ಖುಷಿ ಕೊಡುವ ಪೈಲ್ವಾನ್
Team Udayavani, Feb 1, 2019, 12:30 AM IST
ಸುದೀಪ್ ಅವರಿಗೆ “ಹೆಬ್ಬುಲಿ’ ನಿರ್ದೇಶಿಸಿದ್ದ ಎಸ್. ಕೃಷ್ಣ ಈಗ ಅವರಿಗೊಂದು ಹೊಸ ಅಖಾಡ ಸೃಷ್ಟಿಸಿ, ಅವರನ್ನು “ಪೈಲ್ವಾನ್’ ಮಾಡಿದ್ದಾರೆ. ಈಗಾಗಲೇ “ಪೈಲ್ವಾನ್’ ತೊಡೆ ತಟ್ಟಿ ಘರ್ಜಿಸಿದ್ದಾಗಿದೆ. ಒಂದೇ ಒಂದು ಪೋಸ್ಟರ್ ಚಿತ್ರದ ಕುತೂಹಲ ಹೆಚ್ಚಿಸಿತ್ತು. ಇದೀಗ ಚಿತ್ರ ಮುಗಿಯುವ ಹಂತ ತಲುಪಿದೆ. ಪರಭಾಷೆಯಲ್ಲೂ ಸದ್ದು ಮಾಡಿರುವ ದೇಸೀ “ಪೈಲ್ವಾನ್’ ಜೊತೆಗಿನ ಅನುಭವ ಕುರಿತಂತೆ ಕೃಷ್ಣ ಮಾತನಾಡಿದ್ದಾರೆ.
ಸುದೀಪ್ ಜೊತೆ ಯಾರೇ ಕೆಲಸ ಮಾಡಿದರೂ ಅದೊಂದು ಅದ್ಭುತ ಅನುಭವ ಅನ್ನದೇ ಇರಲಾರರು. ಅಂಥದ್ದೊಂದು ಅನುಭವ ಕೃಷ್ಣ ಅವರಿಗೂ ಆಗಿದೆ. ಆ ಬಗ್ಗೆ ಹೇಳಿಕೊಳ್ಳುವ ಕೃಷ್ಣ, “ಸುದೀಪ್ ಅವರ ಜೊತೆ ಕೆಲಸ ಮಾಡೋದು ತುಂಬ ಕಂಫರ್ಟೆಬಲ್ ಆಗಿರುತ್ತದೆ. ಮೊದಲ ಚಿತ್ರದಿಂದಲೂ ಅದು ನನ್ನ ಅನುಭವಕ್ಕೆ ಬಂದಿದೆ. ಅಂಥದ್ದೊಂದು ಕಂಪರ್ಟ್ ಜೊನ್ ಇಲ್ಲ ಅಂದ್ರೆ ಸಿನಿಮಾ ಮಾಡೋಕೆ ಆಗಲ್ಲ. ಅವರ ಜೊತೆ ಕೆಲಸ ಮಾಡೋದು ನಿಜಕ್ಕೂ ಒಂದು ಡಿಫರೆಂಟ್ ಎಕ್ಸ್‌ಪೀರಿಯನ್ಸ್! ಇನ್ನು, ಅವರನ್ನು ಪೈಲ್ವಾನ್ ಆಗಿ ತೋರಿಸುವ ಯೋಚನೆ ಬಂದಿದ್ದು, ನಾನು ಮೊದಲಿನಿಂದಲೂ ಸುದೀಪ್ ಅವರ ಸಿನಿಮಾಗಳನ್ನು ನೋಡುತ್ತಲೇ ಬಂದಿದ್ದೇನೆ. ಅವರೊಬ್ಬ ವರ್ಸಟೈಲ್ ಆ್ಯಕ್ಟರ್. ಎಂತಹ ಪಾತ್ರವಿರಲಿ ಜೀವ ತುಂಬಿ ಅಭಿನಯಿಸುವ
ವಿಶೇಷ ಶಕ್ತಿ ಅವರಿಗಿದೆ. ಮೊದಲ ಬಾರಿ ಅವರ ಜೊತೆ ಕೆಲಸ ಮಾಡುವಾಗ ಅವರ ಡೆಡಿಕೇಷನ್ ನೋಡಿದಾಗಲೇ ಇಂಥದ್ದೊಂದು ಸಣ್ಣ ಥಾಟ್ಸ್ ಬಂದಿತ್ತು. ಸುದೀಪ್‌ರನ್ನು ಪೈಲ್ವಾನ್ ಗೆಟಪ್‌ನಲ್ಲಿ ವಿಭಿನ್ನವಾಗಿ ತೋರಿಸಬಹುದು ಎಂಬ ಯೋಚನೆ ಬಂದಿತ್ತು’ ಎನ್ನುತ್ತಾರೆ.
ಎಲ್ಲಾ ಸರಿ, ಕೃಷ್ಣ ಅವರು ಪೈಲ್ವಾನ್ ಐಡಿಯಾವನ್ನು ಸುದೀಪ್ ಬಳಿ ಹೇಳಿದಾಗ ಸುದೀಪ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ, “ಯಾವುದೇ ಹೀರೋ ಇರಲಿ, ಅವರಿಗೆ ಅವರದ್ದೇ ಆದ ಆಡಿಯನ್ಸ್ ಇರುತ್ತಾರೆ. ತಮ್ಮ ಫ್ಯಾನ್ಸ್‌ಗೆ ಖುಷಿ ಕೊಡಬಲ್ಲ, ಚೆನ್ನಾಗಿ ಸಿನಿಮಾ ಮಾಡಬಲ್ಲ ಅನ್ನೊ ನಂಬಿಕೆ ಇದ್ದರೆ ಮಾತ್ರ ಅಂಥವರ ಜೊತೆ ಸಿನಿಮಾ ಮಾಡುತ್ತಾರೆ.
ಅಂಥದ್ದೊಂದು ನಂಬಿಕೆ ಸುದೀಪ್ ಅವರಿಗೂ ನನ್ನ ಮೇಲಿತ್ತು. ಇಂಥದ್ದೊಂದು ಐಡಿಯಾವನ್ನು ಸುದೀಪ್ ಅವರ ಮುಂದಿಟ್ಟಾಗ ತುಂಬ ಖುಷಿಯಿಂದಲೇ ಅದನ್ನ ಒಪ್ಪಿಕೊಂಡರು. ಇನ್ನು ಅವರ ತಯಾರಿ ಬಗ್ಗೆ ಹೇಳುವುದಾದರೆ, ಬಹುಶಃ ನಾನು ಇಲ್ಲಿಯವರೆಗೆ ಕಂಡಂತೆ ಸುದೀಪ್ ಈ ಥರದ ಪ್ರಯೋಗವನ್ನು ಹಿಂದೆಂದೂ ಮಾಡಿಲ್ಲ. ಜಿಮ್ ಕಡೆಗೇ ಹೋಗದಿದ್ದವರು, ಚಿತ್ರದ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಲು ಸುಮಾರು 8 ತಿಂಗಳು ಜಿಮ್ ಗೆ ಹೋಗಿದ್ದಾರೆ, ಸ್ವಿಮ್ ಮಾಡಿದ್ದಾರೆ, ಪೈಲ್ವಾನ್ ಆಗಿ ಕಾಣಲು ಏನೇನು ಕಸರತ್ತು ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದಾರೆ.
ಪಾತ್ರಕ್ಕಾಗಿ ಅವರು ತೊಡಗಿಸಿಕೊಳ್ಳುವ ರೀತಿಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಬೇಕು’ ಎನ್ನುತ್ತಾರೆ ಕೃಷ್ಣ.
• ಸುದೀಪ್ ಜೊತೆಗಿನ ಎರಡನೇ ಚಿತ್ರ ಅನುಭವ ಹೇಗಿದೆ?
ಸುದೀಪ್ ಅವರ ಜೊತೆ ಕೆಲಸ ಮಾಡೋದು ತುಂಬ ಕಂಫರ್ಟೆಬಲ್ ಆಗಿರುತ್ತದೆ. ಮೊದಲ ಸಿನಿಮಾದಿಂದಲೂ ಅದು ನನ್ನ ಅನುಭವಕ್ಕೆ ಬಂದಿದೆ. ಅಂಥದ್ದೊಂದು ಕಂಪರ್ಟ್ ಜೊನ್ ಇಲ್ಲ ಅಂದ್ರೆ ಸಿನಿಮಾ ಮಾಡೋಕೆ ಆಗಲ್ಲ. ಅವರ ಜೊತೆ ಕೆಲಸ ಮಾಡೋದು ನಿಜಕ್ಕೂ ಒಂದು ಡಿಫರೆಂಟ್ ಕ್ಸಪೀರಿಯನ್ಸ್!
• ಸುದೀಪ್ ಅವರನ್ನು ಪೈಲ್ವಾನ್ ಆಗಿ ತೋರಿಸುವ ಐಡಿಯಾ ಬಂದಿದ್ದು ಯಾವಾಗ?
ನಾನು ಮೊದಲಿನಿಂದಲೂ ಸುದೀಪ್ ಅವರ ಸಿನಿಮಾಗಳನ್ನು ನೋಡುತ್ತಲೇ ಬಂದಿದ್ದೇನೆ. ಅವರೊಬ್ಬ ವರ್ಸಟೈಲ್ ಆ್ಯಕ್ಟರ್. ಎಂತಹ ಪಾತ್ರವನ್ನಾದರೂ ಅದರೊಳಗಿಳಿದು, ಅದಕ್ಕೆ ಜೀವ ತುಂಬಿ ಅಭಿನಯಿಸುವ ವಿಶೇಷ ಶಕ್ತಿ ಅವರಿಗಿದೆ. ಮೊದಲ ಬಾರಿ ಅವರ ಜೊತೆ ಕೆಲಸ ಮಾಡುವಾಗ ಅವರ ಡೆಡಿಕೇಷನ್ ನೋಡಿದಾಗಲೇ ಇಂಥದ್ದೊಂದು ಸಣ್ಣ ಥಾಟ್ಸ್ ಬಂದಿತ್ತು. ಸುದೀಪ್ ಅವರು ಪೈಲ್ವಾನ್ ಗೆಟಪ್‌ನಲ್ಲಿ ವಿಭಿನ್ನವಾಗಿ ತೋರಿಸಬಹುದು ಎಂಬ ಯೋಚನೆ ಬಂದಿತ್ತು.
• ಪೈಲ್ವಾನ್ ಐಡಿಯಾವನ್ನು ಕೇಳಿದಾಗ ಸುದೀಪ್ ಅವರ ಪ್ರತಿಕ್ರಿಯೆ ಹೇಗಿತ್ತು?
ಯಾವುದೇ ಹೀರೋ ಆದ್ರೂ ಅವರಿಗೆ ಅವರದ್ದೇ ಆದ ಆಡಿಯನ್ಸ್ ಇರುತ್ತಾರೆ. ತಮ್ಮ ಫ್ಯಾನ್ಸ್‌ಗೆ ಖುಷಿಕೊಡಬಲ್ಲ, ಚೆನ್ನಾಗಿ ಸಿನಿಮಾ ಮಾಡಬಲ್ಲ ಅನ್ನೊ ನಂಬಿಕೆ ಇದ್ರೆ ಮಾತ್ರ ಅಂಥವರ ಜೊತೆ ಸಿನಿಮಾ ಮಾಡ್ತಾರೆ. ಅಂಥದ್ದೊಂದು ನಂಬಿಕೆ ಸುದೀಪ್ ಅವರಿಗೂ ನನ್ನ ಮೇಲಿತ್ತು. ಇಂಥದ್ದೊಂದು ಐಡಿಯಾವನ್ನು ಸುದೀಪ್ ಅವರ ಮುಂದಿಟ್ಟಾಗ ತುಂಬ ಖುಷಿಯಿಂದಲೇ ಅದನ್ನ ಒಪ್ಪಿಕೊಂಡರು.
• ನೀವು ಕಂಡಂತೆ ಪೈಲ್ವಾನ್ ಆಗಲು ಸುದೀಪ್ ತಯಾರಿ ಹೇಗಿತ್ತು?
ಬಹುಶಃ ನಾನು ಇಲ್ಲಿಯವರೆಗೆ ಕಂಡಂತೆ ಸುದೀಪ್ ಈ ಥರದ ಪ್ರಯೋಗವನ್ನು ಹಿಂದೆಂದೂ ಮಾಡಿಲ್ಲ. ಜಿಮ್ ಕಡೆಗೇ ಹೋಗದಿದ್ದವರು, ಚಿತ್ರದ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಲು ಸುಮಾರು 8 ತಿಂಗಳು ಜಿಮ್‌ಗೆ ಹೋಗಿದ್ದಾರೆ, ಸ್ವಿಮ್ ಮಾಡಿದ್ದಾರೆ ಪೈಲ್ವಾನ್ ಆಗಿ ಕಾಣಲು ಏನೇನು ಕಸರತ್ತು ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದಾರೆ. ಪಾತ್ರಕ್ಕಾಗಿ ಅವರು ತೊಡಗಿಸಿಕೊಳ್ಳುವ ರೀತಿಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಬೇಕು…
• ನಿಮ್ಮ ಪ್ರಕಾರ ಪೈಲ್ವಾನ್ ಸಿನಿಮಾದ ಹೈಲೈಟ್ಸ್ ಏನೇನು?
ಸಿನಿಮಾದಲ್ಲಿ ಪ್ರತಿಯೊಂದು ಅಂಶಗಳು ತೆರೆಮೇಲೆ ಹೈಲೈಟ್ಸ್ ಆಗಿ ಕಾಣಲಿದೆ. ಇಲ್ಲಿಯವರೆಗೂ ಸುದೀಪ್ ಕಾಣಿಸಿಕೊಂಡಿರದ ರೀತಿ, ಅವರ ಗೆಟಪ್, ಮ್ಯಾನರಿಸಂ, ಡೈಲಾಗ್ಸ್ ಡೆಲಿವರಿ. ಇನ್ನು ತಾಂತ್ರಿಕವಾಗಿ ಹೇಳುವುದಾದ್ರೆ, ಸಾಂಗ್ಸ್, ಸಿನಿಮಾಟೋಗ್ರಫಿ, ಲೊಕೇಷನ್ಸ್, ಆರ್ಟ್ ವರ್ಕ್ಸ್, ದೊಡ್ಡ ಕಲಾವಿದರ ತಾರಾಗಣ, ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.
• ಹಾಗಾದ್ರೆ ಕಿಚ್ಚನ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಳ್ಳಬಹುದು…
ಖಂಡಿತಾ. ಸುದೀಪ್ ಅವರ ಅಭಿಮಾನಿಗಳಿಗಂತೂ ಪೈಲ್ವಾನ್ ಹೊಸ ಥರದ ಅನುಭವ ನೀಡುತ್ತದೆ ಅನ್ನೋದರಲ್ಲಿ ಅನುಮಾನವಿಲ್ಲ. ಕಳೆದ ಎರಡು ದಶಕಗಳಲ್ಲಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಮಢಿರದ ಗೆಟಪ್‌ನಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ವಿಷಯವೇ ಅವರ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ, ನಿರೀಕ್ಷೆಯನ್ನು ಮೂಡಿಸಿದೆ. ಕಾಮನ್ ಮ್ಯಾನ್ ಕೂಡ ಸುದೀಪ್ ಲುಕ್ ನೋಡಿ ಮಾತನಾಡುತ್ತಿದ್ದಾರೆ.
• ಪೈಲ್ವಾನ್ ಬೇರೆ ಭಾಷೆಗಳಿಗೆ ಡಬ್ ಆಗಲಿದೆ ಎಂಬ ಸುದ್ದಿ ಬಗ್ಗೆ ಏನಂತೀರಾ..?
ಸುಮಾರು 7-8 ಭಾಷೆಗಳಲ್ಲಿ ಚಿತ್ರವನ್ನು ಡಬ್ ಮಾಡುವ ಯೋಚನೆ ನಮಗಿದೆ. ಡಬ್ಬಿಂಗ್‌ಗೂ ಬೇರೆ ಬೇರೆ ಭಾಷೆಗಳಿಂದ ಉತ್ತಮ ಬೇಡಿಕೆ ಬರುತ್ತಿದೆ. ಅದರ ಬಗ್ಗೆ ಇನ್ನೂ ಚರ್ಚೆ, ಮಾತುಕತೆ ನಡೆಯುತ್ತಿದೆ. ಅದರ ಬಗ್ಗೆ ಈಗಲೇ ಏನೂ ಹೇಳಲಾಗದು. ಆದರೆ, ಪೈಲ್ವಾನ್ ಬೇರೆ ಭಾಷೆಗಳಿಗೆ ಡಬ್ ಆಗುವುದಂತೂ ನಿಜ.
• ಬೇರೆ ಭಾಷೆಗಳಿಗೂ ಸುದೀಪ್ ಅವರೇ ಡಬ್ ಮಾಡುತ್ತಾರಾ?
ಸುದೀಪ್ ಅವರ ಧ್ವನಿಯನ್ನೇ ಬಯಸುವ ದೊಡ್ಡ ಫ್ಯಾನ್ಸ್ ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಇರುವುದರಿಂದ, ಆ ಭಾಷೆಗಳಲ್ಲಿ ಸುದೀಪ್ ಅವರ ಪಾತ್ರಗಳಿಗೆ ಅವರೇ ಡಬ್ ಮಾಡುವ ಸಾಧ್ಯತೆ ಇದೆ. ಇನ್ನುಳಿದಂತೆ ಇತರೆ ಭಾಷೆಗಳಿಗೆ ಬೇರೆಯವರು ಡಬ್ಬಿಂಗ್ ಮಾಡಬಹುದು.
• ಸದ್ಯ ಪೈಲ್ವಾನ್ ಸಿನಿಮಾ ಯಾವ ಹಂತದಲ್ಲಿದೆ? ಯಾವಾಗ ರಿಲೀಸ್?
ಈಗಾಗಲೇ ಪೈಲ್ವಾನ್ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಜೊತೆಗೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ನಡೆಯುತ್ತಿದೆ. ಇನ್ನು ಚಿತ್ರದಲ್ಲಿ ಕೇವಲ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಅದನ್ನು ಚಿತ್ರೀಕರಿಸಿದರೆ ಚಿತ್ರ ಸಂಪೂರ್ಣವಾಗುತ್ತದೆ. ನಮ್ಮ ಪ್ಲಾನ್ ಪ್ರಕಾರ ಇದೇ ಏಪ್ರಿಲ್‌ಗೆ ರಿಲೀಸ್ ಮಾಡಬೇಕೆಂದುಕೊಂಡಿದ್ದೇವೆ.
• ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್, ಟೀಸರ್ಗೆ ಪ್ರತಿಕ್ರಿಯೆ ಹೇಗಿದೆ?
ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗ್ತಿದೆ. ಅದರಲ್ಲೂ ಸುದೀಪ್ ಅಭಿಮಾನಿಗಳು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯ ಚಿತ್ರರಂಗದಲ್ಲಿರುವ ಅವರ ಫ್ಯಾನ್ಸ್ ಕೂಡ ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಒಟ್ಟಾರೆ ಭಾಷೆಗಳ ಗಡಿಯನ್ನ ದಾಟಿ ಪೈಲ್ವಾನ್ ಎಲ್ಲರನ್ನೂ ರೀಚ್ ಆಗ್ತಿದೆ.
• ಪೈಲ್ವಾನ್ ಸುದೀಪ್ ಸಿನಿಕೆರಿಯರ್‌ನ ಬಿಗ್ ಬಜೆಟ್ ಸಿನಿಮಾ ಎಂಬ ಮಾತಿದೆಯಲ್ಲ?
ಸಿನಿಮಾದ ಬಜೆಟ್ ಬಗ್ಗೆ ನಾನೇನು ಹೇಳಲಾರೆ. ಏಕೆಂದರೆ, ಪ್ರತಿವರ್ಷ ಕೂಡ ಜನರ ಇನ್‌ಕಮ್ ಹೇಗೆ ಏರಿಕೆಯಾಗುತ್ತಾ ಹೋಗುತ್ತದೆಯೋ, ಹಾಗೆಯೇ ವರ್ಷದಿಂದ ವರ್ಷಕ್ಕೆ ಸಿನಿಮಾದಿಂದ ಸಿನಿಮಾಕ್ಕೆ ಬಜೆಟ್ ಕೂಡ ಏರಿಕೆಯಾಗುತ್ತ ಹೋಗೋದು ಸಹಜ. ಹಾಗಾಗಿ ಈ ವರ್ಷ ಒಂದು ಬಿಗ್ ಬಜೆಟ್ ಸಿನಿಮಾವಾದ್ರೆ, ಮುಂದಿನ ವರ್ಷ ಅದಕ್ಕೂ ಬಿಗ್ ಬಜೆಟ್ ಸಿನಿಮಾ ಇನ್ನೊಂದು ಆಗುತ್ತದೆ. ಆದ್ರೆ ಪೈಲ್ವಾನ್ ಸಿನಿಮಾದ ಸಬೆjಕ್ಟ್ ಏನೇನೂ ಡಿಮ್ಯಾಂಡ್ ಮಾಡಿದೆಯೊ, ಅದೆಲ್ಲವನ್ನೂ ಸಿನಿಮಾಕ್ಕೆ ಕೊಟ್ಟಿದ್ದೇವೆ, ಅನ್ನೋದನ್ನು ಮಾತ್ರ ಹೇಳುತ್ತೇನೆ.
• ಪೋಸ್ಟರ್‌ನಲ್ಲಿ ಕುಸ್ತಿ, ಬಾಕ್ಸಿಂಗ್ ಏರಡೂ ಕಾಣುತ್ತಿದೆಯಲ್ಲ. ಏನಿದರ ಗುಟ್ಟು?
ನಾನು ಮೊದಲೇ ಹೇಳಿದಂತೆ ಪೈಲ್ವಾನ್ ಒಂದು ನ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ. ಇದರಲ್ಲಿ ಸುದೀಪ್ ಮೂರು ಡಿಫರೆಂಟ್ ಲುಕ್‌ನಲ್ಲಿ ಕಾಣುತ್ತಾರೆ. ಪೋಸ್ಟರ್‌ನಲ್ಲಿ ರಿವಿಲ್ ಆಗಿರುವ ಲುಕ್ ಸಿನಿಮಾದಲ್ಲೂ ಇರುತ್ತದೆ. ಅದು ಏನು ಅನ್ನೋದನ್ನ ಈಗಲೆ ಹೇಳಲಾರೆ. ಅದನ್ನ ಸ್ಕ್ರೀನ್ ಮೇಲೆ ನೋಡಬೇಕು.
• ಪೈಲ್ವಾನ್‌ನ ಅಖಾಡದಲ್ಲಿರುವ ಇತರ ಕಲಾವಿದರು ಯಾರು?
ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಅವರಿಗೆ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದಾರೆ. ಉಳಿದಂತೆ ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್ ಕಬೀರ್, ಅಪ್ಪಣ್ಣ ಹೀಗೆ ದೊಡ್ಡ ಕಲಾವಿದರ ತಾರಾಬಳಗವಿದೆ. ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರೂ, ಹೊಸ ಲುಕ್‌ನಲ್ಲಿ ಕಾಣುತ್ತಾರೆ. ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ.
ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.