ಆಕ್ಟ್-1978 ಪವರ್‌ಫ‌ುಲ್‌ ಟ್ರೇಲರ್‌

ಪುನೀತ್‌ ಕೈಯಿಂದ ಹೊರಬಂದಟ್ರೇಲರ್‌ಗೆಭರ್ಜರಿ ರೆಸ್ಪಾನ್ಸ್‌

Team Udayavani, Nov 6, 2020, 3:22 PM IST

suchitra-tdy-12

ತನ್ನ ಟೈಟಲ್‌ ಮತ್ತು ಪೋಸ್ಟರ್‌ ಮೂಲಕ ಗಮನ ಸೆಳೆದಿದ್ದ “ಆಕ್ಟ್-1978′ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮಹಿಳಾ ಕೇಂದ್ರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ, ಸಾಮಾನ್ಯ ಮಹಿಳೆಯೊಬ್ಬಳು ಸರ್ಕಾರ ಮತ್ತು ವ್ಯವಸ್ಥೆಯ ವಿರುದ್ದ ತಿರುಗಿ ಬಿದ್ದರೆ ಏನೆಲ್ಲ ಸಂಭವಿಸಬಹುದು ಎನ್ನುವುದರ ಸಣ್ಣ ಝಲಕ್‌ ಅನ್ನು ಟ್ರೇಲರ್‌ನಲ್ಲಿತೋರಿಸಲಾಗಿದೆ. ತಮ್ಮ ಹಕ್ಕಾದ ಸರ್ಕಾರದ ಸವಲತ್ತುಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಇಬ್ಬರು ಸಾಮಾನ್ಯರುಕೊನೆಗೆ ಸರ್ಕಾರದ ವಿರುದ್ಧವೇ ತಿರುಗಿ ಬೀಳುವಕಥಾಹಂದರವನ್ನು ಚಿತ್ರ ಹೊಂದಿದೆ. ಈ ಹಿಂದೆ “ಹರಿವು’, “ನಾತಿಚರಾಮಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಸೋರೆ, ಈ ಬಾರಿ ಸಸ್ಪೆನ್ಸ್‌ಕಂಕ್ರೈಂ ಥ್ರಿಲ್ಲರ್‌ ಕಥಾಹಂದರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಯಜ್ಞಾ ಶೆಟ್ಟಿ, ಬಿ.ಸುರೇಶ್‌, ಅಚ್ಯುತ್‌ಕುಮಾರ್‌, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಪ್ರಮೋದ್‌ ಶೆಟ್ಟಿ, ಹೆಬ್ಟಾಳೆಕೃಷ್ಣ, ಸುಧಾ ಬೆಳವಾಡಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಬಿಡುಗಡೆಯಾಗಿರುವ “ಆಕ್ಟ್-1978′ ಚಿತ್ರದ ಟ್ರೇಲರ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ತಿಂಗಳಕೊನೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.­

ಜೈಸೂರ್ಯ ಸಿನಿಕನಸು :  ಕನ್ನಡ ಚಿತ್ರರಂಗಕ್ಕೆ ನವ ಪ್ರತಿಭೆಗಳು ಎಂಟ್ರಿಕೊಡುತ್ತಲೇ ಇರುತ್ತವೆ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಅವರದು. ಇಂತಹಕನಸಿನೊಂದಿಗೆ ಈಗ ಜೈ ಸೂರ್ಯ ಆರ್‌ ಆಜಾದ್‌ ಕೂಡಾ ಎಂಟ್ರಿಕೊಟ್ಟಿದ್ದಾರೆ. ಯಾವ ಸಿನಿಮಾ ಎಂದು ನೀವುಕೇಳಿದರೆ “ಸಲಗ’ ಬಗ್ಗೆ ಹೇಳಬೇಕು. ವಿಜಯ್‌ ನಟಿಸಿ, ನಿರ್ದೇಶಿಸಿರುವ “ಸಲಗ’ ಚಿತ್ರದಲ್ಲಿ ಇವರು ನಟಿಸಿದ್ದಾರೆ. ಹೀರೋ ಗ್ಯಾಂಗ್‌ನಲ್ಲಿ ಸೇರಿಕೊಂಡು, ಸಾಕಷ್ಟು ಟ್ವಿಸ್ಟ್‌ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೈರಾಜ್‌ಕ್ರೈಸ್ಟ್‌ ಕಾಲೇಜಿನ ಲಾಓದುತ್ತಿರುವ ಜೈ ಸೂರ್ಯ ಮಾಡೆಲಿಂಗ್‌ ಹಿನ್ನೆಲೆಯಿಂದ ಬಂದವರು. ಮಿಸ್ಟರ್‌ಕರ್ನಾಟಕ ಚಾರ್ಮಿಂಗ್‌ ಹಾಗೂ ಮಿಸ್ಟರ್‌ ಸೌತ್‌ ಇಂಡಿಯಾ ಆ್ಯಮ್‌ ಪವರ್‌ಫ‌ುಲ್‌ಕರ್ನಾಟಕ2020 ಟೈಟಲ್‌ ವಿನ್ನರ್‌ ಆಗಿದ್ದಾರೆ. ಅಂದಹಾಗೆ, ಜೈಸೂರ್ಯ ತಂದೆ ಎಲ್‌ ವೈ ರಾಜೇಶ್‌ ಪೊಲೀಸ್‌ ಅಧಿಕಾರಿ. ಈಗ ಮಗನ ಕನಸಿಗೆ ಸಾಥ್‌ ನೀಡುತ್ತಿದ್ದಾರೆ. ಒಳ್ಳೆಯ ಡ್ಯಾನ್ಸರ್‌ ಆಗಿರುವ ಜೈ ಸೂರ್ಯ ಅವರಿಗೆ ಮುಂದೊಂದು ದಿನ ಚಿತ್ರರಂಗದಲ್ಲಿ ಒಳ್ಳೆಯಕಲಾವಿದನಾಗಿ ಬೆಳೆಯುವಕನಸಿದೆ.

ಆ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. “ಚಿತ್ರರಂಗದಲ್ಲಿ ನನಗೆ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕೆಂಬ ಕನಸಿದೆ.ಕಥೆಗೆ ಸೂಕ್ತ ಅನಿಸಿ ಯಾರದರೂ ಹೀರೋ ಪಾತ್ರಕೊಟ್ಟರೆ ಖಂಡಿತ ಮಾಡುತ್ತೇನೆ. ಅಲ್ಲಿಯವರೆಗೂ ನಾನು ಕಲಾವಿದನಾಗಿಯೇ ಸಿಕ್ಕ ಪಾತ್ರಗಳನ್ನು ಮಾಡುತ್ತೇನೆ’ ಎನ್ನುವುದು ಜೈಸೂರ್ಯ ಮಾತು. ­

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.