ಹನ್ಸಿಕಾಳ ಮೂಕವೇದನೆ…
Team Udayavani, Apr 13, 2018, 7:30 AM IST
ರಸ್ತೆಯಲ್ಲಿ ವ್ಯಕ್ತಿಯೊಬ್ಬ, ವೇಶ್ಯೆಯನ್ನು ಮನ ಬಂದಂತೆ ಥಳಿಸುತ್ತಿರುತ್ತಾನೆ. ಅದನ್ನು ನೋಡಿದ ಕೂಡಲೇ, ವೇಶ್ಯೆಯರ ಬದುಕು, ಬವಣೆ ಕುರಿತು ಯಾಕೆ ಒಂದು ಚಿತ್ರ ಮಾಡಬಾರದು ಅಂತೆನಿಸಿ, ಒಂದು ಕಥೆ ಹೆಣೆದು, ಅದಕ್ಕೆ “ಹನ್ಸಿಕಾ’ ಎಂದು ಹೆಸರಿಟ್ಟು, ಕೇವಲ ಹದಿನೈದು ನಿಮಿಷದ ಕಿರುಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ ನಿರ್ದೇಶಕ ಡಾ. ಪ್ರಶಾಂತ್ ಜಿ. ಮಾಲೂರು. ಇವರಿಗಿದು ಮೊದಲ
ಅನುಭವ. ಕಥೆ, ಚಿತ್ರಕಥೆ ಸಂಭಾಷಣೆಯ ಜೊತೆಗೆ ಸಂಕಲನ ಮಾಡಿರುವುದಲ್ಲದೆ, ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಆಷ್ಟೇ
ಅಲ್ಲ, ಭರತ್ ಜೈನ್ ಅವರ ಜತೆ ಸೇರಿ ನಿರ್ಮಾಣವನ್ನೂ ಮಾಡಿದ್ದಾರೆ.
ಇತ್ತೀಚೆಗೆ ತಮ್ಮ ಚೊಚ್ಚಲ “ಹನ್ಸಿಕ’ ಕಿರುಚಿತ್ರದ ಪ್ರದರ್ಶನ ಏರ್ಪಡಿಸಿದ್ದರು ನಿರ್ದೇಶಕ ಡಾ. ಪ್ರಶಾಂತ್. ಅವರು ಒಂದು ದಿನ ನಡೆದು ಹೋಗುವಾಗ, ರಸ್ತೆ ಬದಿಯಲ್ಲಿ ಒಬ್ಬ ವ್ಯಕ್ತಿ, ವೇಶ್ಯೆಯೊಬ್ಬರನ್ನು ಥಳಿಸುತ್ತಿದ್ದನಂತೆ. ಆ ದೃಶ್ಯ ಅವರನ್ನು ಬಹಳಷ್ಟು ಕಾಡಿದೆ. ಆಗ ಅವರಿಗೆ ತಕ್ಷಣ ಹೊಳೆದದ್ದು, ವೇಶ್ಯೆಯರ ಕುರಿತು ಒಂದು ಕಿರುಚಿತ್ರವನ್ನೇಕೆ ಮಾಡಬಾರದು ಎಂಬುದು. ಕೂಡಲೇ ವೇಶ್ಯೆಯರ ಕುರಿತು ಒಂದಷ್ಟು ಮಾಹಿತಿ ಕಲೆ ಹಾಕಿ, ಸುಮಾರು 40ಕ್ಕೂ ಹೆಚ್ಚು ವೇಶ್ಯೆಯರನ್ನು ಭೇಟಿ ಮಾಡಿ, ಅವರೊಂದಿಗೆ ಚರ್ಚಿಸಿ, ಕೆಲ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ, ವೇಶ್ಯೆಯರು ಆ ಮಾತುಕತೆಯಲ್ಲಿ ಆಡಿದಂತಹ ಕೆಲ ಮಾತುಗಳನ್ನೇ ಚಿತ್ರದಲ್ಲೂ ಡೈಲಾಗ್ ರೂಪದಲ್ಲಿ ಅಳವಡಿಸಿದ್ದಾರಂತೆ ಪ್ರಶಾಂತ್.
ಇನ್ನು, ಕಿರುಚಿತ್ರಕ್ಕೆ ಕಲಾವಿದರ ಆಯ್ಕೆಗೆ ಮುಂದಾದಾಗ, ಸುಮಾರು 80 ಜನರನ್ನು ಆಡಿಷನ್ ನಡೆಸಿದ್ದಾರೆ. ಆಗ, ಅವರೆಲ್ಲರೂ ಹೇಳಿದ್ದು ಒಂದೇ ಮಾತು. ಮೊದಲ ಸಲವೇ ವೇಶ್ಯೆ ಪಾತ್ರ ಮಾಡುವುದಿಲ್ಲ ಎಂಬುದು. ಕೊನೆಗೆ ನಿರ್ದೇಶಕರು, ಫೇಸ್ ಬುಕ್‌ನಲ್ಲಿ ಸೀಮಾ ಮಂಜಪ್ಪ ಎಂಬುವವರನ್ನು ಪರಿಚಯಿಸಿಕೊಂಡು, ಅವರನ್ನು ಒಪ್ಪಿಸಿ, ಕಿರುಚಿತ್ರ ಮಾಡಿದ್ದಾರೆ. ಇಲ್ಲಿ ಭಾವನಾತ್ಮಕ
ಸಂಬಂಧಗಳ ಜೊತೆಗೆ ಭಾವುಕತೆ ಹೆಚ್ಚಿಸುವ ಅಂಶಗಳಿವೆ. ಕಿರುಚಿತ್ರದಲ್ಲಿ ನಿರ್ದೇಶಕನೊಬ್ಬ ವೇಶ್ಯೆಯನ್ನು ಭೇಟಿ ಮಾಡಿ, ಒಂದು ಚಿತ್ರ ಮಾಡುವ ಕುರಿತು ಚರ್ಚಿಸಿದಾಗ, ಇಬ್ಬರ ನಡುವೆ ಒಂದಷ್ಟು ಮಾತುಕತೆ ನಡೆಯುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಆಕೆ ನಟಿಸಲು ಒಪ್ಪುವುದಿಲ್ಲ. ಕೊನೆಗೆ, ಮುಂದಿನ ದಿನಗಳಲ್ಲಿ ಎಂದಾದರೂ, ಭೇಟಿಯಾದಾಗ, ನಾನು ನಿಮ್ಮನ್ನು ಸಿನಿಮಾಗೆ ಆಯ್ಕೆ ಮಾಡಿ, ಕ್ಯಾಮೆರಾ ಮುಂದೆ ನಿಲ್ಲಿಸುತ್ತೇನೆ ಅಂತ ಹೇಳುವುದರೊಂದಿಗೆ ಚಿತ್ರ ಅಂತ್ಯವಾಗಲಿದೆ. ಅವರಿಬ್ಬರ ನಡುವಿನ ಸಂಭಾಷಣೆ ಮತ್ತು ಆಕೆಯ ಬದುಕಿನ ಕರಾಳ ಚಿತ್ರಣ ಕಿರುಚಿತ್ರದ ಹೈಲೈಟ್ ಎನ್ನುತ್ತಾರೆ ನಿರ್ದೇಶಕರು.
ಅಂದು ಕಿರುಚಿತ್ರ ವೀಕ್ಷಿಸಿದ ಉದ್ಯಮಿ ಮಹೇಂದ್ರ ಮನ್ನೋತ್, ಎನ್‌ಜಿಓ ಸಂಸ್ಥೆಯ ಪೂರ್ಣಿಮಾ ಇತರರು ಕಿರುಚಿತ್ರದ ಪ್ರಯತ್ನ
ಮೆಚ್ಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.