ಅದೇ ರೋಗ; ಹೊಸ ರಾಗ
Team Udayavani, Jul 27, 2018, 6:00 AM IST
“ಈಗ ಕ್ಯಾನ್ಸರ್ ಬಗ್ಗೆ ಹಲವು ಬೇರೆ ಬೇರೆ ಚಿತ್ರಗಳು ಬಂದಿಲ್ಲವೇ. ಇಲ್ಲೂ ಅದೇ ತರಹ. ಕಾಯಿಲೆ ಅದೇ. ಚಿತ್ರ ಬೇರೆ …’
ಈ ವಾರ ಬಿಡುಗಡೆಯಾಗುತ್ತಿರುವ “ಸಂಕಷ್ಟಕರ ಗಣಪತಿ’ ಚಿತ್ರವು ತಮಿಳಿನ “ಪೀಚನ್‌ಕೈ’ ಎಂಬ ಚಿತ್ರದ ರೀಮೇಕಾ ಎಂಬ ಪ್ರಶ್ನೆ ಬರುತ್ತಿದ್ದಂತೆಯೇ ಉತ್ತರಿಸುತ್ತಾ ಹೋದರು ನಿರ್ದೇಶಕ ಅರ್ಜುನ್. ಅವರು ಹೇಳುವಂತೆ ಇದು ಯಾವುದೇ ಚಿತ್ರದ ರೀಮೇಕ್ ಅಲ್ಲವಂತೆ. “ಯೂಟ್ಯೂಬ್‌ನಲ್ಲಿ ಸುಮಾರು ಜನ ಇದು “ಪೀಚನ್‌ಕೈ’ನ ರೀಮೇಕ್ ಎಂದು ಹೇಳಿದ್ದಾರೆ. ಆದರೆ, ಕೊನೆಗೆ ತಮಿಳು ಚಿತ್ರದ ನಿರ್ದೇಶಕರೇ ಬಂದು, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದಾರೆ. ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಕುರಿತು ಹಲವು ಚಿತ್ರಗಳು ಬಂದಿದೆ. ತಮಿಳು, ಇಂಗ್ಲೀಷ್ ಅಲ್ಲದೆ ಅರೇಬಿಕ್‌ನಲ್ಲೂ ಒಂದು ಕಿರು ಚಿತ್ರ ಬಂದಿದೆ. ಖಾಯಿಲೆ ಅದೇ ಇರಬಹುದು. ಕಥೆ ಬೇರೆ’ ಎಂದು ಹೇಳಿಕೊಂಡರು ಅರ್ಜುನ್.
ಲಿಖೀತ್ ಅಭಿನಯದ “ಸಂಕಷ್ಟಕರ ಗಣಪತಿ’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಕರ್ನಾಟಕದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡು ತ್ತಿದ್ದಾರಂತೆ. ಅದಲ್ಲದೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೇರಿಕಾ ಮುಂತಾದ ಕಡೆ ಚಿತ್ರ ಬಿಡುಗಡೆಯಾಗುತ್ತಿದೆಯಂತೆ. ಹೀಗೆ ಚಿತ್ರ ಅಲ್ಲೆಲ್ಲಾ ಬಿಡುಗಡೆಯಾಗುತ್ತಿರುವುದಕ್ಕೆ, ಜನ ಇಟ್ಟಿರುವ ನಿರೀಕ್ಷೆಯೇ ಕಾರಣ ಮತ್ತು ಜನ ಹಾಗೆ ನಿರೀಕ್ಷೆ ಇಡುವುದಕ್ಕೆ ಟ್ರೇಲರ್ ಹಿಟ್ ಆಗಿದ್ದೇ ಕಾರಣ ಎಂಬುದು ಅರ್ಜುನ್ ನಂಬಿಕೆ. “ಫೇಸ್‌ಬುಕ್‌ನಲ್ಲಿ ಚಿತ್ರದ ಟ್ರೇಲರ್‌ಗೆ 30 ಲಕ್ಷ ಹಿಟ್ಸ್ ಬಿದ್ದಿದೆ. ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇನ್ನು ಚಿತ್ರ ಸಹ ಚೆನ್ನಾಗಿ ಬಂದಿದೆ. ನಾನು ಮೂರು ಬಾರಿ ಚಿತ್ರ ನೋಡಿದೆ. ನಿರ್ದೇಶಕ ಅಂತ ಹೇಳುತ್ತಿಲ್ಲ. ಚಿತ್ರ ಚೆನ್ನಾಗಿ ಬಂದಿದೆ. ಯಾವುದೇ ಲ್ಯಾಗ್ ಇಲ್ಲದೆ ಎರಡು ಗಂಟೆಯ ಸಿನಿಮಾ ಇದು’ ಎಂದರು ಅರ್ಜುನ್.
ಚಿತ್ರದ ನಾಯಕ ಲಿಖೀತ್ ಮಾತನಾಡಿ, “ಈಗಾಗಲೇ ಬೇರೆ ಭಾಷೆಗಳಿಂದ ರೀಮೇಕ್ ರೈಟ್ಸ್ ಕೇಳಿಕೊಂಡು ಫೋನ್ ಬರುತ್ತಿವೆ. ತೆಲುಗಿನ ಜನಪ್ರಿಯ ನಿರ್ಮಾಪಕರೊಬ್ಬರು ಫೋನ್ ಮಾಡಿದ್ದರು. ಇದು ಖುಷಿಯ ವಿಷಯ. ಇನ್ನು ನಾವು ಹೊಸಬರೆಂದು ನೋಡದೆ ಶಿವಣ್ಣ, ಗಣೇಶ್, ವಿಜಯ್ ಮುಂತಾದವರು ಚಿತ್ರಕ್ಕೆ ಹಾರೈಸುತ್ತಿದ್ದಾರೆ. ಹೊಸಬರಿಗೆ ಅವರು ಕೊಡುತ್ತಿರುವ ಪ್ರೋತ್ಸಾಹ ಖುಷಿ ಕೊಡುತ್ತಿದೆ’ ಎಂದರು.
ನಾಯಕಿ ಶ್ರುತಿ ಗೊರಾಡಿಯಾ ಸಹ ಖುಷಿಯಾಗಿದ್ದರು. ಅವರಿಗೆ ಈ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಇನ್ನೊಂದು ಚಿತ್ರದಲ್ಲಿ ಅವಕಾಶ ಸಿಕ್ಕಿದೆಯಂತೆ. ಮೊದಲ ಚಿತ್ರದಲ್ಲೇ ಒಳ್ಳೆಯ ಅನುಭವವಾಯಿತು, ಪ್ರತಿಭಾವಂತ ಕಲಾವಿದರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿತು ಎಂದು ಅವರು ಮಾತು ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.