ವೆನಿಲ್ಲಾ ವಿಶೇಷ
Team Udayavani, May 25, 2018, 6:00 AM IST
“ಅದೊಂದು ರೈಲ್ವೆ ಹಳಿ. ಅಲ್ಲೇ ಸಮೀಪದ ಯೂನಿರ್ವಸಿಟಿಗೆ ಹೋಗಲೆಂದು ಒಬ್ಬರು ಆ ರೈಲ್ವೆ ಹಳಿ ಪಕ್ಕ ನಿಂತಿದ್ದರು. ಅದೇ ವೇಳೆ ರೈಲೊಂದು ಸಾಗಿ ಹೋಯ್ತು. ಅಲ್ಲಿ ನಿಂತಾತನ ಕಣ್ಣಿಗೆ, ಆ ರೈಲಿನ ಬಾಗಿಲ ಬಳಿ ಇದ್ದ ಒಬ್ಬ ಹುಡುಗ, ಹುಡುಗಿ ಕಂಡಿದ್ದಾರೆ …’ ಅಷ್ಟೇ, ಆ ಸನ್ನಿವೇಶವೇ ಒಂದು ಚಿತ್ರವಾಗಿದೆ. ಅಲ್ಲೇನಾಯ್ತು, ಏನು ಇತ್ಯಾದಿ ವಿಷಯಗಳಿಗೆ ಉತ್ತರವಿಲ್ಲ. ಆದರೂ, ರೈಲಿನಲ್ಲಿ ಒಬ್ಬ ಹುಡುಗ, ಹುಡುಗಿ ನಿಂತ ಸನ್ನಿವೇಶವನ್ನು ನೋಡಿದಾತ ಹೇಳಿದ್ದನ್ನೇ ಕಥೆ ಮಾಡಿ, ಚಿತ್ರ ಮಾಡಿದ್ದಾರೆ ನಿರ್ದೇಶಕ ಜಯತೀರ್ಥ. ಆ ಚಿತ್ರಕ್ಕೆ ಅವರು ಇಟ್ಟುಕೊಂಡ ಹೆಸರು “ವೆನಿಲ್ಲಾ’.
ಹೌದು, ರೈಲಿನಲ್ಲಿ ಆ ಹುಡುಗ, ಹುಡುಗಿಯನ್ನು ನೋಡಿದವರು ಕುಮಾರ್. ಅವರು ಜಯತೀರ್ಥ ಅವರಿಗೆ ಹೇಳಿದ್ದಾರೆ. ಜಯತೀರ್ಥ ಅವರಿಗೊಂದು ಐಡಿಯಾ ಬಂದು, ಅದೀಗ ಚಿತ್ರವಾಗಿ ಪ್ರೇಕ್ಷಕರ ಮುಂದೆ ಜೂ.1 ರಂದು ಬರುತ್ತಿದೆ. ಆ ವಿಷಯ ಹೇಳಿಕೊಳ್ಳಲೆಂದೇ ಜಯತೀರ್ಥ ತಂಡ ಕಟ್ಟಕೊಂಡು ಪತ್ರಕರ್ತರ ಮುಂದೆ ಬಂದಿದ್ದರು.
ಒಂದೊಂದು ಸಿನಿಮಾ ಕಥೆ ಎಲ್ಲೆಲ್ಲೋ ಹುಟ್ಟುತ್ತವೆ. “ವೆನಿಲ್ಲಾ’ ಕಥೆ ಒಂದು ರೈಲಿನಲ್ಲಿ ಪಯಣಿಸೋ ಹುಡುಗ, ಹುಡುಗಿಯ ನೋಡಿ ರೆಡಿಯಾಗಿದೆ. ಈ ಕುರಿತು ಜಯತೀರ್ಥ ಹೇಳಿಕೊಂಡಿದ್ದು ಹೀಗೆ. “ಇದೊಂದು ಪ್ರಾಮಾಣಿಕ ಪ್ರಯತ್ನ. ನನ್ನ ನಿರ್ದೇಶನದ 5 ನೇ ಚಿತ್ರವಿದು. ಹಿಂದೆ ಮಾಡಿದ ಸಿನಿಮಾಗಳೆಲ್ಲವೂ ಕಮರ್ಷಿಯಲ್ ಆಗಿದ್ದವು. ಇದು ಬೇರೆ ಜಾನರ್ ಸಿನಿಮಾ. ಈ ಪ್ರಯೋಗ ನನಗೆ ಹೊಸದು. ಹೊಸ ತಂಡ ಕಟ್ಟಿಕೊಂಡು ಹೊಸದೇನನ್ನೋ ಮಾಡಿದ್ದೇನೆ. “ಬ್ಯೂಟಿಫುಲ್ ಮನಸುಗಳು’ ಬಳಿಕ ಬಂದ ಪ್ರಾಜೆಕ್ಟ್ ಇದು. ಹೊಸ ಹುಡುಗ ಅವಿನಾಶ್ ಜಯರಾಂ ಈ ಚಿತ್ರ ಮಾಡೋಣ ಅಂದಾಗ, ಒಪ್ಪಲಿಲ್ಲ. ಆತ ರಂಗಭೂಮಿ ನಟ. ಮಂಡ್ಯ ರಮೇಶ್ ಅವರ ನಟನಾದಲ್ಲಿದ್ದವನು. ಒಮ್ಮೆ ನಾಟಕ ನೋಡಿದೆ. ಎರಡು ಗಂಟೆ ನಾಟಕದಲ್ಲಿ ಆತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡ ರೀತಿ ಇಷ್ಟವಾಯ್ತು. ಹಾಗೆ ಕಥೆಯೂ ಓಕೆ ಆಗಿತ್ತು. ಸಿನಿಮಾ ಮಾಡಿದೆ. ಇಲ್ಲಿ ಅಶ್ಲೀಲತೆ ಇಲ್ಲ, ಡಬ್ಬಲ್ ಮೀನಿಂಗ್ ಇಲ್ಲ, ಕೆಟ್ಟದ್ಯಾವುದೂ ಇಲ್ಲ. ಆದರೆ, ಘರ್ಷಣೆ ಇಲ್ಲದೆ ಕಥೆ ಹುಟ್ಟೋದಿಲ್ಲ. ಒಂದೊಳ್ಳೆ ಸಿನಿಮಾಗೆ ಬೇಕಾದೆಲ್ಲವೂ ಇಲ್ಲಿದೆ. ಸಿನಿಮಾಗೆ ಹೀರೋ ಸಾಕಷ್ಟು ವಿಷಯಗಳನ್ನು ಕಲೆ ಹಾಕಿ ಕೊಟ್ಟಿದ್ದರಿಂದ ಚಿತ್ರ ಇನ್ನಷ್ಟು ಚೆನ್ನಾಗಿ ಬಂದಿದೆ’ ಎಂಬುದು ಜಯತೀರ್ಥ ಮಾತು.
ನಾಯಕ ಅವಿನಾಶ್‌ಗೆ ಇದು ಕಷ್ಟ ಇಷ್ಟಗಳ ನಡುವೆ ಮಾಡಿದ ಚಿತ್ರವಂತೆ. “ನನ್ನ ಕನಸನ್ನು ಅಪ್ಪ ನನಸು ಮಾಡಿದ್ದಾರೆ. ಈಗಿನ ಯುವಕರ ಕುರಿತಾದ ಚಿತ್ರವಿದು. ನಾನಿಲ್ಲಿ ಸೀದಾ ಸಾದ ಇರುವ ಹುಡುಗನ ಪಾತ್ರ ಮಾಡಿದ್ದೇನೆ. ಲೈಫ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಾರ್ಮಲ್ ಹುಡುಗ. ಸ್ಕೂಲ್‌ನಲ್ಲೇ ಹುಡುಗಿಯೊಬ್ಬಳ ಮೇಲೆ ಕ್ರಷ್ ಆಗಿರುತ್ತೆ. 12 ವರ್ಷಗಳ ಬಳಿಕ ಆಕೆ ಪುನಃ ಸಿಗ್ತಾಳೆ. ಆಮೇಲೆ ಏನಾಗುತ್ತೆ ಎಂಬುದು ಕಥೆ’ ಎಂದರು ಅವಿನಾಶ್.
“ಬಿಗ್‌ಬಾಸ್’ ಮನೆಯಿಂದ ಹೊರ ಬಂದ ರೆಹಮಾನ್, ಹಲವು ರಿಯಾಲಿಟಿ ಶೋ ನಡೆಸಿಕೊಡುವಾಗ ಬಂದ ಕಥೆ ಇದಂತೆ. “ಇಲ್ಲಿ ನಾಯಕಿಯ ಅಣ್ಣನ ಪಾತ್ರ ಮಾಡಿದ್ದೇನೆ. ಒಬ್ಬ ರೀಸರ್ಚ್ ಆಗಿ, ಚಿತ್ರಕ್ಕೆ ತಿರುವು ಕೊಡುವಂತಹ ಪಾತ್ರ ನನ್ನದು’ ಅಂದರು ರೆಹಮಾನ್.
ನಾಯಕಿ ಸ್ವಾತಿ ಕೊಂಡೆ ಇಲ್ಲೊಂದು ಹೊಸ ತರಹದ ಪಾತ್ರ ಮಾಡಿದ ಬಗ್ಗೆ ಹೇಳಿಕೊಂಡರು. ಕಾಕ್ರೋಚ್ ಸುಧಿಗೆ ಇಲ್ಲೊಂದು ಸಣ್ಣ ಪಾತ್ರ ಸಿಕ್ಕಿದೆಯಂತೆ. ಅದೊಂದು ಕಳ್ಳನ ಪಾತ್ರ ಎಂಬುದು ಅವರ ಮಾತು. ಕಿರಣ್ ಹಂಪಾಪುರ, ಸಂಗೀತ ನಿರ್ದೇಶಕ ಭರತ್,ಹೇಮಂತ್ “ವೆನಿಲ್ಲಾ’ ಅನುಭವ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.