ಯೆ ಕನ್ನಡ ಚಿತ್ರರಂಗಕ್ಕೆ ಭರವಸೆಯ ಸಂಕೇತದಂತೆ ಕಂಡರೆ ಅದರಲ್ಲಿ ತಪ್ಪಿಲ್ಲ. ಅದಕ್ಕೆ ಕಾರಣ ಈ ಹಿಂದಿನ ಎರಡು ವರ್ಷಗಳಲ್ಲಿ ಅನುಭವಿಸಿದ ಕಷ್ಟ-ನಷ್ಟ. 2022ರಲ್ಲಿ ಯಾವ ತೊಂದರೆಯೂ ಬಾರದಿರಲಿ ಎನ್ನುತ್ತಲೇ ಕನ್ನಡ ಚಿತ್ರರಂಗ ಚೇತರಿಕೆಯತ್ತ ಮುಖ ಮಾಡಿದೆ.
ಹೌದು, 2022ರಲ್ಲಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಈ ನಾಲ್ಕು ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಸಿಗುವುದು 50. ಈ ವಾರ (ಏ.22) ಬಿಡುಗಡೆಯಾಗುತ್ತಿರುವ ಒಂದು ಸಿನಿಮಾ ಹಾಗೂ ಮುಂದಿನ ವಾರ (ಏ.29) ಬಿಡುಗಡೆಯಾಗುತ್ತಿರುವ ಸಿನಿಮಾಗಳನ್ನು ಸೇರಿಸಿದರೆ ಸಂಖ್ಯೆ 50 ದಾಟುತ್ತದೆ.
ಕೋವಿಡ್‌ನಿಂದಾಗಿ ಕಳೆದೆರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಂಡಿತ್ತು. ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಜಾಗದಲ್ಲಿ 2020-21ರಲ್ಲಿ 80-90 ಸಿನಿಮಾಗಳಷ್ಟೇ ಬಿಡುಗಡೆಯಾಗಿದ್ದವು. ಆದರೆ, ಈ ವರ್ಷ ಮತ್ತೆ ಸಿನಿಮಾ ಬಿಡುಗಡೆಯ ಸಂಖ್ಯೆಯಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಮೂಲಕ 2022ರಲ್ಲಿ ಕನ್ನಡ ಚಿತ್ರರಂಗ ಕಲರ್‌ಫುಲ್ ಆಗಿಯೇ ಸಾಗುವ ನಿರೀಕ್ಷೆ ಇದೆ. ನಾಲ್ಕು ತಿಂಗಳಲ್ಲೇ 50 ಸಿನಿಮಾಗಳು ಬಿಡುಗಡೆಯಾಗಿವೆ.
ಇದನ್ನೂ ಓದಿ:ಕೆಜಿಎಫ್ 2 ಅಬ್ಬರದ ನಡುವೆ ಥಿಯೇಟರ್ ನಲ್ಲಿ ‘ಗಂಡುಲಿ’ ಘರ್ಜನೆ
ವರ್ಷ ಪೂರ್ಣಗೊಳ್ಳಲು ಇನ್ನೂ ಎಂಟು ತಿಂಗಳಿದೆ. ತಿಂಗಳಿಗೆ ಕನಿಷ್ಠ 15 ಸಿನಿಮಾವೆಂದುಕೊಂಡರೂ ಮುಂದಿನ 8 ತಿಂಗಳಲ್ಲಿ 120 ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲಿಗೆ ಈ ವರ್ಷ 170ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗಂತ ತಿಂಗಳಲ್ಲಿ ಹದಿನೈದು ಸಿನಿಮಾ ಗಳಷ್ಟೇ ಬಿಡುಗಡೆಯಾಗುತ್ತವೆ ಎನ್ನುವಂತಿಲ್ಲ. ಏಕೆಂದರೆ, ಫೆಬ್ರವರಿ ತಿಂಗಳಲ್ಲೇ 21 ಸಿನಿಮಾಗಳು ಬಿಡುಗಡೆಯಾಗಿವೆ. ಇದೇ ರೀತಿ ಮುಂದೆ ಬಿಡುಗಡೆ ಸಂಖ್ಯೆಯಲಿ ಏರಿಕೆಯಾದರೆ ವರ್ಷಾಂತ್ಯಕ್ಕೆ ಬಿಡುಗಡೆ ಸಂಖ್ಯೆ 200 ದಾಟಿದರೂ ಅಚ್ಚರಿಯಿಲ್ಲ. ಹಾಗೆ ನೋಡಿದರೆ ಈ ವರ್ಷದ ಮೊದಲ ತಿಂಗಳು ಜನವರಿಯನ್ನು ಕೋವಿಡ್ ಮೂರನೇ ಅಲೆ ನುಂಗಿ ಹಾಕಿತ್ತು. ಜನವರಿಯಲ್ಲಿ ಬಿಡುಗಡೆಯಾಗಿದ್ದು ಕೇವಲ 3 ಚಿತ್ರ.
ಹೊಸಬರ ಮೆರವಣಿಗೆ: ಮುಂದಿನ ಎಂಟು ತಿಂಗಳಿನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದಕ್ಕೆ ಕಾರಣ ಸೆನ್ಸಾರ್ ಆಗಿ ಬಿಡುಗಡೆಗೆ ಕಾದು ಕುಳಿತಿರುವ ಸಿನಿಮಾಗಳು. ಕೋವಿಡ್ ಹಾಗೂ ಸ್ಟಾರ್‌ಗಳ ಸಿನಿಮಾ ಭಯದಿಂದ ಸೆನ್ಸಾರ್ ಆಗಿರುವ ಅನೇಕ ಸಿನಿಮಾಗಳು ಮೇ ನಂತರ ಬಿಡುಗಡೆಯಾಗಲಿವೆ. “ಆರ್‌ಆರ್‌ಆರ್’, “ಕೆಜಿಎಫ್-2′ ಎಂದು ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಾ ಬಂದ ಸಿನಿಮಾಗಳು ಈಗ ಬಿಡುಗಡೆಯಾಗಲಿವೆ. ಸ್ಟಾರ್ ಸಿನಿಮಾ ಬರುವ ವಾರದಲ್ಲಿ ರಿಲೀಸ್ ಸಂಖ್ಯೆ ಕಡಿಮೆಯಾಗಬಹುದೇ ಹೊರತು ಮಿಕ್ಕಂತೆ ಮುಂದಿನ ದಿನಗಳಲ್ಲಿ ಹೊಸಬರ ಮೆರವಣಿಗೆ ಜೋರಾಗಿಯೇ ಸಾಗಲಿದೆ.
ಭರವಸೆ ಮೂಡಿಸಿದ ವರ್ಷಾರಂಭ: ಕನ್ನಡ ಚಿತ್ರರಂಗಕ್ಕೆ ಈ ವರ್ಷಾರಂಭ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಬಿಡುಗಡೆಯಾದ ಎಲ್ಲಾ ಚಿತ್ರಗಳು ಗೆಲ್ಲದಿದ್ದರೂ ಗೆದ್ದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿವೆ. “ಲವ್ ಮಾಕ್ಟೇಲ್-2′, “ಏಕ್‌ಲವ್ಯ’, “ಓಲ್ಡ್ ಮಾಂಕ್’, “ಜೇಮ್ಸ್’ … ಹೀಗೆ ಅನೇಕ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಇನ್ನು, ಇತ್ತೀಚೆಗೆ ಬಿಡುಗಡೆಯಾದ “ಕೆಜಿಎಫ್-2′ ಇಡೀ ವಿಶ್ವವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ಜೊತೆಗೆ ಮತ್ತಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ “ಕೆಜಿಎಫ್-2′ ದಾರಿ ಮಾಡಿಕೊಟ್ಟಿವೆ.
ಮತ್ತಷ್ಟು ಸಿನಿಮಾಗಳ ಮೇಲೆ ನಿರೀಕ್ಷೆ: ಈ ತಿಂಗಳಾಂತ್ಯದಿಂದ ಬಿಡುಗಡೆಯಾಗುತ್ತಿರುವ ಅನೇಕ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. “ಶೋಕಿವಾಲ’, “ಅವತಾರ್ ಪುರುಷ’, “ಟಕ್ಕರ್’, “ತೋತಾಪುರಿ’, “ಕಸ್ತೂರಿ ಮಹಲ್’, “ಮೇಲೊಬ್ಬ ಮಾಯಾವಿ’, “ತೂತು ಮಡಿಕೆ’, “ಖಾಸಗಿ ಪುಟಗಳು’, “ಚೇಸ್’ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ನಾನಾ ಕಾರಣಗಳಿಗಾಗಿ ನಿರೀಕ್ಷೆ ಹುಟ್ಟಿಸಿವೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.