ಖಡಕ್ ಖಾಕಿ

ದೊಡ್ಡ ಆಲೋಚನೆ ದೊಡ್ಡ ಕನಸು

Team Udayavani, Apr 19, 2019, 8:00 AM IST

38

 

ಕನ್ನಡ ಚಿತ್ರರಂಗಕ್ಕೂ ಪೊಲೀಸ್‌ ಸ್ಟೋರಿಗಳಿಗೂ ಅವಿನಾಭಾವ ಸಂಬಂಧ. ಕನ್ನಡದಲ್ಲಿ ಈಗಾಗಲೇ
ಸಾಕಷ್ಟು ಪೊಲೀಸ್‌ ಸ್ಟೋರಿಗಳು ಬಂದಿವೆ. ಅಂದಿನಿಂದ ಇಂದಿನವರೆಗಿನ ಬಹುತೇಕ ಎಲ್ಲಾ ನಾಯಕ ನಟರು ಪೊಲೀಸ್‌ ಯೂನಿಫಾರಂನಲ್ಲಿ ಖಡಕ್‌ ಆಗಿ ಖದರ್‌ ತೋರಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಎರಡು ಚಿತ್ರಗಳು ಪೊಲೀಸ್‌ ಸ್ಟೋರಿ ಮೂಲಕ ಕುತೂಹಲ ಹುಟ್ಟಿಸಿವೆ. ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಹಾಗೂ ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’. ಈ ಎರಡು ಚಿತ್ರಗಳ ಕುರಿತು ರಕ್ಷಿತ್‌ ಹಾಗೂ “ರುಸ್ತುಂ’ ನಿರ್ದೇಶಕ ರವಿವರ್ಮ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ …

ಬರೋಬ್ಬರಿ ಎರಡೂವರೆ ವರ್ಷ…. ಹಿಟ್‌ ಸಿನಿಮಾ ಕೊಟ್ಟ ನಾಯಕ ನಟನೊಬ್ಬ ಇಷ್ಟೊಂದು ಗ್ಯಾಪ್‌ ಪಡೆಯೋದು ಇನ್ನೊಂದು ಸಿನಿಮಾದಲ್ಲಿ ತೊಡಗಿಕೊಳ್ಳೋದು ಸುಲಭದ ಮಾತಲ್ಲ. ಯಶಸ್ಸು ಬೆನ್ನ ಹಿಂದೆ ಇರುವಾಗ ನಾನ್ಯಾಕೆ ಇಷ್ಟೊಂದು ಕಾಯಬೇಕು ಎಂದು ಭಾವಿಸುವವರೇ ಹೆಚ್ಚು. ಆದರೆ, ರಕ್ಷಿತ್‌ ಶೆಟ್ಟಿ ಮಾತ್ರ ಅವಸರ ಮಾಡಲೇ ಇಲ್ಲ. 2016 ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾದ ಅವರ “ಕಿರಿಕ್‌ ಪಾರ್ಟಿ’ ದೊಡ್ಡ ಯಶಸ್ಸು ಕಂಡಿತು. ಆ ಚಿತ್ರ ಬಿಡುಗಡೆಯಾಗಿ ಎರಡೂವರೆ ವರ್ಷ ಕಳೆದರೂ ರಕ್ಷಿತ್‌ ಶೆಟ್ಟಿ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಈಗ ಅವರ ಹೊಸ ಚಿತ್ರ “ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯ ಹಂತಕ್ಕೆ ಬಂದಿದೆ. ಟೀಸರ್‌ ಮೂಲಕ ದೊಡ್ಡ ಕುತೂಹಲ ಹುಟ್ಟಿಸಿದ್ದ ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ರಕ್ಷಿತ್‌ ಕೂಡಾ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟಿದ್ದಾರೆ.

ಎಲ್ಲಾ ಓಕೆ, ಇಷ್ಟೊಂದು ಗ್ಯಾಪ್‌ ಯಾಕೆ ಎಂದು ಕೇಳಿದರೆ ನಗುತ್ತಲೇ ರಕ್ಷಿತ್‌ ಉತ್ತರಿಸುತ್ತಾರೆ. “ಕಿರಿಕ್‌ ಪಾರ್ಟಿ ನಂತರ ಏನೂ ಮಾಡಬೇಕೆಂದು ಯೋಚನೆಯೂ ಇರಲಿಲ್ಲ ಮತ್ತು ಯಾವುದಕ್ಕೂ ನಾನು ರೆಡಿಯಾಗಿರಲಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. “”ಕಿರಿಕ್‌ ನಂತರ ಏನು ಮಾಡಬಹುದು, ಯಾವ ತರಹದ ಸಿನಿಮಾ ಮಾಡಿದರೆ ಚೆಂದ ಎಂದು ನಾನು ಯೋಚಿಸಿಯೂ ಇರಲಿಲ್ಲ. ಜೊತೆಗೆ “ಕಿರಿಕ್‌ ಪಾರ್ಟಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿ ಸ್ವಲ್ಪ ಸುತ್ತಾಡುತ್ತಿದ್ದೆವು ಕೂಡಾ. 2017 ಮಾರ್ಚ್‌ ನಂತರ ನಾವು ಬರವಣಿಗೆಗೆ ಕೂತಿದ್ದು. ಮೂರ್‍ನಾಲ್ಕು ತಿಂಗಳಲ್ಲಿ ಸ್ಕ್ರಿಪ್ಟ್ ರೆಡಿಯಾಗಬಹುದೆಂಬ ಆಲೋಚನೆ ಇತ್ತು. ಏಕೆಂದರೆ “ಕಿರಿಕ್‌ ಪಾರ್ಟಿ’ ಸ್ಕ್ರಿಪ್ಟ್ ಅನ್ನು ಅಷ್ಟರಲ್ಲಿ ಮುಗಿಸಿದ್ದೆವು. ಆದರೆ, ಇದು ಸುಮಾರು ಒಂದು ವರ್ಷ ತಗೊಂಡಿತು.

ಏನು ಮಾಡಿದರೂ ನಮಗೆ ತೃಪ್ತಿಯಾಗಲಿಲ್ಲ. ಸುಮಾರು 20 ವರ್ಶನ್‌ ಮಾಡಿದೆವು. ಬರೆದಂತೆ ಅಪ್‌ಡೇಟ್‌, ಟ್ರಿಮ್‌ ಮಾಡ್ತಾ ಇದ್ದೆವು. ಮೊದಲ ಡ್ರಾಪ್‌ 200 ಪುಟದಲ್ಲಿತ್ತು. ಅದನ್ನು ನಾವು 145 ಪುಟಕ್ಕೆ ಇಳಿಸಬೇಕಾಯಿತು. ಹಾಗೆ ಮಾಡುವಾಗ ಒಂದಷ್ಟು ಕಂಟೆಂಟ್‌ ಮಿಸ್‌ ಆಗುತ್ತದೆ. ಅದಕ್ಕೆ ಪುನಃ ಬೇರೆ ಸೀನ್‌ ಬರೆಯಬೇಕು. ಮೂರು ಸೀನ್‌ ಕಟ್‌ ಮಾಡಿ ಒಂದು ಸೀನ್‌ ಮಾಡೋದು ಸುಲಭವಲ್ಲ.
ಅದಕ್ಕೆ ಸಾಕಷ್ಟು ಸಮಯ ತಗೊಂಡಿತು. ಆದರೆ, ಇದೊಂದು ನಮಗೆ ಒಳ್ಳೆಯ ಅನುಭವ ಕೊಟ್ಟಿತು. ನಾವು ಬರವಣಿಗೆ ನಂಬಿದವರು. ಇಷ್ಟೊಂದು ಸಮಯ ತಗೊಂಡ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಸ್ಕ್ರಿಪ್ಟ್ ಚೆನ್ನಾಗಿ ಬಂದಿದೆ. “ಅವನೇ ಶ್ರೀಮನ್ನಾರಾಯಣ’ ಸ್ಕ್ರಿಪ್ಟ್ ಸಮಯದಲ್ಲಿ ನಾವು ಸಾಕಷ್ಟು ಕಲಿತೆವು. ನಾವು ನಾಳೆ ಇನ್ನೊಂದು ಸ್ಕ್ರಿಪ್ಟ್ ಮಾಡುವಾಗ ಇಷ್ಟು ಸಮಯ ಬೇಕಾಗಲ್ಲ. ಏಕೆಂದರೆ ಅಲ್ಲಿನ
ಅನುಭವ ಇಲ್ಲಿ ವರ್ಕೌಟ್‌ ಆಗುತ್ತದೆ’ ಎಂದು “ಅವನೇ ಶ್ರೀಮನ್ನಾರಾಯಣ’ದ ಸ್ಕ್ರಿಪ್ಟ್ ಅನುಭವ ಬಿಚ್ಚಿಡುತ್ತಾರೆ ರಕ್ಷಿತ್‌.

ದೊಡ್ಡ ಹಿಟ್‌ ಕೊಟ್ಟ ನಾಯಕ ಇಷ್ಟೊಂದು ಗ್ಯಾಪ್‌ ತಗೊಂಡಿರೋದು ಎಷ್ಟು ಸರಿ, ಈ ಬಗ್ಗೆ ಬೇಸರವಿದೆಯೇ ಎಂದರೆ ಖಂಡಿತಾ ಇಲ್ಲ ಎಂಬ ಉತ್ತರ ರಕ್ಷಿತ್‌ರಿಂದ ಬರುತ್ತದೆ. “ನನಗೆ ಬೇಗನೇ ಬಂದು ಬಿಡಬೇಕೆಂಬ ಆತುರವಿಲ್ಲ. ಒಂದು ಒಳ್ಳೆಯ ಸಿನಿಮಾ ಬಂದರೆ ಜನ ನೋಡೇ ನೋಡುತ್ತಾರೆ. ಆ ನಂಬಿಕೆ ನನಗಿದೆ. ನಾವು ಒಳ್ಳೆಯ ಕಂಟೆಂಟ್‌ ಕೊಟ್ಟರೆ ಖಂಡಿತಾ ಜನ ಬರುತ್ತಾರೆ. ಅಲ್ಲಿ ಲೇಟಾಗಿದೆ, ಜನ ಮರೆತು ಬಿಡುತ್ತಾರಾ ಎಂಬ ಪ್ರಶ್ನೆ ಬರಲ್ಲ. ಹಾಡು, ಟ್ರೇಲರ್‌ ಬಿಟ್ಟು, ಚೆನ್ನಾಗಿ ಪಬ್ಲಿಸಿಟಿ ಮಾಡಿದರೆ ಜನ ಸಿನಿಮಾದತ್ತ ತಿರುಗಿ ನೋಡುತ್ತಾರೆ. ಈಗಾಗಲೇ ಕುತೂಹಲ ಬಿಲ್ಡ್‌ ಆಗಿದೆ ಅಂದುಕೊಂಡಿದ್ದೇನೆ’ ಎನ್ನುವುದು ರಕ್ಷಿತ್‌ ಮಾತು.

“ಅವನೇ ಶ್ರೀಮನ್ನಾರಾಯಣ’ ಚಿತ್ರ ಬರೋಬ್ಬರಿ 200 ದಿನ ಚಿತ್ರೀಕರಣ ಮಾಡಿದೆ. 200 ದಿನ ಚಿತ್ರೀಕರಣ ಮಾಡಿದ ಕನ್ನಡದ ಮೊದಲ ಚಿತ್ರ ಎಂಬ ಮಾತೂ ಇದೆ. ಎಲ್ಲಾ ಓಕೆ, ಇಷ್ಟೊಂದು ಚಿತ್ರೀಕರಣ ಮಾಡಲು ಕಾರಣವೇನು ಎಂದರೆ ಚಿತ್ರದ ಗುಣಮಟ್ಟ ಎಂಬ ಉತ್ತರ ರಕ್ಷಿತ್‌ರಿಂದ ಬರುತ್ತದೆ. “ನಾವು ಕೆಲವೇ ಕೆಲವು ದೃಶ್ಯಗಳನ್ನಷ್ಟೇ ಫೋಕಸ್‌ ಮಾಡಿ, ಅದನ್ನಷ್ಟೇ ಚೆನ್ನಾಗಿ ತೆಗೆದಿಲ್ಲ. ಪ್ರತಿ ಫ್ರೆಮ್‌ ಬಗ್ಗೆಯೂ ಗಮನಹರಿಸಿದ್ದೆವೆ. “ಕಿರಿಕ್‌ ಪಾರ್ಟಿ’ಯಲ್ಲಿ ಒಂದು ದಿನಕ್ಕೆ ಎರಡೂರು ಸೀನ್‌ ತೆಗೆದರೆ, ಇಲ್ಲಿ ಒಂದೊಂದು ಸೀನ್‌ ಶೂಟ್‌ ಗೆ ಮೂರ್‍ನಾಲ್ಕು ದಿನ ಬೇಕಾಗಿತ್ತು. ಒಂದು ದಿನಕ್ಕೆ 8-9 ಶಾಟ್ಸ್‌ ಅಷ್ಟೇ ತೆಗೆಯುತ್ತಿದ್ದೆವು. ಮೊದಲ ಬಾರಿಗೆ ದೊಡ್ಡ ಸೆಟ್‌ ಹಾಕಿ. ಎಲ್ಲವೂ ನಮಗೆ ಹೊಸ ಅನುಭವ’ ಎನ್ನುವ ರಕ್ಷಿತ್‌, ಈ ಚಿತ್ರದಲ್ಲಿ ಒಂದು ಹೊಸ ಕಲ್ಪನಾ ಲೋಕವನ್ನೇ  ಸೃಷ್ಟಿಸಿದ್ದೇವೆ. ಇಲ್ಲಿನ ಕಥೆಯನ್ನು ನೀವು ಎಲ್ಲಿ ಬೇಕಾ ದರೂ ಮಾಡಬಹುದು, ಯಾವ ಜಾಗದಲ್ಲಾದರೂ ಇಡಬಹುದು. ಅದೇ ಕಾರಣದಿಂದ ಒಂದು ರಿಸ್ಕ್ ತಗೊಂಡು, ಡಬ್‌ ಮಾಡುವ ನಿರ್ಧಾರಕ್ಕೆ ಬಂದೆವು.

ದಕ್ಷಿಣ ಭಾರತದ ಭಾಷೆಗಳಿಗೆ ಡಬ್‌ ಮಾಡುವ ಆಲೋಚನೆ ನಮಗೆ ಮೊದಲೇ ಇತ್ತು. ಆದರೆ, ಹಿಂದಿಗೆ
ಇರಲಿಲ್ಲ. “ಕೆಜಿಎಫ್’ ಚಿತ್ರದ ಯಶಸ್ಸಿನ ನಂತರ ಹಿಂದಿ ಬಗ್ಗೆಯೂ ಯೋಚಿಸಿದೆವು. ಇದು ಸಂಪೂರ್ಣ
ಇಂಡಿಯನ್‌ ಸಬೆjಕ್ಟ್. ಅದಕ್ಕೆ ನಾವು ವೆಸ್ಟರ್ನ್ ಟಚ್‌ ಕೊಟ್ಟಿದ್ದೇವೆ. ಪ್ರೇಕ್ಷಕರಿಗೆ ಹೊಸ ಅನುಭವ
ಕೊಡೋದಂತೂ ಗ್ಯಾರಂಟಿ’ ಎಂದು ವಿಶ್ವಾಸದಿಂದ ಹೇಳುತ್ತಾರೆ ರಕ್ಷಿತ್‌. ಇನ್ನು, ಇಡೀ ಚಿತ್ರದಲ್ಲಿ ರಕ್ಷಿತ್‌
ಪೊಲೀಸ್‌ ಯೂನಿಫಾರ್ಮ್ನಲ್ಲೇ ಕಾಣಿಸಿಕೊಂಡಿದ್ದಾರೆ.

ಇಷ್ಟು ದಿನ ಮಾಡಿದ ಸಿನಿಮಾಕ್ಕೂ ಈ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ರಕ್ಷಿತ್‌ಗೆ ಹೊಸ ಅನುಭವ ಕೊಟ್ಟಿದೆಯಂತೆ. “ನನಗೆ ಇಲ್ಲಿನ ಪ್ರತಿಯೊಂದು ವಿಭಾಗವೂ ಹೊಸತಾಗಿತ್ತು. ಅದು ಸೆಟ್‌ನಿಂದ
ಹಿಡಿದು ಮೇಕಿಂಗ್‌ವರೆಗೂ. ಇವತ್ತು ಕನ್ನಡ ಚಿತ್ರರಂಗ ಎಷ್ಟು ಬೆಳೆದಿದೆ ಎಂದರೆ ಇಡೀ ಸೆಟ್‌ನಲ್ಲಿ ಸಿನಿಮಾ ಮುಗಿಸಬಹುದು. ಹೊಸತನ, ಕ್ರಿಯೇಟಿವ್‌ ಆಗಿ ಯೋಚನೆ ಮಾಡಿ, ಸಿನಿಮಾ ಕಟ್ಟಿಕೊಟ್ಟಿದ್ದೇವೆ’ ಎನ್ನುತ್ತಾರೆ. “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಡುವೆಯೇ ರಕ್ಷಿತ್‌ “777 ಚಾರ್ಲಿ’ಯಲ್ಲೂ ಬಿಝಿಯಾಗಿದ್ದರು. ಎರಡು ಸಿನಿಮಾಗಳನ್ನು ಒಟ್ಟಿಗೆ ಮಾಡಿದ ಅನುಭವ ಅವರದು. “ಅವನೇ ಶ್ರೀಮನ್ನಾರಾಯಣ’ನಿಗೆ ಹೋಲಿಸಿದರೆ “ಚಾರ್ಲಿ’ ಸಂಪೂರ್ಣ ಭಿನ್ನ. “ಅವನೇ …’ಯಲ್ಲಿ ತುಂಬಾ ಕಾಮಿಡಿ ಮಾಡುವ, ಭಿನ್ನ ಬಾಡಿಲಾಂಗ್ವೇಜ್‌ ಇದ್ದರೆ “ಚಾರ್ಲಿ’ಯಲ್ಲಿ ಸೆಟಲ್ಡ್‌ ಆ್ಯಕ್ಟಿಂಗ್‌ ಇದೆ. ಇನ್ನು ಚಿತ್ರದಲ್ಲಿ ಶ್ವಾನವೊಂದು ಪ್ರಮುಖ ಪಾತ್ರ ಮಾಡಿದೆ. ಅದರ ಮೂಡ್‌ಗೆ ತಕ್ಕಂತೆ ನಾವು ನಟಿಸಬೇಕು. ನಾವು ಎಷ್ಟೇ ಚೆನ್ನಾಗಿ ನಟಿಸಿ, ನಾಯಿಯೇನಾದರೂ ಸರಿಯಾಗಿ ನಟಿಸದೇ ಹೋದರೆ ಮತ್ತೆ ಶೂಟ್‌ ಮಾಡಬೇಕು. ಅದೇ ನಾಯಿ ಚೆನ್ನಾಗಿ ನಟಿಸಿ, ನಾವು ಇನ್ನೂ ಚೆನ್ನಾಗಿ ಮಾಡುತ್ತೇವೆ ಎಂದರೆ ಅವಕಾಶವಿರುವುದಿಲ್ಲ’ ಎನ್ನುತ್ತಾ ನಗುತ್ತಾರೆ ರಕ್ಷಿತ್‌. ಈಗಾಗಲೇ ಚಾರ್ಲಿ 40 ದಿನಗಳ ಚಿತ್ರೀಕರಣ
ಮುಗಿಸಿದ್ದು, ಇನ್ನೂ 60 ದಿನಗಳ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾ ಮುಗಿಸಿಕೊಂಡು ರಕ್ಷಿತ್‌ “ಪುಣ್ಯಕೋಟಿ’ ಕಡೆ ಹೋಗಲಿದ್ದಾರೆ. ಇದು ರಕ್ಷಿತ್‌ ನಟನೆ, ನಿರ್ದೇಶನದ ಮತ್ತೂಂದು ಸಿನಿಮಾ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.