ಕಾಯಿಲೆ ಸುತ್ತ ಮತ್ತೊಂದು ಚಿತ್ರ
Team Udayavani, Oct 26, 2018, 6:00 AM IST
ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿಕೊಂಡೇ ನಿರ್ಮಾಣ,ನಿರ್ದೇಶನ, ನಟನೆ ಮಾಡಿದವರಿದ್ದಾರೆ.
ಮಾಡುತ್ತಿರುವವರೂ ಇದ್ದಾರೆ. ಈಗ ಆ ಸಾಲಿಗೆ ಶ್ರೀನಿವಾಸ್ (ಸ್ಟಿಲ್ ಸೀನು) ಕೂಡ ಸೇರಿದ್ದಾರೆ.
ಹೌದು, 1989 ರಲ್ಲಿ “ನಂಜುಂಡಿ ಕಲ್ಯಾಣ’ ಚಿತ್ರದ ಮೂಲಕ ಸ್ಟಿಲ್ ಫೋಟೋಗ್ರಾಫರ್ ಆಗಿ ಚಿತ್ರರಂಗ ಪ್ರವೇಶಿಸಿದ ಶ್ರೀನಿವಾಸ್, ಇಲ್ಲಿಯವರೆಗೆ 150 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.
“ಕುರುಕ್ಷೇತ್ರ’ ಅವರ 151 ನೇ ಚಿತ್ರ ಎಂಬುದು ವಿಶೇಷ. ಅವರೀಗ “ಗಹನ’ ಚಿತ್ರ ನಿರ್ಮಿಸುವ ಮೂಲಕ ನಿರ್ಮಾಪಕರಾಗಿದ್ದಾರೆ. ಈ ಚಿತ್ರ ನಿರ್ಮಿಸೋಕೆ ಕಾರಣ, ಕಥೆ. ನಿರ್ದೇಶಕ ಪ್ರೀತ್‌ಹಾಸನ್ ಹೇಳಿದ ಕಥೆ ಇಷ್ಟವಾಗಿದ್ದಲ್ಲದೆ, ಮೂರು ದಶಕಗಳ ಆಸೆ ಈಗ
ಈಡೇರಿದೆ ಎಂಬುದು ಸ್ಟಿಲ್ ಸೀನು ಅವರ ಮಾತು. ನಿರ್ದೇಶಕ ಪ್ರೀತ್‌ಹಾಸನ್ ಅವರಿಗೆ ಇದು ಮೊದಲ ಚಿತ್ರ. ಅವರಿಗೆ ಈ ಚಿತ್ರ ಹುಟ್ಟಿದ್ದು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ “ಕುರುಕ್ಷೇತ್ರ’ ಚಿತ್ರೀಕರಣದಲ್ಲಂತೆ.
ಅವರು “ಕುರುಕ್ಷೇತ್ರ’ದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುವ ವೇಳೆ, ನಿರ್ಮಾಪಕರಿಗೆ ಈ ಕಥೆ ಹೇಳಿದ್ದರಂತೆ. ಅದೀಗ ಚಿತ್ರವಾಗಿದೆ. “ಇದೊಂದು ಜರ್ನಿ ಕಥೆ. ಅದರಲ್ಲೂ ಸಿಜೋμÅàನಿಯ ಎಂಬ ಕಾಯಿಲೆ ಹಿನ್ನೆಲೆಯಲ್ಲಿ ಸಾಗುವ ಕಥೆ. ಸೈಕಲಾಜಿಕಲ್ ಥ್ರಿಲ್ಲರ್ ಅಂಶ ಹೊಂದಿರುವ ಈ ಚಿತ್ರ ಬಹುತೇಕ ಮಲೆನಾಡ ತಾಣದಲ್ಲೇ ಸಾಗಲಿದೆ. ಈ ಚಿತ್ರ ಚಿತ್ರೀಕರಿಸಿರುವ ಜಾಗ, ಇದುವರೆಗೆ ಬೇರೆ ಯಾವ ಚಿತ್ರಗಳಲ್ಲೂ ಬಳಸಿಲ್ಲ. ಒಳ್ಳೆಯ ಪ್ರಕೃತಿ ತೋರಿಸುವುದರ ಜೊತೆಗೆ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೇಳುವ ಪ್ರಯತ್ನ ಮಾಡಿದ್ದೇನೆ. ಒಬ್ಬ ಹುಡುಗಿ ತನ್ನ ಜರ್ನಿ ನಡುವೆ ಮಾನಸಿಕವಾಗಿ ಕುಗ್ಗುತ್ತಾಳೆ. ಕೊನೆಗೆ ಅವಳು ಏನೆಲ್ಲಾ ಮಾಡುತ್ತಾಳೆ, ಹೇಗೆಲ್ಲಾ ವರ್ತಿಸುತ್ತಾಳೆ ಎಂಬುದು ಕಥೆ’ ಎನ್ನುತ್ತಾರೆ ನಿರ್ದೇಶಕರು.
ಆದಿತ್ಯ ಶೆಟ್ಟಿ ಈ ಚಿತ್ರದ ನಾಯಕ. ಈ ಹಿಂದೆ ಕಿರುತೆರೆಯಲ್ಲಿ “ಜಾನಕಿ ರಾಘವ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಆದಿತ್ಯ
ಶೆಟ್ಟಿಗೆ, ಇದೊಂದು ಒಳ್ಳೆಯ ಅವಕಾಶವಂತೆ. ನಿರ್ದೇಶಕರ ಕಥೆ ಕೇಳಿದ ಕೂಡಲೇ, ಮಿಸ್ ಮಾಡಿಕೊಳ್ಳಬಾರದು ಅಂತ
ಒಪ್ಪಿ ನಟಿಸಿದ್ದಾರೆ. ಇಡೀ ಚಿತ್ರ ಹೊಸ ಅನುಭವ ಕಟ್ಟಿಕೊಟ್ಟಿದೆ ಎಂಬುದು ಅವರ ಮಾತು. ನಾಯಕಿ ಶರಣ್ಯ ಗೌಡ ಅವರಿಗೆ
ಇದು ವಿಶೇಷ ಚಿತ್ರವಂತೆ. ಅವರಿಲ್ಲಿ ಡಬ್ಬಲ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿನಯಕ್ಕೆ ಹೆಚ್ಚು ಅವಕಾಶ ಸಿಕ್ಕಿದೆಯಂತೆ.
ಒಂದು ರೀತಿಯ ಭ್ರಮೆಯಲ್ಲಿ ಬದುಕುವ ಹುಡುಗಿಯಾಗಿ ಕಾಣಿಸಿಕೊಂಡ ಬಗ್ಗೆ ಹೇಳುತ್ತಾರೆ ಶರಣ್ಯ ಗೌಡ. ರಂಜಿನಿ ಶಂಕರ್ ಕೂಡ ಇಲ್ಲಿ ಭರತನಾಟ್ಯ ಪಟುವಾಗಿ ನಟಿಸಿದ್ದಾರಂತೆ. ಚಿತ್ರಕ್ಕೆ ರಘು ಧನ್ವಂತರಿ ಸಂಗೀತ ನೀಡಿದ್ದು, ವಿಜಯ್ ಅವರು ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.