![Madhu-Bangarappa1](https://www.udayavani.com/wp-content/uploads/2025/02/Madhu-Bangarappa1-415x249.jpg)
![Madhu-Bangarappa1](https://www.udayavani.com/wp-content/uploads/2025/02/Madhu-Bangarappa1-415x249.jpg)
Team Udayavani, Apr 6, 2018, 4:10 PM IST
ನೀವು “ಗುಳ್ಟು’ ಸಿನಿಮಾ ನೋಡಿದ್ದೆರ ಖಂಡಿತಾ ನಿಮಗೆ ಇವರ ನಟನೆ ಇಷ್ಟವಾಗಿರುತ್ತದೆ. ಸಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿಭಾಹಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಅಂದಹಾಗೆ, ಇವರ ಹೆಸರು ನವೀನ್ ಶಂಕರ್. “ಗುಳ್ಟು’ ಸಿನಿಮಾದ ನಾಯಕ. ಇದು ಇವರಿಗೆ ಮೊದಲ ಸಿನಿಮಾ. ಈ ಹಿಂದೆ ಒಂದು ಸಿನಿಮಾ ಆರಂಭವಾಗಿ ನಿಂತು ಹೋಗಿದೆ. ಹಾಗಾಗಿ, ನವೀನ್‌ಗೆ “ಗುಲ್ಟಾ’ ಮೊದಲ ಸಿನಿಮಾ.
ಇಳಕಲ್‌ನಲ್ಲಿ ಪಿಯುಸಿ ಮುಗಿಸಿದ ನವೀನ್ ಇಂಜಿನಿಯರಿಂಗ್‌ಗೆಂದು ಬೆಂಗಳೂರಿಗೆ ಬಂದವರು. ಆದರೆ, ಆಸಕ್ತಿ ಸಿನಿಮಾ ಕಡೆಗಿದ್ದ ಕಾರಣ ಎರಡೇ ವರ್ಷಕ್ಕೆ ಇಂಜಿನಿರಿಂಗ್‌ಗೆ ಗುಡ್‌ಬೈ ಹೇಳಿ, ವಾಹಿನಿಗಳಲ್ಲಿ ಕೆಲಸ ಆರಂಭಿಸಿದರಂತೆ. ಸಿನಿಮಾ ನಟನಾಗುವ ಮುನ್ನ ನಟನೆ ಕಲಿಯಬೇಕೆಂದು ಎರಡು ವರ್ಷಗಳ ಕಾಲ ರಂಗಭೂಮಿಯಲ್ಲಿ ವಿವಿಧ ನಾಟಕ, ಬೀದಿ ನಾಟಕಗಳನ್ನು ಮಾಡಿದ ಅನುಭವ ನವೀನ್‌ಗಿದೆ.
ಅದೇ ಅನುಭವದೊಂದಿಗೆ ಅವರು “ಗುಲ್ಟಾ’ಗೆ ಬಣ್ಣ ಹಚ್ಚಿದ್ದಾರೆ. “ಗುಳ್ಟು’ ನಿರ್ದೇಶಕ ಜನಾರ್ದನ್ ಹಾಗೂ ನವೀನ್ ಒಂದೇ ಕಾಲೇಜು. ಸಿನಿಮಾಸಕ್ತಿ ಹೊಂದಿದ್ದ ಇವರು, ಆಗಲೇ ಅವರಿಬ್ಬರು ಮುಂದೆ ಒಟ್ಟಿಗೆ ಸಿನಿಮಾ ಮಾಡುವ ಎಂದು ಮಾತನಾಡಿಕೊಂಡಿದ್ದರಂತೆ. ಅದರಂತೆ ಈಗ ಇಬ್ಬರು ಸೇರಿಕೊಂಡು ಸಿನಿಮಾ ಮಾಡಿದ್ದಾರೆ. “ಸಿನಿಮಾ ನೋಡಿದವರಿಂದ ಒಳ್ಳೆಯ ಮಾತು ಕೇಳಿಬರುತ್ತಿದೆ.
ನನ್ನ ನಟನೆಯ ಬಗ್ಗೆಯೂ ಮಾತನಾಡುತ್ತಿದ್ದಾರೆ. ಚಿತ್ರರಂಗದಿಂದಲೂ ಪ್ರೋತ್ಸಾಹ ಸಿಗುತ್ತಿದ್ದು, ಮುಂದೆಯೂ ಒಳ್ಳೆಯ ಸಿನಿಮಾ ಮಾಡುವಂತೆ ಸಲಹೆ ಕೊಡುತ್ತಿದ್ದಾರೆ’ ಎನ್ನುವುದು ನವೀನ್ ಮಾತು. ಅಂದಹಾಗೆ, ನವೀನ್‌ಗೆ ಈಗಾಗಲೇ ಒಂದಷ್ಟು ಅವಕಾಶಗಳು ಬರುತ್ತಿವೆಯಂತೆ. “ತುಂಬಾ ಅವಕಾಶಗಳು ಬರುತ್ತಿವೆ. ಒಳ್ಳೆಯ ಕಥೆಗಳನ್ನೇ ನೋಡಿಕೊಂಡು ಆಯ್ಕೆ ಮಾಡುತ್ತೇನೆ’ ಎನ್ನುತ್ತಾರೆ ನವೀನ್.
* ರವಿ ರೈ
ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು
Tragedy: ಡೆತ್‌ನೋಟ್ ಬರೆದಿಟ್ಟು ಪುತ್ರಿಯ ಕೊಂದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!
Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!
Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ
ಗ್ಯಾರಂಟಿ ಯೋಜನೆಗೆ ಮೀಸಲಿಟ್ಟ 52,000 ಕೋಟಿ ರೂ.ಎಲ್ಲಿ ಹೋಗುತ್ತೆ?: ಛಲವಾದಿ ನಾರಾಯಣಸ್ವಾಮಿ
You seem to have an Ad Blocker on.
To continue reading, please turn it off or whitelist Udayavani.