ಆಸೆ ಈಡೇರಿದ ಖುಷಿ…

ನನಸಾಯ್ತು ಶೇಷಾದ್ರಿ ಕನಸು

Team Udayavani, Nov 29, 2019, 5:45 AM IST

dd-36

“ಬಹುಶಃ ಅವರಿದಿದ್ದರೆ ಈ ಕನಸು ಖಂಡಿತ ಈಡೇರುತ್ತಿರಲಿಲ್ಲ…’
– ಹೀಗೆ ಹೇಳಿದ್ದು ನಿರ್ದೇಶಕ ಪಿ.ಶೇಷಾದ್ರಿ. ಅವರು ಹೇಳಿಕೊಂಡಿದ್ದು, ಕಾರಂತರ ಬಗ್ಗೆ. ಹೌದು, ಶೇಷಾದ್ರಿ ಹಾಗೆ ಹೇಳ್ಳೋಕೆ ಕಾರಣ, “ಮೂಕಜ್ಜಿಯ ಕನಸುಗಳು’. ಜ್ಞಾನಪೀಠ ಪ್ರಶಸ್ತಿ ಪಡೆದ ಈ ಕಾದಂಬರಿ ಇದೀಗ ಶೇಷಾದ್ರಿ ನಿರ್ದೇಶನದಲ್ಲಿ ಚಿತ್ರವಾಗಿದೆ. ಬಿಡುಗಡೆಯೂ ಇಂದು ಆಗಿದೆ. “ಮೂಕಜ್ಜಿಯ ಕನಸುಗಳು’ ಕುರಿತು ಶೇಷಾದ್ರಿ ಒಂದಷ್ಟು ಹೇಳುತ್ತಾ ಹೋಗಿದ್ದು ಹೀಗೆ. “ಶಿವರಾಮ ಕಾರಂತರ ಸಾಹಿತ್ಯ ಪರಿಣಾಮಕಾರಿಯಾಗಿದೆ. ಅವರ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವುದು ದೊಡ್ಡ ಸಾಹಸ ಮಾಡಿದಂತೆ. ಆ ಕ್ರಮ ನಿಜಕ್ಕೂ ದೊಡ್ಡದು. ನಾನು ಅವರ ಕಾದಂಬರಿ ಆಧಾರಿತ “ಬೆಟ್ಟದ ಜೀವ’ ಸಿನಿಮಾ ಕೈಗೆತ್ತಿಕೊಂಡಿದ್ದು ಜೇನುಗೂಡಿಗೆ ಕಲ್ಲು ಹೊಡೆದಂಗೆ. ಆದರೂ, ಅದನ್ನು ತುಂಬ ಸೂಕ್ಷ್ಮತೆಯಿಂದ ಮಾಡಿದ್ದರಿಂದಲೇ ಈಗ “ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಸಿನಿಮಾ ಮಾಡಲು ಸಾಧ್ಯವಾಗಿದೆ. ಹಾಗಂತ, ಇದು ಸುಲಭವಾಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಚಿತ್ರಕಥೆಯ ಕೆಲಸ ನಡೆಯುತ್ತಲೇ ಇತ್ತು. ಕಾರಂತರು 1930 ರ ಆಸುಪಾಸಿನಲ್ಲೇ ಸಿನಿಮಾ ನಿರ್ದೇಶಿಸಿದ್ದರು. “ಡೊಮಿಂಗೋ’, “ಭೂತರಾಜ್ಯ’ ಸಿನಿಮಾ ಮಾಡಿದ್ದರು. ನಂತರ 70 ರ ದಶಕದಲ್ಲಿ “ಮಲಯ ಮಕ್ಕಳು’ ಎಂಬ ಚಿತ್ರ ಕೂಡ ಬಂದಿತ್ತು. ಬಹುಶಃ ಅವರು ಇಂದು ಇದ್ದಿದ್ದರೆ, ನಾನು ಅವರ “ಬೆಟ್ಟದ ಜೀವ’, “ಮೂಕಜ್ಜಿಯ ಕನಸುಗಳು’ ಚಿತ್ರ ಮಾಡಲು ಆಗುತ್ತಿರಲಿಲ್ಲವೆನೋ? ಅವರ ಸಾಹಿತ್ಯವನ್ನು ಸಿನಿಮಾಗೆ ಅಳವಡಿಸುವುದು ತುಸು ಕಷ್ಟವೇ. ಆದರೂ ಮಾಡಿದ್ದೇನೆ. ಮನ್ನಣೆ ಕೂಡ ಸಿಕ್ಕಿದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 3 ದಶಕವಾಗಿದೆ. ಸ್ವತಂತ್ರ ನಿರ್ದೇಶಕನಾಗಿ ಎರಡು ದಶಕ ಕಳೆದಿದ್ದೇನೆ. “ಮೂಕಜ್ಜಿಯ ಕನಸುಗಳು’ ನನ್ನ 11 ನೇ ಚಿತ್ರ. ನಾನು ಕಾರಂತರ “ಬೆಟ್ಟದ ಜೀವ’ ಮಾಡುವ ಸಂದರ್ಭದಲ್ಲೇ “ಮೂಕ್ಕಜ್ಜಿಯ ಕನಸುಗಳು’ ಮೇಲೆ ಗಮನ ಹರಿಸಿದ್ದೆ. ಎಲ್ಲರೂ ಕಾರಂತರ ಕಾದಂಬರಿ ಸಿನಿಮಾ ಮಾಡೋದು ಟಫ್ ಅಂತ ಹೇಳುತ್ತಿದ್ದರು.

ಅದು ನಿಜ ಕೂಡ. “ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷಗಳಾಗಿವೆ. ಈ ಸಂಭ್ರಮವನ್ನು ಸಾಹಿತ್ಯ ಕ್ಷೇತ್ರದಲ್ಲಿ ಕಾಣಲಿಲ್ಲ. ದೃಶ್ಯಮಾಧ್ಯಮದಲ್ಲಾದರೂ ಕಾಣುವ ಅವಕಾಶ ಸಿಗುತ್ತಿದೆ. ಹಾಗಾಗಿ, ಈ ವಾರ ಚಿತ್ರ ಬಿಡುಗಡೆ ಆಗುತ್ತಿದೆ. ಸಾಮಾನ್ಯವಾಗಿ ಇಂತಹ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂಬ ಆರೋಪವಿದೆ. ಹಾಗಂತ ಈ ರೀತಿಯ ಚಿತ್ರಗಳು
ಶತದಿನ ಕಾಣಲ್ಲ. ಆದರೆ, ಒಂದು ವಾರ ಪ್ರದರ್ಶನ ಕಂಡು, ಪ್ರೇಕ್ಷಕರಿಗೆ ತಲುಪಿದರೆ ಅದೇ ನಮ್ಮ ಹೆಮ್ಮೆ.

ಈ ಚಿತ್ರವನ್ನು ಬೆಂಗಳೂರು ಸೇರಿದಂತೆ ಮಂಗಳೂರು, ಕುಂದಾಪುರ, ಧಾರವಾಡ ಇತರೆ ಕಡೆ ರಿಲೀಸ್‌ ಮಾಡಲಾಗುತ್ತಿದೆ. ಇದು ಸಾಂಪ್ರದಾಯಕ ಬಿಡುಗಡೆ ಅಲ್ಲದಿದ್ದರೂ, ಒಳ್ಳೆಯ ಚಿತ್ರವನ್ನು ಸಾಧ್ಯವಾದಷ್ಟು ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ಉದ್ದೇಶ ನಮ್ಮದು. “ಮೂಕಜ್ಜಿ’ ಪಠ್ಯವೂ ಹೌದು. ಸಾಹಿತ್ಯಾಸಕ್ತರು, ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂಬ ಆಸೆ ಇದೆ. ಈಗಾಗಲೇ ಎಲ್ಲಾ ಕಾಲೇಜುಗಳಿಗೂ “ಮೂಕಜ್ಜಿಯ ಕನಸುಗಳು’ ಚಿತ್ರ ವೀಕ್ಷಿಸಬೇಕೆಂಬ ಮನವಿ ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸಹ ಸಲಹೆ ಕೊಟ್ಟಿದ್ದಾರೆ’ ಎಂದು ವಿವರ ಕೊಡುತ್ತಾರೆ ಶೇಷಾದ್ರಿ.

“ಮೂಕಜ್ಜಿಯ ಕನಸುಗಳು’ ಕಾದಂಬರಿ ಓದಿದ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ ಇರುತ್ತೆ. ನಾನು ಸಹ ನಾಟಕ ನೋಡಿದ್ದೆ. ಆ ಪಾತ್ರಕ್ಕೆ ಯಾರು ಸರಿಯಾದ ಆಯ್ಕೆ ಎಂಬ ಪ್ರಶ್ನೆಯೂ ಇತ್ತು. ಯಾಕೆಂದರೆ, ಆ ಪಾತ್ರಕ್ಕೆ ಹಣ್ಣು ಹಣ್ಣಾಗಿರುವಂತಹ ಮುದುಕಿಯೇ ಆಗಬೇಕಿತ್ತು. ಯಾರನ್ನೇ ಕೇಳಿದರೂ, ಜಯಶ್ರೀ ಇದ್ದಾರಲ್ಲ ಅನ್ನೋರು. ಕೊನೆಗೆ ಜಯಶ್ರೀ ಆಯ್ಕೆ ನಿಜಕ್ಕೂ ಹೆಮ್ಮೆ ಎನಿಸಿತು. ಪಾತ್ರಕ್ಕೆ ಜೀವ ತುಂಬಿದ್ದಾರೆ. ನನ್ನ ಕನಸು ಈಡೇರಿದ ಖುಷಿ ಇದೆ’ ಎಂಬ ನಗು ಹೊರಹಾಕುತ್ತಾರೆ ಶೇಷಾದ್ರಿ.

ವಿಭ

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.