ಹೊಸ ವರ್ಷಕ್ಕೆ ಹರಿಪ್ರಿಯಾ ಎಂಟು ಕನಸು
Team Udayavani, Jan 4, 2019, 12:30 AM IST
2019ರಲ್ಲಿ ಯಾವ ನಟಿಯ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದರೆ ಗಾಂಧಿನಗರ ಬೆರಳು ತೋರಿಸೋದು ಹರಿಪ್ರಿಯಾರತ್ತ. “ಏನ್ ಮೇಡಂ ನಿಮ್ದು, ಮೂರ್‍ನಾಲ್ಕು ಸಿನಿಮಾ ರಿಲೀಸ್ ಆಗುತ್ತಂತೆ’ ಎಂದರೆ, “ನಮ್ದು ಬಿಡಿ ಸಾರ್, ಹರಿಪ್ರಿಯಾ ಅವರದ್ದು ಈ ವರ್ಷ ಎಂಟು ಸಿನಿಮಾ ರಿಲೀಸ್ ಆಗುತ್ತೆ’ ಎಂದು ನಟಿಯರು ಹೇಳುವ ಮಟ್ಟಕ್ಕೆ ಹರಿಪ್ರಿಯಾ ಅವರು ಬಿಝಿಯಾಗಿದ್ದಾರೆ. ಈ ವರ್ಷ ಹರಿಪ್ರಿಯಾ ನಟಿಸಿದ ಬರೋಬ್ಬರಿ ಎಂಟು ಸಿನಿಮಾಗಳು ತೆರೆಕಾಣುತ್ತಿವೆ. “ಕುರುಕ್ಷೇತ್ರ’, “ಬೆಲ್ ಬಾಟಮ್’, “ಸೂಜಿದಾರ’, “ಎಲ್ಲಿದ್ದೇ ಇಲ್ಲಿ ತನಕ’, “ಡಾಟರ್ ಆಫ್ ಪಾರ್ವಮ್ಮ’, “ಬಿಚ್ಚುಗತ್ತಿ’, “ಕನ್ನಡ್ ಗೊತ್ತಿಲ್ಲ’ ಹಾಗೂ “ಕಥಾಸಂಗಮ’ ಚಿತ್ರಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಇದು ಈಗಾಗಲೇ ಹರಿಪ್ರಿಯಾ ಒಪ್ಪಿಕೊಂಡು ನಟಿಸಿರುವ ಹಾಗೂ ನಟಿಸುತ್ತಿರುವ ಚಿತ್ರಗಳು. ಇದರಲ್ಲಿ ಬಹುತೇಕ ಎಲ್ಲಾ ಚಿತ್ರಗಳು ಈ ವರ್ಷವೇ ತೆರೆಕಾಣಲಿದ್ದು, ಹರಿಪ್ರಿಯಾ ಖುಷಿಯನ್ನು ಹೆಚ್ಚಿಸಲಿವೆ.
ಹರಿಪ್ರಿಯಾ ಖುಷಿಯಾಗಿರಲು ಕಾರಣ ಕೇವಲ ಸಂಖ್ಯೆಯಷ್ಟೇ ಅಲ್ಲ, ಬದಲಾಗಿ ಎಂಟು ಸಿನಿಮಾಗಳಲ್ಲಿ ಸಿಕ್ಕಿರುವ ಎಂಟು ವಿಭಿನ್ನ ಪಾತ್ರಗಳು ಸಿಕ್ಕಿವೆ. “ಕುರುಕ್ಷೇತ್ರ’ದಲ್ಲಿ ದರ್ಶನ್ ಜೊತೆ ನೃತ್ಯಾಗಾರ್ತಿಯಾದರೆ, “ಬೆಲ್ ಬಾಟಮ್’ನಲ್ಲಿ ಕುಸುಮ ಎಂಬ 80ರ ದಶಕದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. “ಸೂಜಿದಾರ’ದಲ್ಲಿ ಸೂಕ್ಷ್ಮ ಸಂವೇದನೆಯ ಪಾತ್ರವಾದರೆ, “ಡಾಟರ್ ಆಫ್ ಪಾರ್ವತಮ್ಮ’ದಲ್ಲಿ ಖಡಕ್ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಸಿನಿಮಾಕ್ಕಿಂತ ಇನ್ನೊಂದು ಸಿನಿಮಾದಲ್ಲಿ ಅವರ ಪಾತ್ರ ಭಿನ್ನವಾಗಿದೆ. ಈ ನಂಬಿಕೆಯೊಂದಿಗೆ ಹರಿಪ್ರಿಯಾ ಎದುರು ನೋಡುತ್ತಿದ್ದಾರೆ. “ಈ ವರ್ಷ ನನ್ನ ಎಂಟು ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ನಾನು ಖುಷಿಪಡುತ್ತಿಲ್ಲ. ಬದಲಾಗಿ ಬಿಡುಗಡೆಯಾಗುತ್ತಿರುವ ಅಷ್ಟೂ ಸಿನಿಮಾಗಳಲ್ಲೂ ನನ್ನ ಪಾತ್ರ ಭಿನ್ನವಾಗಿದೆ ಎಂಬ ಖುಷಿ ಇದೆ. ಪ್ರತಿ ಪಾತ್ರವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಹರಿಪ್ರಿಯಾ ಮಾತು. ಹರಿಪ್ರಿಯಾ ಅವರಿಗೆ 2018 ಕೂಡಾ ತುಂಬಾ ಖುಷಿ ಕೊಟ್ಟ ವರ್ಷವಂತೆ. “ಕಳೆದ ವರ್ಷ ಆರಂಭದಲ್ಲೇ ನನ್ನ ತೆಲುಗು ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಆ ನಂತರ ಬಿಡುಗಡೆಯಾದ ಚಿತ್ರಗಳ ಬಗ್ಗೆಯೂ ಮೆಚ್ಚುಗೆ ಸಿಕ್ಕಿತು. ಜೊತೆಗೆ ಸಾಕಷ್ಟು ಪಾತ್ರಗಳು ಹುಡುಕಿಕೊಂಡು ಬಂದುವು. ಈ ವರ್ಷ ಕೂಡಾ ಅದೇ ನಿರೀಕ್ಷೆಯಲ್ಲಿದ್ದೇನೆ. ಹಾಗಂತ ನಾನು ಯಾವುದನ್ನು ಪ್ಲ್ರಾನ್ ಮಾಡಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಿದ್ದೇನೆ’ ಎನ್ನುವುದು ಹರಿಪ್ರಿಯಾ ಮಾತು.
ಹೊಸ ವರ್ಷದಲ್ಲಿ ಹರಿಪ್ರಿಯಾ ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಅದು ಬರವಣಿಗೆ. ಹೌದು, ಹರಿಪ್ರಿಯಾ ಬರವಣಿಗೆಯತ್ತ ಮನಸ್ಸು ಮಾಡಿದ್ದಾರೆ. ಈಗಾಗಲೇ ಬರವಣಿಗೆ ಆರಂಭಿಸಿದ್ದಾರೆ. “ಬರವಣಿಗೆ ಮಾಡಬೇಕೆಂಬುದು ನನ್ನ ಬಹುವರ್ಷಗಳ ಕನಸು. ಅದನ್ನು ಈಗ ಆರಂಭಿಸಿದ್ದೇನೆ. ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತೋ ನೋಡಬೇಕು’ ಎನ್ನುವ ಹರಿಪ್ರಿಯಾ, “ಬಿಚ್ಚುಗತ್ತಿ’ ಚಿತ್ರಕ್ಕಾಗಿ ಕುದುರೆ ಸವಾರಿ ಕೂಡಾ ಕಲಿಯುತ್ತಿದ್ದಾರೆ. ಇನ್ನು, ಹರಿಪ್ರಿಯಾಗೆ ಬಿಡುವಿನ ವೇಳೆಯಲ್ಲಿ ಫ್ಯಾಮಿಲಿ ಜೊತೆ ಟೂರ್ ಹೋಗುವುದೆಂದರೆ ತುಂಬಾ ಇಷ್ಟವಂತೆ. ಈ ಮೂಲಕ ರಿಫ್ರೆಶ್ ಆಗುತ್ತಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.