ಕಿಕ್‌ ಕೊಡೋಕೆ ರೆಡಿಯಾದ ಹೊಸಬರ ಚಿತ್ರ

"ಗುಡುಗುಡಿಯಾ ಸೇದಿ ನೋಡೋ'ನಲ್ಲಿ ಸಾಹಸ ಕಥೆ

Team Udayavani, Nov 6, 2020, 1:39 PM IST

suchitra-tdy-6

ಸಂತ ಶಿಶುನಾಳ ಶರೀಫ‌ರ “ಗುಡುಗುಡಿಯಾ ಸೇದಿ ನೋಡೋ…’ ಎಂಬ ಪ್ರಸಿದ್ಧ ಗೀತೆಯನ್ನು ಅನೇಕರುಕೇಳಿರುತ್ತೀರಿ.ಕೆಲ ವರ್ಷಗಳ ಹಿಂದೆ ಇದೇ ಹಾಡಿಗೆ ಗಾಯಕ ರಘು ದೀಕ್ಷಿತ್‌ ಹೊಸದಾಗಿ ರಾಗ ಸಂಯೋಜಿಸಿ ಯುವ ಜನರಿಕೆ ಇನ್ನಷ್ಟು ಹತ್ತಿರವಾಗಿಸಿದ್ದರು. ಈಗ ಇದೇ “ಗುಡುಗುಡಿಯಾ ಸೇದಿ ನೋಡೋ…’ ಎನ್ನುವ ಹೆಸರಿನಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ಕೆಲಸಗಳನ್ನು ಪೂರ್ಣಗೊಳಿಸಿರುವ “ಗುಡುಗುಡಿಯಾ ಸೇದಿ ನೋಡೋ…’ ಚಿತ್ರತಂಡ, ಇತ್ತೀಚೆಗೆ ತನ್ನ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ.

“ವಾಟರ್‌ ಏಂಜಲ್ಸ್ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆಕೃಷ್ಣಕಾಂತ್‌ ಎನ್‌. ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಯುವ ನಿರ್ದೇಶಕ ಜಂಟಿ ಹೂಗಾರ್‌ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಟೀಸರ್‌ ಬಿಡುಗಡೆಯ ಬಳಿಕ ಮಾತನಾಡಿದ ನಿರ್ದೇಶಕ ಜಂಟಿ ಹೂಗಾರ್‌, “ಸಿನಿಮಾದ ಟೈಟಲ್ ನಲ್ಲಿ ಒಂದು ಗಟ್ಟಿತನ ಬೇಕಿತ್ತು.ಕಥೆಯ ಶೈಲಿಯೂ ಡಿಫ‌ರೆಂಟ್‌ ಆಗಿದ್ದರಿಂದ, ಅದಕ್ಕೆ ಒಪ್ಪುವ ಟೈಟಲ್‌ ಹುಡುಕಾಟದಲ್ಲಿದ್ದಾಗ, ಈ ಟೈಟಲ್‌ ತುಂಬ ಹತ್ತಿರ ಎನಿಸಿತು.

ಹಾಗಾಗಿ ಅದನ್ನೇ ನಮ್ಮ ಸಿನಿಮಾಕ್ಕೆ ಟೈಟಲ್‌ ಆಗಿ ಇಟ್ಟುಕೊಂಡೆವು. ಸುಮಾರು 3 ವರ್ಷದ ಹಿಂದೆಯೇ ಈ ಟೈಟಲ್‌ ರಿಜಿಸ್ಟರ್‌ ಮಾಡಿಸಿ, ಸಿನಿಮಾ ಮಾಡಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಕ್ಕೂ ಈ ಟೈಟಲ್‌ಗ‌ೂ ಯಾವುದೇ ಸಂಬಂಧ ಇಲ್ಲ’ ಎಂದು ಟೈಟಲ್‌ ಬಗ್ಗೆ ವಿವರಣೆ ನೀಡಿದರು. “ಮಿಸ್ಟರಿ -ಥ್ರಿಲ್ಲರ್‌ ಶೈಲಿಯ ಸಿನಿಮಾ. ಜರ್ನಿಯ ನಡುವೆ ಕಥೆಯೊಂದು ತೆರೆದುಕೊಳ್ಳುತ್ತದೆ. ಹಳೆಗನ್ನಡದ ಬುಡಕಟ್ಟು ಸಮುದಾಯ, 600 – 700 ವರ್ಷಗಳ ಹಿಂದಿನಕಾಣದನಾಗರಿಕತೆ ಮತ್ತುಕನ್ನಡದಕಂಪು ಈ ಚಿತ್ರದಲ್ಲಿಕಾಣಿಸಲಿದೆ. ಸಿನಿಮಾದೊಳಗೆ 15 ವಿಭಿನ್ನ ಪಾತ್ರಗಳಿವೆ. ಚಿತ್ರದಲ್ಲಿ ಹಳೆಗನ್ನಡದಬಳಕೆಇರುವುದರಿಂದ,ಕನ್ನಡದ ಸಬ್‌ಟೈಟಲ್‌ಬಳಕೆಮಾಡಲಾ ಗಿದೆ’ ಎಂದರು ನಿರ್ದೇಶ ಕಜಂಟಿಹೂಗಾರ್‌.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕೃಷ್ಣಕಾಂತ್‌ ಎನ್‌. “ನಾನು ಹೊಟೇಲ್‌ ಉದ್ಯಮದವನು. ಅಡುಗೆ ಹದವಾದರೆ ಮಾತ್ರ ರುಚಿಸುತ್ತದೆ. ನಿರ್ದೇಶಕರು ಅಂಥದ್ದೇ ಹದವಾದ, ಜನಪದ ಸೊಗಡಿನಕಥೆ ತಂದಿದ್ದರು. ಆ ಕಥೆಯನ್ನು ಮತ್ತಷ್ಟು ಮೊನಚಾಗಿಸಿ ಸುಮಾರು 2 ವರ್ಷದ ಹಿಂದೆಯೇ ಸಿನಿಮಾ ಶುರು ಮಾಡಿ. ಈಗ ಬಿಡುಗಡೆಗೆ ತಂದಿದ್ದೇವೆ. ಸಿನಿಮಾ ಮಾಡಬೇಕೆಂಬ ಬಹು ವರ್ಷದಕನಸು ಈಗ ನನಸಾಗಿದೆ’ ಎಂದರು.

ನಿರಂಜನ್‌, ಸುಜಿತ್‌, ರಶ್ಮಿತಾ ಗೌಡ, ಐಶ್ವರ್ಯಾ ದಿನೇಶ್‌, ಮಹಂತೇಶ್‌ ಮೊದಲಾದವರು “ಗುಡುಗುಡಿಯಾ ಸೇದಿ ನೋಡೋ…’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ದೀಪಿಕ್‌ ಯರಗೇರಾ ಸಂಕಲನ, ಉದಿತ್‌ ಹರಿದಾಸ್‌ ಸಂಗೀತ, ವರದರಾಜ್‌ ಕಾಮತ್‌ಕಲಾ ನಿರ್ದೇಶನವಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಚಿತ್ರದಕಲಾವಿದರು, ತಂತ್ರಜ್ಞರು ಚಿತ್ರದ ಬಗ್ಗೆತಮ್ಮ ಅನುಭವಗಳನ್ನು ಹಂಚಿಕೊಂಡರು. ನಟ, ನಿರ್ಮಾಪಕ ನವರಸನ್‌ ಸೇರಿದಂತೆ ಚಿತ್ರರಂಗದ ಹಲವರು ಅತಿಥಿಗಳಾಗಿ ಆಗಮಿಸಿ, “ಗುಡುಗುಡಿಯಾ ಸೇದಿ ನೋಡೋ…’ ಚಿತ್ರದ ಟೀಸರ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಸದ್ಯ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಇದೇ ಡಿಸೆಂಬರ್‌ ವೇಳೆಗೆ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.­

ಟಾಪ್ ನ್ಯೂಸ್

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Brahmavar

Belthangady: ಆತ್ಮಹ*ತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.