ಫುಲ್ ಟೈಟ್ ವ್ಯಕ್ತಿಯ ಕಥೆ-ವ್ಯಥೆ
Team Udayavani, Jan 18, 2019, 12:30 AM IST
“ಫುಲ್ ಟೈಟ್ ಪ್ಯಾತೆ…’
ಇದು ಸಿನಿಮಾವೊಂದರ ಹೆಸರು. ಚಿತ್ರದ ಹೆಸರೇ ಹೀಗಿದೆ. ಸಿನಿಮಾ ಹೇಗಿದೆಯೋ ಎಂಬ ಪ್ರಶ್ನೆ ಕಾಡುವುದು ನಿಜ. ಆದರೆ, ಸಿನಿಮಾ ಹಿಂಗೇ ಇರುತ್ತೆ ಅನ್ನುವುದಕ್ಕೊಂದು ಹಾಡು, ಸಣ್ಣ ಟೀಸರ್ ಸಾಕು. “ಫುಲ್ ಟೈಟ್ ಪ್ಯಾತೆ’ ಚಿತ್ರದ ಹಾಡು, ಟೀಸರ್ ನೋಡಿದವರಿಗೆ ಚಿತ್ರದಲ್ಲೇನೋ ವಿಶೇಷತೆ ಇದೆ ಎನ್ನುವಷ್ಟರ ಮಟ್ಟಿಗೆ ಕೆಲಸ ಕಾಣುತ್ತದೆ. ಅಂದಹಾಗೆ, ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿದ ಚಿತ್ರ. ಇದರ ವಿಶೇಷವೆಂದರೆ, ಚಿತ್ರದುದ್ದಕ್ಕೂ ಮಳವಳ್ಳಿ ಭಾಷೆಯೇ ಹೈಲೈಟ್. ಅದರಲ್ಲೂ ಇದೊಂದು ನೈಜ ಘಟನೆ ಕುರಿತಾದ ಚಿತ್ರ. ಮೊದಲ ಸಲ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ತಂಡದ ಜೊತೆ ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕ, ನಿರ್ಮಾಪಕ ಕಮ್ ನಾಯಕ ಎಸ್.ಎಲ್.ಜಿ.ಪುಟ್ಟಣ್ಣ.
ಮಳವಳ್ಳಿ ಭಾಷೆಯಲ್ಲೇ ಮಾತು ಶುರುಮಾಡಿದ ನಿರ್ದೇಶಕರು ಹೇಳಿದ್ದಿಷ್ಟು. “ಸಿನಿಮಾ ನೋಡುವುದು ಸುಲಭ. ಮಾಡುವುದು ಬಲು ಕಷ್ಟ. ಈ ಚಿತ್ರ ಮಾಡೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನ ಫ್ಯಾಮಿಲಿ, ಗೆಳೆಯರು ಹಾಗು ತಂತ್ರಜ್ಞರು ಸಹಕರಿಸಿದ್ದರಿಂದ ಚಿತ್ರ ಮುಗಿಸಿ, ಸೆನ್ಸಾರ್‌ಗೆ ಕಳಿಸಲು ಸಜ್ಜಾಗಿದ್ದೇನೆ. ಇದನ್ನು ಹೊಸ ಪ್ರಯತ್ನ, ಹೊಸ ಪ್ರಯೋಗ ಅಂತ ಹೇಳುವುದಿಲ್ಲ. ಆದರೆ, ಹೊಸಬರ ಸಣ್ಣ ಮತ್ತು ಪ್ರಾಮಾಣಿಕ ಪ್ರಯತ್ನವಷ್ಟೇ. ಕಡಿಮೆ ಬಜೆಟ್‌ಗೆ ಹೊಂದಿಕೆಯಾಗುವ ಕಥೆ ಮಾಡಬೇಕೆಂದುಕೊಂಡೆ. ನನ್ನ ಅಜ್ಜಿ ಊರಲ್ಲೊಬ್ಬ ಕುಡುಕನಿದ್ದ. ಅವನ ಬಗ್ಗೆ ಕುತೂಹಲವಿತ್ತು. ಅಜ್ಜಿ ಅವನ ಬಗ್ಗೆ ಸಾಕಷ್ಟು ಹೇಳಿದ್ದರು. ಅವನ ಲೈಫಲ್ಲಿ ಒಂದಷ್ಟು ಸಮಸ್ಯೆಗಳು ಬಂದಿದ್ದರಿಂದ ಅವನು ಕುಡಿತಕ್ಕೆ ದಾಸನಾಗಿ, ಇಂದಿಗೂ ಹಾಸ್ಯ ಮಾಡಿಕೊಂಡೇ ತಿರುಗುತ್ತಾನೆ. ಎದೆಯಲ್ಲಿ ನೋವಿದ್ದರೂ, ಹೊರಗಡೆ ನಗುತ್ತಲೇ ಇರುವಂತಹ ವ್ಯಕ್ತಿ ಎಂದು ಹೇಳಿದ್ದರು. ಅವನನ್ನು ಹುಡುಕಿ, ಅವನಿಗೊಂದು ಕ್ವಾಟ್ರಾ ಬಾಟಲ್ ಕೊಡಿಸಿ, ಅವನ ಕಥೆ ಕೇಳಿಕೊಂಡು ಸಿನಿಮಾ ಮಾಡಿದ್ದೇನೆ. ಈಗ ಎಲ್ಲಾದರೂ ಆಕಸ್ಮಿಕವಾಗಿ ಸಿಕ್ಕರೆ ಆ ವ್ಯಕ್ತಿ, ಬಾ ಗುರು ಇನ್ನೂ ಸ್ವಲ್ಪ ಕಥೆ ಬಿಟ್ಟಿದ್ದೀನಿ ಹೇಳ್ತೀನಿ ಅಂತ ಮಾತಿಗಿಳಿಯುತ್ತಾನೆ. ಅಂತಹ ವ್ಯಕ್ತಿಯ ಚಿತ್ರಣ ಇಲ್ಲಿದೆ. ಸಿನಿಮಾ ನೋಡಿದವರಿಗೆ ಅವನೊಳಗಿನ ನೋವು, ನಲಿವು ಎಲ್ಲವೂ ಗೊತ್ತಾಗುತ್ತೆ. ಮನರಂಜನೆ ಜೊತೆಗೆ ಒಂದು ಸಣ್ಣ ಸಂದೇಶ ಇಲ್ಲಿದೆ’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ತಂದೆ ಪಾತ್ರ ಪ್ರಮುಖವಾಗಿದೆ. ಬಿರಾದಾರ್ ಅವರು ಅದಕ್ಕೆ ಜೀವ ತುಂಬಿದ್ದಾರೆ. ಸಂಭಾವನೆ ಕಡಿಮೆ ಇದೆ ಅಂದರೂ, ನಮ್ಮಂತಹ ಹೊಸಬರಿಗೆ ಸಾಥ್ ಕೊಟ್ಟಿದ್ದು ವಿಶೇಷ. ಇನ್ನು, ನಾಯಕಿ ಬೇಕಿತ್ತು. ಅವರ ಸಂಭಾವನೆ, ಅದು ಇದೂ ಅಂತ ಹೇಳಿದ್ದನ್ನು ಕೇಳಿ ಅವರ ಸಹವಾಸ ಆಗಲ್ಲ. ಅಂತ, ರಂಗಭೂಮಿ ಕಲಾವಿದೆ ಮಾನಸ ಗೌಡ ಅವರ ಜೊತೆ ಮಾತನಾಡಿ ಕೆಲಸ ಮಾಡಿದ್ದೇವೆ. ನಿರ್ದೇಶನ ವಿಭಾಗದ ಹುಡುಗರೇ, ತೆರೆ ಹಿಂದೆ ಮುಂದೆ ಕೆಲಸ ಮಾಡಿದ್ದಾರೆ, ಊಟದ ವಿಭಾಗವನ್ನೂ ಅವರೇ ನಿರ್ವಹಿಸಿದ್ದಾರೆ. ಒಂದು ಸಣ್ಣ ಪ್ರಯತ್ನ ನಮ್ಮದು. ನಿಮ್ಮ ಸಹಕಾರ ಬೇಕು’ ಅಂದರು ಎಸ್.ಎಲ್.ಜಿ.ಪುಟ್ಟಣ್ಣ.
ಬಿರಾದಾರ್ ಚಿತ್ರದಲ್ಲಿ ನಾಯಕನ ತಂದೆ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. ಹಳ್ಳಿ ಸೊಗಡಿನ ಚಿತ್ರದಲ್ಲಿ ಮಳವಳ್ಳಿ ಭಾಷೆ ಹೈಲೈಟ್ ಆಗಿದೆ. ನೈಜತೆಗೆ ಹತ್ತಿರವಾದಂತಹ ಚಿತ್ರವಿದು. ಹೊಸ ತಂಡವಾದರೂ, ಅನುಭವಿಯಂತೆ ಕೆಲಸ ಮಾಡಿದೆ. ಸಿನಿಮಾಗೆ ಗೆಲುವು ಸಿಗಲಿ’ ಎಂದರು ಬಿರಾದಾರ್. ಲಹರಿ ವೇಲು ಅವರು, ಚಿತ್ರದ ಹಾಡುಗಳು ಚೆನ್ನಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಬರು ಕಷ್ಟದಲ್ಲೇ ಚಿತ್ರ ಮಾಡಿದ್ದಾರೆ. ಇವರಿಗೆ ಒಳ್ಳೆಯದಾಗಲಿ. ಹಾಕಿದ ಹಣ ಬರಲಿ ಎಂದು ಹಾರೈಸಿದರು. ಶಿವರಾಮನಗರ, ಪವನ್‌ಕುಮಾರ್ ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ರೇಂಜು, ಸಂಜೀವ್ ಸಂಗೀತ ನೀಡಿದ್ದಾರೆ. ಮಹೇಶ್ ಶ್ರೀಧರ್ ಛಾಯಾಗ್ರಹಣವಿದೆ. ಜಗದೀಶ್, ಗಿರೀಶ್ ಸಂಕಲನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.