ಹ್ಯಾಪಿ ಫೆಬ್ರವರಿ; ಅಧಿಕ ವರ್ಷ ಅಧಿಕ ದಾಖಲೆ
Team Udayavani, Feb 28, 2020, 5:29 AM IST
29 ದಿನ 34 ಸಿನಿಮಾ…!
-ಇದು ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಚಿತ್ರಗಳ ವಿಷಯ. ಹೌದು. ಜನವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಕಂಡಿದ್ದವು. ಆದರೆ, ಗೆಲುವಿನ ಸಂಖ್ಯೆ ಮಾತ್ರ ಹೇಳ ಹೆಸರಿಲ್ಲದಂತಿತ್ತು. ಫೆಬ್ರವರಿ ತಿಂಗಳು ಬರುತ್ತಿದ್ದಂತೆಯೇ, ಒಂದಷ್ಟು ಹೊಸಬರ ಚಿತ್ರಗಳು ಗೆಲುವಿನ ಗೆರೆ ಮುಟ್ಟಿದ್ದು ಸುಳ್ಳಲ್ಲ. ಹಾಗೆ ನೋಡಿದರೆ, ಫೆಬ್ರವರಿಯಲ್ಲಿ ಬರೋಬ್ಬರಿ 34 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಹಾಗೆ ಲೆಕ್ಕ ಹಾಕಿದರೆ, ದಿನಕ್ಕೊಂದು ಸಿನಿಮಾ ಬಂದ ಹಾಗೆ. ಹಾಗಂತ, ಫೆಬ್ರವರಿ ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ತಕ್ಕಮಟ್ಟಿಗೆ ಒಂದಷ್ಟು ಹೊಸಬರ ಚಿತ್ರಗಳು ಖುಷಿಪಡಿಸಿದವು. ಮಿಕ್ಕಂತೆ ಹಾಗೆ ಬಂದ ಸಿನಿಮಾಗಳು ಹಾಗೆ ಹೊರಟುಬಿಟ್ಟವು.
ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಕಾದಿದ್ದವು. ಬಂದ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಒಂದಷ್ಟು ಗೆಲುವಿನ ಮಂದಹಾಸ ಮೂಡಿಸಿದರೆ, ಇನ್ನಷ್ಟು ಚಿತ್ರಗಳು ತಕ್ಕಮಟ್ಟಿಗಿನ ಸಮಾಧಾನಕ್ಕೆ ಕಾರಣವಾದವು. ಮೊದಲ ವಾರ ಒಂಬತ್ತು ಚಿತ್ರಗಳು, ಎರಡನೇ ವಾರ ಎಂಟು ಚಿತ್ರಗಳು, ಮೂರನೇ ವಾರ ಆರು ಸಿನಿಮಾಗಳು ಬಿಡುಗಡೆಯಾಗಿವೆ. ಈ ವಾರ ಲೆಕ್ಕಕ್ಕೆ ಆರು ಸಿನಿಮಾಗಳಿವೆ. ಲೆಕ್ಕಕ್ಕೆ ಸಿಗದ ಬೆರಳೆಣಿಕೆಯಷ್ಟು ಬಿಡುಗಡೆಯಾದ ಸಿನಿಮಾಗಳನ್ನೂ ಸೇರಿಸಿದರೆ, 34 ಪ್ಲಸ್ ಚಿತ್ರಗಳಾಗುತ್ತವೆ. ಈ ಪೈಕಿ ಭರವಸೆ ಮೂಡಿಸಿದ ಚಿತ್ರಗಳಿಗೇನೂ ಕಮ್ಮಿ ಇಲ್ಲ. ಸ್ಟಾರ್ ಚಿತ್ರಗಳು ಬಂದರೆ, ಹೊಸಬರ ಚಿತ್ರಗಳಿಗೆ ಸ್ವಲ್ಪ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು ಒಂದರ ಮೇಲೊಂದರಂತೆ ಬಿಡುಗಡೆ ಕಂಡ ಸಿನಿಮಾಗಳ ಪೈಕಿ ಸದ್ದು ಮಾಡಿದ ಚಿತ್ರಗಳೂ ಸಿಕ್ಕಿವೆ ಎಂಬುದೇ ಸಮಾಧಾನದ ಸಂಗತಿ.
ಫೆಬ್ರವರಿ ಮೊದಲ ವಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂಬತ್ತು ಚಿತ್ರಗಳು ತೆರೆಗೆ ಅಪ್ಪಳಿಸಿ ಚಿತ್ರರಂಗವನ್ನು ಒಂದಷ್ಟು ರಂಗೇರಿಸಿದವು. ಬಿಡುಗಡೆಯಾದ ಚಿತ್ರಗಳ ಪೈಕಿ “ಜಂಟಲ್‌ವುನ್’, “ದಿಯಾ’ ಹಾಗು “ಮಾಲ್ಗುಡಿ ಡೇಸ್’ ಚಿತ್ರಗಳ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದವು. ಅದಕ್ಕೂ ಮುನ್ನ ಬಿಡುಗಡೆಯಾಗಿದ್ದ “ಲವ್ ಮಾಕ್ಟೇಲ್’ ಚಿತ್ರ ಕೂಡ ಈವರೆಗೂ ಪ್ರದರ್ಶನ ಕಾಣುತ್ತಿದೆ ಅನ್ನುವುದು ಖುಷಿಯ ವಿಚಾರ. ಐಪಿಎಲ್ ಭಯಕ್ಕೆ ಸಿನಿಮಾಗಳನ್ನು ತರಾತುರಿಯಲ್ಲಿ ಬಿಡುಗಡೆ ಮಾಡಬೇಕು ಎಂಬ ಧಾವಂತದಲ್ಲಿ ಸಾಲು ಸಾಲು ಚಿತ್ರಗಳು ಚಿತ್ರಮಂದಿರವನ್ನು ಸ್ಪರ್ಶಿಸಿದರೂ, ಆ ಪೈಕಿ ಗಟ್ಟಿ ನೆಲೆ ಕಂಡ ಚಿತ್ರಗಳ್ಯಾವೂ ಇಲ್ಲ. ಆದರೆ, ಒಳ್ಳೆಯ ಮೆಚ್ಚುಗೆಗೆ ಪಾತ್ರವಾದವು ಅನ್ನುವುದು ಮಾತ್ರ ಸುಳ್ಳಲ್ಲ.
ಎರಡನೇ ವಾರದಲ್ಲಿ ಎಂಟು ಚಿತ್ರಗಳು ಎಂಟ್ರಿಕೊಟ್ಟವು. ಫೆ.14 ಪ್ರೇಮಿಗಳ ದಿನ ಎಂಬ ಕಾರಣಕ್ಕೆ ಒಂದಷ್ಟು ಹೊಸಬರು ಸಿನಿಮಾ ಬಿಡುಗಡೆಗೆ ಮುಂದಾದರು. ಸಾಲು ಸಾಲು ಸಿನಿಮಾಗಳು ಬಂದರೂ, ಪ್ರೇಕ್ಷಕರ ಕೊರತೆ ಮಾತ್ರ ಕಾಡಿದ್ದು ನಿಜ. ಆದರೂ, ಗೆಲುವಿನ ಭರವಸೆಯಲ್ಲೇ ಬಿಡುಗಡೆಯಾದ ಎಂಟು ಸಿನಿಮಾಗಳ ಪೈಕಿ “ಸಾಗುತ ದೂರ ದೂರ’ ಹಾಗು “ಡೆಮೊ ಪೀಸ್’ ಚಿತ್ರಗಳ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಇನ್ನುಳಿದಂತೆ ಆ ವಾರ ಬಂದ ಚಿತ್ರಗಳ್ಯಾವೂ ಸದ್ದು ಮಾಡಲಿಲ್ಲ.
ಆ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ, ಮೂರನೇ ವಾರದಲ್ಲೂ ಸಿನಿಮಾ ಬಿಡುಗಡೆಯ ಸಂಖ್ಯೆ ಕಡಿಮೆ ಆಗಲಿಲ್ಲ. ಒಂದು ಕಡೆ ಚಿತ್ರಮಂದಿರಗಳ ಸಮಸ್ಯೆ, ಇನ್ನೊಂದು ಕಡೆ ಪ್ರೇಕ್ಷಕರ ಕೊರತೆ ಇದ್ದರೂ ಆರು ಚಿತ್ರಗಳು ಪ್ರೇಕ್ಷಕನ ಎದುರು ಬಂದವು. ಆ ಪೈಕಿ “ದುನಿಯಾ’ ಸೂರಿ ನಿರ್ದೇಶನದ ಧನಂಜಯ್ ಅಭಿನಯದ “ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹಾಗೆಯೇ, ರಮೇಶ್ ಅರವಿಂದ್ ಅಭಿನಯದ ಆಕಾಶ್ ಶ್ರೀವಾತ್ಸವ್ ನಿರ್ದೇಶನದ “ಶಿವಾಜಿ ಸೂರತ್ಕಲ್’ ಚಿತ್ರಕ್ಕೂ ಪ್ರಶಂಸೆ ಸಿಕ್ಕಿತು. ಉಳಿದಂತೆ ಬಂದ ಸಿನಿಮಾಗಳು ಸುದ್ದಿಯಾಗಲಿಲ್ಲ.
ಈ ಸಿನಿಮಾ ಬಿಡುಗಡೆಯ ಪರ್ವ ಈ ವಾರಕ್ಕೂ (ಫೆ.28) ಮುಂದುವರೆದಿದೆ ಎಂಬುದನ್ನು ಗಮನಿಸಲೇಬೇಕು. ಹೌದು ಸದ್ಯಕ್ಕೆ ಘೋಷಣೆಯಾಗಿರುವ ಪ್ರಕಾರ ಈ ವಾರ ಕೂಡ ಆರು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಈ ಸಿನಿಮಾಗಳನ್ನು ಲೆಕ್ಕ ಹಾಕಿದರೆ 29 ಚಿತ್ರಗಳು ಬಿಡುಗಡೆಯಾದಂತೆ.
ಪ್ರಚಾರವಿಲ್ಲದೆಯೂ ಬೆರಳೆಣಿಕೆ ಚಿತ್ರಗಳು ತೆರೆಗೆ ಬಂದಿರುವುದೂ ಉಂಟು. ಅಂದಹಾಗೆ, ಈ ವಾರ “ಮಾಯ ಬಜಾರ್’, “ಬಿಚ್ಚುಗತ್ತಿ’, “ಅಸುರ ಸಂಹಾರ’, “ಜಗ್ಗಿ ಜಗನ್ನಾಥ’, “ಆನೆಬಲ’, “ಮಾಯಾ ಕನ್ನಡಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಹೊಸಬರ ಚಿತ್ರಗಳೇ ಹೆಚ್ಚು. ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳೆಂದರೆ, ಪುನೀತ್‌ರಾಜಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗಿರುವ “ಮಾಯಾ ಬಜಾರ್’ ಹಾಗು ಐತಿಹಾಸಿಕ ಸಿನಿಮಾ “ಬಿಚ್ಚುಗತ್ತಿ’. ಇವುಗಳ ಮೇಲೆ ಸಹಜವಾಗಿಯೇ ಕುತೂಹಲವಿದೆ. ಅದಕ್ಕೆ ಕಾರಣ, ಪುನೀತ್ ಬ್ಯಾನರ್‌ನ ಸಿನಿಮಾ ಅಂದಾಗ, ಕಥೆಗೆ ಹೆಚ್ಚು ಒತ್ತು ಕೊಡಲಾಗುತ್ತೆ. ಈಗಾಗಲೇ ಟೀಸರ್, ಟ್ರೇಲರ್ ಮತ್ತು ಪೋಸ್ಟರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದಲ್ಲಿ ವಾಸ್ತವ ಸತ್ಯಾಂಶಗಳಿವೆ. ಇನ್ನು, ಕೋಟೆ ನಾಡು ಚಿತ್ರದುರ್ಗದ ಭರಮಣ್ಣ ನಾಯಕ ಅವರ “ಬಿಚ್ಚುಗತ್ತಿ’ ಸಿನಿಮಾ ಕೂಡ ಸಾಕಷ್ಟು ಭರವಸೆ ಮೂಡಿಸಿದೆ. ಇದು ಬಿ.ಎಲ್.ವೇಣು ಅವರ ಕಾದಂಬರಿ ಆಧರಿತ ಸಿನಿಮಾ ಅನ್ನುವುದು ಒಂದೆಡೆಯಾದರೆ, ರಾಜವರ್ಧನ್ ಅವರ ಮೊದಲ ಐತಿಹಾಸಿಕ ಸಿನಿಮಾ ಎಂಬುದು ಇನ್ನೊಂದೆಡೆ. ಚಿತ್ರದಲ್ಲಿ ದಳವಾಯಿ ಮುದ್ದಣ್ಣ ಅವರ ಕುರಿತ ಕಥೆಯೂ ಮೂಡಿದೆ ಅನ್ನೋದು ಇನ್ನೊಂದು ವಿಶೇಷ. ಹಾಗಾಗಿ ಈ ಎರಡು ಸಿನಿಮಾಗಳು ಈ ವಾರದ ಭರವಸೆ ಎಂಬುದಂತೂ ನಿಜ. ಅದೇನೆ ಇರಲಿ, ಈ ವರ್ಷ ಫೆಬ್ರವರಿ ಅಧಿಕ ವರ್ಷ. ಹಾಗೆಯೇ ಸಿನಿಮಾ ಬಿಡುಗಡೆಯಲ್ಲೂ ಅಧಿಕ ದಾಖಲೆಯಂತೂ ಹೌದು.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.